ಟಾಕ್ಸಿಕ್ ಅಬ್ಬರಕ್ಕೆ ಇನ್ನು ಕೇವಲ 45 ದಿನಗಳು ಮಾತ್ರ ಬಾಕಿ
x

ಚಿತ್ರದಲ್ಲಿ ಯಶ್ ಜೊತೆಗೆ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ  ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ಕನ್ನಡದ ನಟಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

'ಟಾಕ್ಸಿಕ್' ಅಬ್ಬರಕ್ಕೆ ಇನ್ನು ಕೇವಲ 45 ದಿನಗಳು ಮಾತ್ರ ಬಾಕಿ

ಕೆಜಿಎಫ್ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಮಾರ್ಚ್‌ 19ರಂದು ಬಿಡುಗಡೆಯಾಗಲಿದೆ.


Click the Play button to hear this message in audio format

ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿರುವ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಸಿನಿಮಾ ಬಿಡುಗಡೆಗೆ ಇಂದಿನಿಂದ ಸರಿಯಾಗಿ 45 ದಿನಗಳು ಬಾಕಿ ಇವೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ ಚಿತ್ರವು ಬರುವ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಯುಗಾದಿ ಹಬ್ಬದ ಹೊಸ್ತಿಲಲ್ಲೇ ಸಿನಿಮಾ ತೆರೆಗೆ ಬರುತ್ತಿದ್ದು, ಸತತ ರಜೆಗಳ ಲಾಭ ಪಡೆಯಲು ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿದೆ. ಈ ಚಿತ್ರವು ಕೇವಲ ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್‌ನಲ್ಲಿಯೂ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವುದು ವಿಶೇಷ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಕ್ರೈಂ ಡ್ರಾಮಾದಲ್ಲಿ ಗೋವಾದ ಮಾದಕ ದ್ರವ್ಯ ಜಾಲದ ಕಥೆ ಇದೆ ಎನ್ನಲಾಗುತ್ತಿದ್ದು, ಯಶ್, ʼರಾಯʼ ಎಂಬ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿನ ಮೇಕಿಂಗ್ ಮತ್ತು ಯಶ್ ಅವರ ಸ್ಟೈಲಿಶ್ ಲುಕ್ ಸಿನಿರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇತ್ತೀಚೆಗೆ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಸಿನಿಮಾದ ಟೀಸರ್‌ ಬಿಡುಗಡೆಯಾಗಿ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್‌ನಲ್ಲಿರುವ `ಕಾರಿನ ಒಳಗಿನ ಹಸಿ ಬಿಸಿ ದೃಶ್ಯ' ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿತ್ತು. ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ಈ ಟೀಸರ್ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿತ್ತು. ಟೀಸರ್‌ನಲ್ಲಿರುವ ದೃಶ್ಯಗಳು ಅಶ್ಲೀಲ ಮತ್ತು ಕಾಮೋದ್ರೇಕಕಾರಿಯಾಗಿದ್ದು, ಇವು ಮಹಿಳೆಯರ ಘನತೆಗೆ ಕುಂದು ತರುವುದಲ್ಲದೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಅಲ್ಲದೆ ಇದು ಕನ್ನಡದ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಇತ್ತ ಟೀಸರ್‌ನಲ್ಲಿನ ದೃಶ್ಯಗಳ ಕುರಿತು ಬಂದ ದೂರಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ, ಈ ಟೀಸರ್ ನೇರವಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವುದರಿಂದ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳಿಗೆ ಮಾತ್ರ ಸೆನ್ಸಾರ್ ಪ್ರಮಾಣಪತ್ರ ಅನ್ವಯಿಸುತ್ತದೆ ಎಂದು ಬೋರ್ಡ್ ತಿಳಿಸಿತ್ತು.

`ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದು ಮುಂಬರುವ ಭಾರತೀಯ ಅವಧಿಯ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಆಗಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಇದನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿದ್ದಾರೆ. ನಿಮಾವು ಮಾರ್ಚ್ 19 ರಂದು ತೆರೆಕಾಣಲಿದೆ. ಅದೇ ದಿನ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಕೂಡ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ಏರ್ಪಡಲಿದೆ.

Read More
Next Story