Wedding Of Virosh| ವಿಜಯ್ ಕೈ ಹಿಡಿದ ನ್ಯಾಷನಲ್ ಕ್ರಶ್: ಏಳು ವರ್ಷಗಳ ಪ್ರೀತಿಗೆ ಸಿಕ್ಕಿತು ಅಧಿಕೃತ ಮುದ್ರೆ
x

ದಕ್ಷಿಣ ಭಾರತದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸಂಭ್ರಮ ಶುರುವಾಗಿದೆ.

Wedding Of Virosh| ವಿಜಯ್ ಕೈ ಹಿಡಿದ 'ನ್ಯಾಷನಲ್ ಕ್ರಶ್': ಏಳು ವರ್ಷಗಳ ಪ್ರೀತಿಗೆ ಸಿಕ್ಕಿತು ಅಧಿಕೃತ ಮುದ್ರೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಂದು ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರುತ್ತಿದ್ದಾರೆ. ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಈ ವಿವಾಹ ನಡೆಯಲಿದೆ


Click the Play button to hear this message in audio format

ಬಹುಕಾಲದ ಕುತೂಹಲಕ್ಕೆ ತೆರೆ ಬಿದ್ದಿದ್ದು, ದಕ್ಷಿಣ ಭಾರತದ ಮೋಸ್ಟ್ ಅಡ್ಮೈರ್ಡ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಂದು ಹಸೆಮಣೆ ಏರುತ್ತಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಕರೆದ 'ವಿರೋಶ್' ಹೆಸರಿನಲ್ಲೇ ಈ ವಿವಾಹ ಮಹೋತ್ಸವ ನಡೆಯುತ್ತಿದ್ದು, ರಾಜಸ್ಥಾನದ ಉದಯಪುರದ ಐಷಾರಾಮಿ 'ಐಟಿಸಿ ಮೆಮೆಂಟೋಸ್' ಹೋಟೆಲ್ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸುಮಾರು ಏಳು ವರ್ಷಗಳ ಸುದೀರ್ಘ ಡೇಟಿಂಗ್ ಬಳಿಕ ಈ ಜೋಡಿ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಹಳದಿ ಶಾಸ್ತ್ರವು ಹೋಳಿ ಹಬ್ಬದಂತೆ ಅತ್ಯಂತ ವರ್ಣರಂಜಿತವಾಗಿ ನಡೆದಿದ್ದು, ಆಶಿಕಾ ರಂಗನಾಥ್ ಸೇರಿದಂತೆ ಹಲವು ಆಪ್ತರು ಈ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಎರಡು ವಿಭಿನ್ನ ಸಂಪ್ರದಾಯದ ಮದುವೆ

ಈ ಜೋಡಿಯ ವಿವಾಹದ ವಿಶೇಷತೆಯೆಂದರೆ, ಉಭಯ ಕುಟುಂಬಗಳ ಸಂಪ್ರದಾಯಕ್ಕೆ ಗೌರವ ನೀಡಿ ಎರಡು ಬಾರಿ ಮದುವೆ ನಡೆಯುತ್ತಿದೆ. ಇಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ವಿಜಯ್ ಅವರ ಕುಟುಂಬದ ಸಂಪ್ರದಾಯದಂತೆ ತೆಲುಗು ಹಿಂದೂ ವಿಧಿವಿಧಾನಗಳ ಮೂಲಕ ಮೊದಲ ವಿವಾಹ ನೆರವೇರಲಿದೆ. ತದನಂತರ, ಸಂಜೆ ರಶ್ಮಿಕಾ ಮಂದಣ್ಣ ಅವರ ಕೊಡಗಿನ ಸಂಪ್ರದಾಯದಂತೆ 'ಕೊಡವ' ಶೈಲಿಯಲ್ಲಿ ಎರಡನೇ ಬಾರಿ ವಿವಾಹ ಕಾರ್ಯಕ್ರಮಗಳು ಜರುಗಲಿವೆ. ಈ ಮೂಲಕ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಈ ಜೋಡಿ ಸಂಭ್ರಮಿಸುತ್ತಿದೆ.

ವಿವಾಹ ಪೂರ್ವ ಕಾರ್ಯಕ್ರಮಗಳು

ಕಳೆದ ಮೂರು ದಿನಗಳಿಂದಲೇ ಉದಯಪುರದಲ್ಲಿ ಸಡಗರ ಮನೆಮಾಡಿದೆ. ಮೊದಲ ದಿನ ಜಪಾನೀಸ್ ಶೈಲಿಯ ವಿಶೇಷ ಔತಣಕೂಟದೊಂದಿಗೆ ಸಂಭ್ರಮ ಆರಂಭವಾಗಿತ್ತು. ನಂತರ 'ವಿರೋಶ್ ಪ್ರೀಮಿಯರ್ ಲೀಗ್' ಹೆಸರಿನಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಗಳನ್ನು ಆಯೋಜಿಸಿ ಕುಟುಂಬದವರು ಮತ್ತು ಸ್ನೇಹಿತರು ಎಂಜಾಯ್ ಮಾಡಿದ್ದಾರೆ. ಇನ್ನು ಸಂಗೀತ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ತಮ್ಮ ಜನಪ್ರಿಯ 'ಪುಷ್ಪ-2' ಚಿತ್ರದ 'ಅಂಗಾರೋನ್' ಹಾಡಿಗೆ ವಿಜಯ್ ಅವರಿಗಾಗಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಹಳದಿ ಶಾಸ್ತ್ರವು ಹೋಳಿ ಹಬ್ಬದಂತೆ ಅತ್ಯಂತ ವರ್ಣರಂಜಿತವಾಗಿ ನಡೆದಿದ್ದು, ಆಶಿಕಾ ರಂಗನಾಥ್ ಸೇರಿದಂತೆ ಹಲವು ಆಪ್ತರು ಈ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಆಪ್ತರಿಗಷ್ಟೇ ಆಹ್ವಾನ

ಸಮಾರಂಭವು ಅತ್ಯಂತ ಖಾಸಗಿಯಾಗಿದ್ದು, ಕೇವಲ 100 ರಿಂದ 200 ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ನಿರ್ದೇಶಕ ತರುಣ್ ಭಾಸ್ಕರ್, ಸಂದೀಪ್ ರೆಡ್ಡಿ ವಂಗಾ, ನಟಿ ಇಶಾ ರೆಬ್ಬಾ ಮತ್ತು ಆಶಿಕಾ ರಂಗನಾಥ್ ಈಗಾಗಲೇ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಇಂದು ಉದಯಪುರದಲ್ಲಿ ಮದುವೆ ಮುಗಿದ ಬಳಿಕ, ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಭವ್ಯವಾದ ಆರತಕ್ಷತೆ ನಡೆಯಲಿದೆ.

Read More
Next Story