ರೆಡಿಯಾಯ್ತಾ ʻ3 ಈಡಿಯಟ್ಸ್ ಸೀಕ್ವೆಲ್‌? ರ‍್ಯಾಂಚೋ, ಫರ್ಹಾನ್, ರಾಜು ಕಂಬ್ಯಾಕ್?
x

3 ಈಡಿಯಟ್ಸ್ 2

ರೆಡಿಯಾಯ್ತಾ ʻ3 ಈಡಿಯಟ್ಸ್' ಸೀಕ್ವೆಲ್‌? ರ‍್ಯಾಂಚೋ, ಫರ್ಹಾನ್, ರಾಜು ಕಂಬ್ಯಾಕ್?

ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್ ಹಿರಾನಿ '3 ಈಡಿಯಟ್ಸ್' ಸೀಕ್ವೆಲ್ ಕಡೆಗೆ ಗಮನ ಹರಿಸಿದ್ದು, ಈಗಾಗಲೇ ಅದರ ಚಿತ್ರಕಥೆಯನ್ನು ಅಂತಿಮಗೊಳಿಸಿದ್ದಾರೆ.


Click the Play button to hear this message in audio format

ಬಾಲಿವುಡ್ ಸಿನಿಮಾ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ '3 ಈಡಿಯಟ್ಸ್' ಚಿತ್ರದ ಮುಂದುವರಿದ ಭಾಗ ಕೊನೆಗೂ ಅಧಿಕೃತಗೊಳ್ಳುವ ಹಂತಕ್ಕೆ ಬಂದಿದೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ʻದಾದಾಸಾಹೇಬ್ ಫಾಲ್ಕೆʼ ಅವರ ಜೀವನಚರಿತ್ರೆಯ ಚಿತ್ರಕಥೆಯು ಅವರಿಗೆ ಸಂಪೂರ್ಣ ತೃಪ್ತಿ ನೀಡದ ಕಾರಣ, ಆ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದು, ಹೆಚ್ಚು ಬೇಡಿಕೆಯಿರುವ '3 ಈಡಿಯಟ್ಸ್' ಸೀಕ್ವೆಲ್ ಕಡೆಗೆ ಗಮನ ಹರಿಸಿದ್ದಾರೆ ಎಂದು ವರದಿಯಾಗಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು '3 ಈಡಿಯಟ್ಸ್' ಸೀಕ್ವೆಲ್‌ಗಾಗಿ ಚಿತ್ರಕಥೆಯನ್ನು ಅಂತಿಮಗೊಳಿಸಿದ್ದಾರೆ. ಈ ಹೊಸ ಕಥೆಯು ಮೂಲ ಚಿತ್ರದ ಅಂತ್ಯದ ನಂತರದ 15 ವರ್ಷಗಳ ಅವಧಿಯಲ್ಲಿ ಆ ಪಾತ್ರಗಳ ಜೀವನದಲ್ಲಿ ಆಗಿರುವ ಬದಲಾವಣೆಗಳ ಸುತ್ತ ಸುತ್ತಲಿದೆ.

ಸೀಕ್ವೆಲ್‌ನ ಅತ್ಯಂತ ಸಂತೋಷದ ವಿಷಯವೆಂದರೆ, ಮೂಲ ಚಿತ್ರದ ಪ್ರಮುಖ ಪಾತ್ರಗಳಾದ ಅಮೀರ್ ಖಾನ್, ಕರೀನಾ ಕಪೂರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಹಿರಾನಿ ಅವರು ಈ ಹೊಸ ಕಥೆಯು ಕೂಡ ಮೊದಲ ಚಿತ್ರದಷ್ಟೇ ಹಾಸ್ಯಮಯ, ಭಾವನಾತ್ಮಕ ಮತ್ತು ಅರ್ಥಪೂರ್ಣವಾಗಿರುವ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಆದರೆ, ಮೊದಲ ಚಿತ್ರದ ಇತರ ಪ್ರೀತಿಯ ಪಾತ್ರಗಳಾದ ಓಮಿ ವೈದ್ಯ (ಚತುರ್), ಬೊಮನ್ ಇರಾನಿ (ವೈರಸ್), ಮೋನಾ ಸಿಂಗ್ (ಮೋನಾ), ಮತ್ತು ಜಾವೇದ್ ಜಾಫ್ರಿ (ರಾಂಛೋ) ಅವರು ಸೀಕ್ವೆಲ್‌ನಲ್ಲಿ ಇರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

'3 ಈಡಿಯಟ್ಸ್ 2' ಸಿನಿಮಾವನ್ನು ತರಲು ಹಿರಾನಿ ಹಲವು ವರ್ಷಗಳಿಂದ ಯೋಚಿಸುತ್ತಿದ್ದರು, ಆದರೆ ಅದು ಮೂಲ ಚಿತ್ರದ ಫೇಮ್‌ಗೆ ತಕ್ಕಂತೆ ಇರಬೇಕು ಎಂಬುದು ಅವರ ಆಶಯವಾಗಿತ್ತು. ಕಳೆದ ವರ್ಷ ಒಂದು ಕಾರ್ಯಕ್ರಮದಲ್ಲಿ ಅವರು ಸೀಕ್ವೆಲ್‌ಗೆ ಸೂಕ್ತವಾದ ಅನನ್ಯ ಕಲ್ಪನೆ ಮೇಲೆ ಕೆಲಸ ಮಾಡುತ್ತಿರುವುದಾಗಿ ಸುಳಿವು ನೀಡಿದ್ದರು.

ಇದೇ ವೇಳೆ, ರಾಜ್‌ಕುಮಾರ್ ಹಿರಾನಿ ಅವರು 'ಮುನ್ನಾ ಭಾಯ್' ಸರಣಿಯ ಮೂರನೇ ಭಾಗಕ್ಕಾಗಿ ಅಭಿಜಾತ್ ಜೋಶಿ ಮತ್ತು ವಿಧು ವಿನೋದ್ ಚೋಪ್ರಾ ಅವರೊಂದಿಗೆ ಸೇರಿ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ. ಹೀಗಾಗಿ, '3 ಈಡಿಯಟ್ಸ್' ಚಿತ್ರದ ನಾಲ್ವರು ಸ್ನೇಹಿತರು 15 ವರ್ಷಗಳ ನಂತರ ಮತ್ತೊಂದು ಹೊಸ ಸಾಹಸಕ್ಕಾಗಿ ಒಂದಾಗುತ್ತಿರುವುದು ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದೆ.


Read More
Next Story