
ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಮಿಂಚುತ್ತಿದ್ದು, ಅವರ ಅದ್ಭುತ ನೃತ್ಯ ಮತ್ತು ಗ್ಲಾಮರ್ ಹಾಡಿನ ಹೈಲೈಟ್ ಆಗಿದೆ.
ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಚಿತ್ರದ ‘ಅಸಲಿ ಸಿನಿಮಾ’ ಹಾಡು ನೋಡಿ...
ಚಿತ್ರವು 'ಅಭಿ' ಮತ್ತು 'ಸೀತಾ' ಎಂಬ ಇಬ್ಬರು ಹದಿಹರೆಯದವರ ಜೀವನ ಹಾಗೂ ಅವರ ನಡುವಿನ ಭಾವನಾತ್ಮಕ ಪಯಣವನ್ನು ಅನಾವರಣಗೊಳಿಸುತ್ತದೆ. ಇದು ಪರಿಪೂರ್ಣ ಫ್ಯಾಮಿಲಿ ಡ್ರಾಮಾ ಶೈಲಿಯಲ್ಲಿದೆ.
ನಟ, ನಿರ್ದೇಶಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಸೀತಾ ಪಯಣ’ ಈಗ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಬಿರುಸಿನಿಂದ ಸಾಗಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ‘ಅಸಲಿ ಸಿನಿಮಾ..’ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ʻಆಹಾ ಓಹೋ ಅಂತಾರೋ... ಚೆಲುವಿ ನೀನೇ ಅಂತಾರೋ...ʼ ಎಂಬ ಆಕರ್ಷಕ ಸಾಲುಗಳ ಮೂಲಕ ಈ ಹಾಡು ಸಂಗೀತ ಪ್ರಿಯರ ಮನಗೆದ್ದಿದೆ. ಖ್ಯಾತ ಸಾಹಿತಿ ಭರತ್ ಜನನಿ ಈ ಹಾಡಿಗೆ ಸಾಹಿತ್ಯ ಬರೆಯುವ ಮೂಲಕ ಸ್ಯಾಂಡಲ್‌ವುಡ್‌ಗೆ ಪದರ್ಪಣೆ ಮಾಡಿದ್ದಾರೆ. ಗಾಯಕಿ ಅನುರಾಧಾ ಭಟ್ ಈ ಹಾಡನ್ನು ಹಾಡಿದ್ದಾರೆ.
ಚಿತ್ರದ ಹಾಡು ಇಲ್ಲಿದೆ..
ತಾರಾಗಣದಲ್ಲಿ ಯಾರಿದ್ದಾರೆ?
ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಮಿಂಚುತ್ತಿದ್ದು, ಅವರ ಅದ್ಭುತ ನೃತ್ಯ ಮತ್ತು ಗ್ಲಾಮರ್ ಹಾಡಿನ ಹೈಲೈಟ್ ಆಗಿದೆ. ನಾಯಕನಾಗಿ ನಿರಂಜನ್ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟರಾದ ಸತ್ಯರಾಜ್, ಪ್ರಕಾಶ್ ರೈ ಮತ್ತು ಕೋವೈ ಸರಳಾ ಅಭಿನಯಿಸಿದ್ದಾರೆ. ವಿಶೇಷವಾಗಿ, ಅರ್ಜುನ್ ಸರ್ಜಾ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಸೋದರಳಿಯ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ಫೆಬ್ರವರಿ 14ಕ್ಕೆ ಅದ್ಧೂರಿ ಬಿಡುಗಡೆ
‘ಸೀತಾ ಪಯಣ’ ಚಿತ್ರವು ಪ್ರೇಮಿಗಳ ದಿನದ ಅಂಗವಾಗಿ ಫೆಬ್ರವರಿ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕಥೆ-ಚಿತ್ರಕಥೆ- ನಿರ್ಮಾಣ ಮತ್ತು ನಿರ್ದೇಶನ ಅರ್ಜುನ್ ಸರ್ಜಾ ಅವರದ್ದು. ಅನೂಪ್ ರೂಬೆನ್ಸ್ ಸಂಗೀತ, ಜಿ. ಬಾಲಮುರುಗನ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ, ಶ್ರಸ್ತಿ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

