ಮದುವೆ ಬಳಿಕ ಮೊದಲ ಬಾರಿಗೆ ತವರು ಮನೆಗೆ ರಶ್ಮಿಕಾ-ವಿಜಯ್ ಭೇಟಿ: ಕೊಡವ ಭಾಷೆಯಲ್ಲಿ ಧನ್ಯವಾದ
x
ಕೊಡಿಗೆ ಬಂದಿದ್ದ ರಶ್ಮಿಕಾ ಮಂದಣ್ಣ.

ಮದುವೆ ಬಳಿಕ ಮೊದಲ ಬಾರಿಗೆ ತವರು ಮನೆಗೆ ರಶ್ಮಿಕಾ-ವಿಜಯ್ ಭೇಟಿ: ಕೊಡವ ಭಾಷೆಯಲ್ಲಿ ಧನ್ಯವಾದ

ರಶ್ಮಿಕಾ ತಂದೆ ಮದನ್‌ ಮಂದಣ್ಣ ಹಾಗೂ ತಾಯಿ ಸುಮನ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ 'ಸೆರಿನಿಟಿ' (Serenity) ಬಂಗಲೆಯನ್ನು ಅಧಿಕೃತವಾಗಿ ಮಗಳ ಹೆಸರಿಗೆ ಬರೆದುಕೊಟ್ಟಿದ್ದಾರೆ.


ಬಾಲಿವುಡ್​ ಹಾಗೂ ಟಾಲಿವುಡ್‌ನ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್‌ ದೇವರಕೊಂಡ ದಂಪತಿ ಮದುವೆಯಾದ ಬಳಿಕ ಮೊದಲ ಬಾರಿಗೆ ಕೊಡಗಿನ ಮಡಿಕೇರಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ಹಸೆಮಣೆ ಏರಿರುವ ಈ ತಾರಾ ಜೋಡಿ, ತವರಿಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಸಡಗರದಿಂದ ಸಮಯ ಕಳೆಯುತ್ತಿದ್ದಾರೆ.


ತಮ್ಮ ಹುಟ್ಟೂರಿಗೆ ಆಗಮಿಸಿದ ಸಂಭ್ರಮದಲ್ಲಿರುವ ನ್ಯಾಷನಲ್ ಕ್ರಶ್ ರಶ್ಮಿಕಾ, ಅಲ್ಲಿನ ಜನರ ಪ್ರೀತಿ ಮತ್ತು ಆತ್ಮೀಯತೆಗೆ ಮನಸೋತಿದ್ದಾರೆ. ತಮ್ಮ ಮಾತೃಭಾಷೆ ಕೊಡವದಲ್ಲೇ (ಮನದುಂಬನ ನಲ್ಲಾಮೆನ ಬಯ್ಯಿಂದವ) ಮಾತನಾಡುವ ಮೂಲಕ ಸ್ಥಳೀಯರು ಹಾಗೂ ಅಭಿಮಾನಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಶ್ಮಿಕಾ ಅವರ ಮಾತೃಭಾಷಾ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೋಟಿ ಬೆಲೆಯ 'ಸೆರಿನಿಟಿ' ಬಂಗಲೆ ಗಿಫ್ಟ್!

ಮಗಳು ಮತ್ತು ಅಳಿಯನ ಭೇಟಿಯ ಹಿನ್ನೆಲೆಯಲ್ಲಿ ರಶ್ಮಿಕಾ ಕುಟುಂಬದವರು ಮಡಿಕೇರಿಯಲ್ಲಿ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದರು. ಇದೇ ಶುಭ ಸಂದರ್ಭದಲ್ಲಿ ರಶ್ಮಿಕಾ ತಂದೆ ಮದನ್‌ ಮಂದಣ್ಣ ಹಾಗೂ ತಾಯಿ ಸುಮನ್ ಅವರು ಮಗಳಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ. ವಿರಾಜಪೇಟೆ ತಾಲೂಕಿನ ಕುಕ್ಲೂರು ಗ್ರಾಮದಲ್ಲಿ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ 'ಸೆರಿನಿಟಿ' (Serenity) ಬಂಗಲೆಯನ್ನು ಅಧಿಕೃತವಾಗಿ ಮಗಳ ಹೆಸರಿಗೆ ಬರೆದುಕೊಟ್ಟಿದ್ದಾರೆ. ಮದನ್ ದಂಪತಿ ಹೆಸರಿನಲ್ಲಿದ್ದ ಈ ಆಸ್ತಿಯನ್ನು ವಿರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಶ್ಮಿಕಾ ಹೆಸರಿಗೆ ವರ್ಗಾವಣೆ ಮಾಡಲಾಗಿದೆ.

ಮಿಂಚಿದ 'ವಿರೋಶ್' ಜೋಡಿ

ಕುಟುಂಬದವರು ಹಾಗೂ ಆಪ್ತರಿಗಾಗಿ ಏರ್ಪಡಿಸಿದ್ದ ಈ ವಿಶೇಷ ಔತಣಕೂಟದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ನವ ದಂಪತಿಯ ಟ್ರೆಡಿಷನಲ್ ಲುಕ್ ಅಭಿಮಾನಿಗಳ ಗಮನ ಸೆಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿವೆ.

Read More
Next Story