ರಶ್ಮಿಕಾ ಮದುವೆಗೆ ರಿಶಬ್‌ ಶೆಟ್ಟಿಗೆ ಆಹ್ವಾನ ಇದ್ಯಾ? ಡಿವೈನ್‌ ಸ್ಟಾರ್‌ ಹೇಳಿದ್ದೇನು?
x

 ರಶ್ಮಿಕಾ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರ ಏನು ಗೊತ್ತಾ 

ರಶ್ಮಿಕಾ ಮದುವೆಗೆ ರಿಶಬ್‌ ಶೆಟ್ಟಿಗೆ ಆಹ್ವಾನ ಇದ್ಯಾ? ಡಿವೈನ್‌ ಸ್ಟಾರ್‌ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ರಿಷಬ್ ಯಾವುದೇ ಆಸಕ್ತಿ ತೋರಲಿಲ್ಲ. ಹಿಂದೆಯೂ ಕೂಡ 'ಶೆಟ್ಟಿ ಗ್ಯಾಂಗ್' ಹಾಗೂ ರಶ್ಮಿಕಾ ನಡುವಿನ ಶೀತಲ ಸಮರದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.


Click the Play button to hear this message in audio format

ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಬುಧವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದರು. ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ರಿಷಬ್, ರಾಯರ ಮೂಲ ಬೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಲು ಮುಂದಾದ ರಿಷಬ್ ಶೆಟ್ಟಿ ಅವರಿಗೆ ಸಿನಿಮಾ ಹಾಗೂ ಮಂತ್ರಾಲಯ ಭೇಟಿಯ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಆದರೆ, ಇದೇ ವೇಳೆ ವರದಿಗಾರರೊಬ್ಬರು ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ವಿಷಯವನ್ನು ಪ್ರಸ್ತಾಪಿಸಿದರು. "ರಶ್ಮಿಕಾ ಅವರ ಮದುವೆಗೆ ನಿಮಗೆ ಆಮಂತ್ರಣ ಬಂದಿದೆಯೇ?" ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆಯೇ ರಿಷಬ್ ಶೆಟ್ಟಿ ಅವರ ಮುಖಭಾವ ಬದಲಾಯಿತು. ಯಾವುದೇ ಪ್ರತಿಕ್ರಿಯೆ ನೀಡದ ರಿಷಬ್, ಕ್ಷಣಾರ್ಧದಲ್ಲಿ ಮೌನಕ್ಕೆ ಶರಣಾದರು. ತಕ್ಷಣವೇ ಕ್ಯಾಮೆರಾಗಳ ಮುಂದೆ ಕೈ ಮುಗಿದು, "ಓಕೆ ಬೈ... ಥಾಂಕ್ಯೂ" ಎಂದು ಹೇಳುತ್ತಾ ನಗುತ್ತಲೇ ಅಲ್ಲಿಂದ ಹೊರನಡೆದರು.

ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ರಿಷಬ್ ಯಾವುದೇ ಆಸಕ್ತಿ ತೋರಲಿಲ್ಲ. ಹಿಂದೆಯೂ ಕೂಡ 'ಶೆಟ್ಟಿ ಗ್ಯಾಂಗ್' ಹಾಗೂ ರಶ್ಮಿಕಾ ನಡುವಿನ ಶೀತಲ ಸಮರದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಇದೀಗ ರಶ್ಮಿಕಾ ಮದುವೆ ವಿಷಯ ಕೇಳುತ್ತಿದ್ದಂತೆಯೇ ರಿಷಬ್ ಅಲ್ಲಿಂದ ಜಾರಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರ ವಿವಾಹ ಸಮಾರಂಭ ಉದಯಪುರದಲ್ಲಿ ನಡೆಯುತ್ತಿದ್ದು,ಇದರ ಬೆನ್ನಲ್ಲೇ ಅವರ ಜೀವನದ ಒಂದು ಪ್ರಮುಖ ಘಟ್ಟವಾಗಿದ್ದ ನಟ ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥದ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಸ್ಯಾಂಡಲ್‌ವುಡ್‌ನ ಅಂದಿನ ಕ್ಯೂಟ್ ಜೋಡಿ ಎಂದೇ ಗುರುತಿಸಿಕೊಂಡಿದ್ದ ಈ ಜೋಡಿಯ ಸಿನಿನಾ ಪಯಣದ ಜೊತೆಗೆ ಪ್ರೇಮ ಪಯಣವೂ ಕುತೂಹಲಕಾರಿಯಾಗಿತ್ತು.

ಪ್ರೀತಿ ಅರಳಿದ್ದು 'ಕಿರಿಕ್ ಪಾರ್ಟಿ' ಸೆಟ್‌ನಲ್ಲಿ

ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕರ್ಣ (ರಕ್ಷಿತ್) ಮತ್ತು ಸಾನ್ವಿ (ರಶ್ಮಿಕಾ) ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಇಬ್ಬರ ವಯಸ್ಸಿನ ಅಂತರ 13 ವರ್ಷಗಳಾಗಿದ್ದರೂ, ಪರಸ್ಪರ ಇಷ್ಟಪಟ್ಟಿದ್ದ ಈ ಜೋಡಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಲು ನಿರ್ಧರಿಸಿದ್ದರು.

ಅದ್ದೂರಿ ನಿಶ್ಚಿತಾರ್ಥ

ಜುಲೈ 3, 2017 ರಂದು ಕೊಡಗಿನ ವಿರಾಜಪೇಟೆಯ 'ಸೆರೆನಿಟಿ ಹಾಲ್'ನಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಸುಮಾರು 2500 ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಭಾಗವಹಿಸಿ ಶುಭ ಹಾರೈಸಿದ್ದರು. ಪೀಚ್ ಕಲರ್ ಗೌನ್‌ನಲ್ಲಿ ರಶ್ಮಿಕಾ ಮಿಂಚಿದರೆ, ರಕ್ಷಿತ್ ಸೂಟ್‌ನಲ್ಲಿ ಕಂಗೊಳಿಸಿದ್ದರು.

ಧಿಡೀರ್ ಬ್ರೇಕಪ್‌ಗೆ ಕಾರಣವೇನು?

ನಿಶ್ಚಿತಾರ್ಥವಾದ ಒಂದು ವರ್ಷದ ನಂತರ, ಅಂದರೆ ಸೆಪ್ಟೆಂಬರ್ 2018 ರಲ್ಲಿ ಈ ಜೋಡಿ ತಮ್ಮ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತ್ತು.ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಅವರಿಗೆ ತೆಲುಗು ಚಿತ್ರರಂಗದಿಂದ ದೊಡ್ಡ ಮಟ್ಟದ ಅವಕಾಶಗಳು ಬಂದವು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮದುವೆ ಬೇಡ ಎಂಬ ನಿರ್ಧಾರಕ್ಕೆ ಅವರು ಬಂದಿದ್ದರು ಎನ್ನಲಾಗಿದೆ. ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಉಂಟಾಗಿತ್ತು ಎಂದು ವರದಿಯಾಗಿತ್ತು. ಕೆಲವು ವರದಿಗಳ ಪ್ರಕಾರ, ಮದುವೆ ಹಾಗೂ ಆರ್ಥಿಕ ವಿಚಾರಗಳಲ್ಲಿ ಉಭಯ ಕುಟುಂಬಗಳ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗಿದ್ದವು ಎನ್ನಲಾಗಿದೆ.

Read More
Next Story