ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ: ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್?
x

ವಿಜಯದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 

ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ: ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ thecinegossips ಪೋಸ್ಟ್ ಪ್ರಕಾರ, ಈ ಜೋಡಿಯ ವಿವಾಹವು ಫೆಬ್ರವರಿ 26, 2026 ರಂದು ಉದಯಪುರದ ಸುಂದರ ಅರಮನೆಯಲ್ಲಿ ನಡೆಯುವ ಸಾಧ್ಯತೆ ಇದೆ.


Click the Play button to hear this message in audio format

ತೆರೆಯ ಮೇಲೆ ಮತ್ತು ಹೊರಗೆ ತಮ್ಮ ಅಪ್ರತಿಮ ಕೆಮಿಸ್ಟ್ರಿಯಿಂದಾಗಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ತಾರಾ ಜೋಡಿ ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಜೋಡಿ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹರಡಿಕೊಂಡಿದಾಗಿಂದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಕಳೆದ ತಿಂಗಳು ಅತ್ಯಂತ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ, ಇದೀಗ ತಮ್ಮ ಸಂಬಂಧದಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಕನಸಿನ ರಾಜಮನೆತನದ ವಿವಾಹವನ್ನು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಉದಯಪುರದಲ್ಲಿ ನಡೆಯಲಿದೆಯೇ ರಾಯಲ್ ವೆಡ್ಡಿಂಗ್?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ thecinegossips ಪೋಸ್ಟ್ ಪ್ರಕಾರ, ಈ ಜೋಡಿಯ ವಿವಾಹವು ಫೆಬ್ರವರಿ 26, 2026 ರಂದು ಉದಯಪುರದ ಸುಂದರ ಅರಮನೆಯಲ್ಲಿ ನಡೆಯುವ ಸಾಧ್ಯತೆ ಇದೆ. ಈ ವದಂತಿ ಕಾಡ್ಗಿಚ್ಚಿನಂತೆ ಹರಡಿದ್ದು, ಅಭಿಮಾನಿಗಳು ಈಗಾಗಲೇ ಇದನ್ನು ವರ್ಷದ ಅತ್ಯಂತ ನಿರೀಕ್ಷಿತ ಮದುವೆ ಎಂದು ಕರೆದಿದ್ದಾರೆ. ಆದರೂ ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಅಥವಾ ವಿಜಯ್ ದೇವರಕೊಂಡ ಅಧಿಕೃತವಾಗಿ ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.

ಇತ್ತೀಚೆಗೆ 'ಥಾಮಾ' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರಿಗೆ ನಿಶ್ಚಿತಾರ್ಥದ ಕುರಿತು ಕೇಳಿದಾಗ, ತಮ್ಮ ವಿಶಿಷ್ಟ ನಗುವಿನೊಂದಿಗೆ, ಎಲ್ಲರಿಗೂ ಇದರ ಬಗ್ಗೆ ತಿಳಿದಿದೆ ಎಂದು ಸರಳವಾಗಿ ಉತ್ತರಿಸಿದ್ದು, ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಹೈದರಾಬಾದ್‌ನಲ್ಲಿ ಖಾಸಗಿ ನಿಶ್ಚಿತಾರ್ಥ

ಈ ಜೋಡಿಯ ನಿಶ್ಚಿತಾರ್ಥವು ಅಕ್ಟೋಬರ್ ದಸರಾ ಸಮಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಡೆದಿದ್ದು, ಇದರಲ್ಲಿ ಅವರ ಆಪ್ತ ಕುಟುಂಬ ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ವೃತ್ತಿ ಜೀವನದಲ್ಲಿ ರಶ್ಮಿಕಾ ಮತ್ತು ವಿಜಯ್

ರಶ್ಮಿಕಾ ಮಂದಣ್ಣ 'ಛಾವಾ', 'ಸಿಕಂದರ್', 'ಕುಬೇರಾ' ಮತ್ತು 'ತಮ್ಮಾ' ನಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದು, ಅವರು ನಟಿಸಿರುವ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಇಂದು ಬಿಡುಗಡೆಯಾಗಿದೆ. 'ಕಾಕ್‌ಟೇಲ್ 2' ಮತ್ತು 'ಮೈಸಾ' ಚಿತ್ರಗಳು ಅವರ ಕೈಯಲ್ಲಿವೆ.ವಿಜಯ್ ದೇವರಕೊಂಡ ಕೊನೆಯ ಬಾರಿಗೆ ಗೌತಮ್ ತಿನ್ನನುರಿ ಅವರ 'ಕಿಂಗ್‌ಡಮ್' ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಮುಂದಿನ ವರ್ಷ ನಿರ್ದೇಶಕ ರಾಹುಲ್ ಸಂಕ್ರಿತ್ಯನ್ ಅವರ ಮುಂಬರುವ ಪಿರಿಯಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read More
Next Story