ಬಾಕ್ಸ್ ಆಫೀಸ್‌ನಲ್ಲಿ ಕೂಲಿ ಸಿನಿಮಾ ಗಳಿಕೆ ಇಳಿಮುಖ
x

ಕೂಲಿ ಸಿನಿಮಾ

ಬಾಕ್ಸ್ ಆಫೀಸ್‌ನಲ್ಲಿ ಕೂಲಿ ಸಿನಿಮಾ ಗಳಿಕೆ ಇಳಿಮುಖ

ಕೂಲಿ ಬಿಡುಗಡೆಯಾದ ಮೊದಲ ವಾರದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ 222.5 ಕೋಟಿ ರೂ.ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಮೊದಲ ಕೆಲವು ದಿನಗಳಲ್ಲಿ ದೊಡ್ಡ ಮೊತ್ತ ಗಳಿಸಿದ ಸಿನಿಮಾದ ಗಳಿಕೆ ನಿಧಾನಕ್ಕೆ ಇಳಿಮುಖವಾಗಿದೆ.


ಲೊಕೇಶ್ ಕನಕರಾಜ್ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ಕೂಲಿ' ಮೊದಲ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಇದೀಗ ಸಿನಿಮಾದ ಗಳಿಕೆ ಇಳಿಮುಖವಾಗಿದೆ.

ಕೂಲಿ ಬಿಡುಗಡೆಯಾದ ಮೊದಲ ವಾರದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ 222.5 ಕೋಟಿ ರೂ.ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಮೊದಲ ಕೆಲವು ದಿನಗಳಲ್ಲಿ ದೊಡ್ಡ ಮೊತ್ತ ಗಳಿಸಿದ ಸಿನಿಮಾದ ಗಳಿಕೆ ನಿಧಾನಕ್ಕೆ ಇಳಿಮುಖವಾಗಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಚಿತ್ರವು ಬಿಡುಗಡೆಯಾದ 7ನೇ ದಿನದಂದು ಸುಮಾರು 6.5 ಕೋಟಿ ರೂ. ಗಳಿಸಿದೆ. ಮಂಗಳವಾರ ಚಿತ್ರವು 9.5 ಕೋಟಿ ರೂ. ಗಳಿಸಿತ್ತು.

ಕೂಲಿ ಚಿತ್ರ ಬಿಡುಗಡೆಯಾದ ಮೊದಲ ದಿನ 65 ಕೋಟಿ ರೂ., ಎರಡನೇ ದಿನ54.75 ಕೋಟಿ ರೂ., ಮೂರನೇ ದಿನ 39.5 ಕೋಟಿ ರೂ., ನಾಲ್ಕನೇ ದಿನ 35.25 ಕೋಟಿ ರೂ., ಐದನೇ ದಿನ 12 ಕೋಟಿ ರೂ., ಆರನೇ ದಿನ 9.5 ಕೋಟಿ ರೂ. ಮತ್ತು ಅಂತಿಮವಾಗಿ 7ನೇ ದಿನ 6.5 ಕೋಟಿ ರೂ. ಗಳಿಕೆ ಕಂಡಿದೆ.

ಮೊದಲ ಕೆಲವು ದಿನಗಳ ನಂತರ ಚಿತ್ರದ ಗಳಿಕೆ ಇಳಿಮುಖವಾಗಿದ್ದರೂ ಒಂದು ವಾರದಲ್ಲಿ 220 ಕೋಟಿ ರೂ. ಗಡಿ ದಾಟಿರುವುದು ಗಮನಾರ್ಹ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ 'ವಾರ್ 2' ಚಿತ್ರದ ಬಿಡುಗಡೆಯಿಂದಾಗಿ ಕೂಲಿ ಸಿನಿಮಾಗೆ ಸ್ಪರ್ಧೆ ಎದುರಾಗಿದೆ.

ಈ ಆಕ್ಷನ್ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಸೌಬಿನ್ ಶಾಹಿರ್, ಶ್ರುತಿ ಹಾಸನ್ ಮತ್ತು ರಚಿತಾ ರಾಮ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ, ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನ ಈ ಸಿನಿಮಾಕ್ಕೆ ಇದೆ.

Read More
Next Story