
ಹಿರಿಯ ನಟ ದೊಡ್ಡಣ್ಣ ತಮ್ಮ ನಿಧನದ ಸುಳ್ಳು ಸುದ್ದಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನನ್ನ ಸಾವಿನ ಸುದ್ದಿ ಸುಳ್ಳು: ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಹಿರಿಯ ನಟ ದೊಡ್ಡಣ್ಣ
ಹಿರಿಯ ನಟ ದೊಡ್ಡಣ್ಣ ತಮ್ಮ ನಿಧನದ ಸುಳ್ಳು ಸುದ್ದಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವು ಸಂಪೂರ್ಣ ಆರೋಗ್ಯ ಮತ್ತು ನೆಮ್ಮದಿಯಿಂದ ಇರುವುದಾಗಿ ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಇತ್ತೀಚೆಗೆ ಹಬ್ಬಿದ್ದ ನಿಧನದ ಸುಳ್ಳು ಸುದ್ದಿಗೆ ಸ್ವತಃ ಅವರೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವಿನ್ನೂ ಬದುಕಿದ್ದು, ಸಂಪೂರ್ಣ ಆರೋಗ್ಯವಾಗಿದ್ದೀನಿ ಎಂದು ತಿಳಿಸುವ ಮೂಲಕ ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದಿದ್ದಾರೆ.
ತಮ್ಮ ಸಾವಿನ ವದಂತಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ದೊಡ್ಡಣ್ಣ ಅವರು, ತಾವು ಬೆಳಗ್ಗೆ ಎದ್ದು ಮಲಗುವ ಮೊದಲೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ತಪ್ಪು ಮಾಹಿತಿಯಿಂದಾಗಿ ಬೆಳಿಗ್ಗೆಯಿಂದ ನಿರಂತರವಾಗಿ ಫೋನ್ ಕರೆಗಳು ಬರುತ್ತಿದ್ದು, ಮುಖ ತೊಳೆಯಲೂ ಪುರುಸೊತ್ತಿಲ್ಲದಂತೆ ಅಭಿಮಾನಿಗಳು ಮತ್ತು ಹಿತೈಷಿಗಳು ಆತಂಕದಿಂದ ಕರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಾವು ಅತ್ಯಂತ ನೆಮ್ಮದಿ ಮತ್ತು ಆರೋಗ್ಯದಿಂದ ಇರುವುದಾಗಿ ಧೈರ್ಯ ತುಂಬಿರುವ ಅವರು, ಈ ಗೊಂದಲಗಳಿಗೆ ಮುಕ್ತಾಯ ಹಾಡಲು ಮತ್ತು ಸತ್ಯವನ್ನು ಜನರಿಗೆ ತಲುಪಿಸಲು ಈ ವಿಡಿಯೋ ಸ್ಪಷ್ಟನೆ ನೀಡುತ್ತಿರುವುದಾಗಿ ಪ್ರಕಟಿಸಿದ್ದಾರೆ.

