Goddess of fortune who made my life as vast as the ocean: Rishabh Shetty wishes his wife Pragati
x

ನಟ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ

ನನ್ನ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ಸೌಭಾಗ್ಯ ದೇವತೆ': ಪತ್ನಿ ಪ್ರಗತಿಗೆ ರಿಷಬ್ ಶೆಟ್ಟಿ ಶುಭಾಶಯ

ತಮ್ಮ ದಾಂಪತ್ಯ ಜೀವನದ ಒಂಬತ್ತು ವರ್ಷಗಳ ಪ್ರಯಾಣವನ್ನು ಸ್ಮರಿಸಿರುವ ರಿಷಬ್, "ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ," ಎಂದು ಬರೆದುಕೊಂಡಿದ್ದಾರೆ.


Click the Play button to hear this message in audio format

ಸ್ಯಾಂಡಲ್​ವುಡ್​ನ 'ಡಿವೈನ್ ಸ್ಟಾರ್' ಹಾಗೂ ಬಹುಬೇಡಿಕೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಇಂದು (ಸೋಮವಾರ) ತಮ್ಮ 9ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ರಿಷಬ್ ಶೆಟ್ಟಿ ತಮ್ಮ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಪ್ರೀತಿಯಿಂದ ಶುಭಾಶಯ ಕೋರಿದ್ದು, ತಮ್ಮ ಯಶಸ್ಸಿನ ಹಿಂದಿನ ಶಕ್ತಿ ಯಾರು ಎಂಬುದನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ.

ತಮ್ಮ ದಾಂಪತ್ಯ ಜೀವನದ ಒಂಬತ್ತು ವರ್ಷಗಳ ಪ್ರಯಾಣವನ್ನು ಸ್ಮರಿಸಿರುವ ರಿಷಬ್, "ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ," ಎಂದು ಬರೆದುಕೊಂಡಿದ್ದಾರೆ.

'ನನ್ನನ್ನು ನಾನಾಗಿಸಿದ್ದು ನೀನು'

ದಾಂಪತ್ಯದಲ್ಲಿ ನೋವು-ನಲಿವು, ಸರಸ-ವಿರಸಗಳಿದ್ದರೂ ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಸಮರಸವೇ ಮುಖ್ಯ ಎಂದು ರಿಷಬ್ ಹೇಳಿದ್ದಾರೆ. "ಆ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ. ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು," ಎಂದು ಅವರು ಪತ್ನಿ ಪ್ರಗತಿ ಅವರನ್ನು ಕೊಂಡಾಡಿದ್ದಾರೆ.

ನನ್ನ ಸೂಪರ್ ಪವರ್!

ಕನ್ನಡದ ಸಾಲುಗಳ ಜೊತೆಗೆ ಇಂಗ್ಲಿಷ್‌ನಲ್ಲಿಯೂ ಪ್ರೀತಿಯ ಸಂದೇಶ ಹಂಚಿಕೊಂಡಿರುವ ಅವರು, "ನನ್ನನ್ನು ಮುನ್ನಡೆಸುವ ಶಕ್ತಿ, ನಾನು ನಂಬಿರುವ ಧೈರ್ಯ ಮತ್ತು ನನ್ನ ಸೂಪರ್ ಪವರ್ ನೀನು. ನಿನ್ನ ಕೈ ಹಿಡಿದಾಗ ಬದುಕು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ," ಎಂದು ಬರೆದು ಪತ್ನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ರಿಷಬ್ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Read More
Next Story