ಫೋಟೋಗಾಗಿ ಮಂಡಿಯೂರಿದ ರಶ್ಮಿಕಾ; ಅಭಿಮಾನಿಗಳು ಫಿದಾ
x
ನಟಿ ರಶ್ಮಿಕಾ ಮಂದಣ್ಣ

ಫೋಟೋಗಾಗಿ ಮಂಡಿಯೂರಿದ ರಶ್ಮಿಕಾ; ಅಭಿಮಾನಿಗಳು ಫಿದಾ

ಬಹುಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.


ಬಹುಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ರಶ್ಮಿಕಾ ಪಾಪರಾಜಿಯೊಬ್ಬರ ಜೊತೆ ಬಹಳ ಫ್ರೆಂಡ್ಲಿಯಾಗಿ ನಡೆದುಕೊಂಡಿರುವ ನಡೆ ಅಭಿಮಾನಿಗಳ ಮನ ಗೆದ್ದಿದೆ. ಇತರರ ಫೊಟೋ ಕ್ಲಿಕ್ಕಿಸುವ ಕ್ಯಾಮರಾಮ್ಯಾನ್​​ನ ಫೋಟೋಗಳನ್ನು ರಶ್ಮಿಕಾ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗುತ್ತಿರುವ ಈ ವಿಡಿಯೋದಲ್ಲಿ ರಶ್ಮಿಕಾ ಆಕರ್ಷಕ ಲೊಕೇಶನ್​ ಒಂದರಲ್ಲಿ ನಿಂತು ತಮ್ಮದೇ ಆಲೋಚನೆಯಲ್ಲಿ ಮುಳುಗಿದ್ದಾರೆ. ನಟಿಯ ವಿಡಿಯೋ ಕ್ಯಾಮರಾಮ್ಯಾನ್​​​​ನ ಕ್ಯಾಮರಾದಲ್ಲಿ ಸೆರೆಯಾಗಿದೆ. ನಟಿ ಆ ವ್ಯಕ್ತಿಯಿಂದ ಕ್ಯಾಮರಾ ತೆಗೆದುಕೊಂಡು ಅವರ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ವೃತ್ತಿಪರ ಛಾಯಾಗ್ರಾಹಕಿಯಂತೆ ನಿಂತು ಫೋಟೋ ಕ್ಲಿಕ್ಕಿಸಲಾರಂಭಿಸಿದ್ದಾರೆ. ಕ್ಯಾಮರಾಮ್ಯಾನ್‌ನ ಪರ್ಫೆಕ್​​​ ಫೋಟೋಗಾಗಿ ನಟಿ ಮಂಡಿಯೂರಿ ಕುಳಿತು ಉತ್ತಮ ಶಾಟ್​ಗಳನ್ನು ಕ್ಲಿಕ್ಕಿಸಿದ್ದಾರೆ.

ಈ ವಿಡಿಯೋದ ಲೊಕೇಶನ್​​​​ ಮಾಹಿತಿ ಸ್ಪಷ್ಟವಾಗಿರದಿದ್ದರೂ, ಸೋಷಿಯಲ್​ ಮೀಡಿಯಾ ಪೋಸ್ಟ್‌ಗಳು ಇದು ಇಟಲಿಯ ಪೋರ್ಟೋಫಿನೋ ಎಂದು ಸೂಚಿಸಿದೆ. ರಶ್ಮಿಕಾ ಅಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್​​ ಕ್ರೂಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಇದೇ ವರ್ಷದಲ್ಲಿ ತೆರೆಕಾಣಲಿದೆ. ಪುಷ್ಪ ರಾಜ್ ಪಾತ್ರದಲ್ಲಿ ನಟಿಸಲಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಇದಲ್ಲದೇ ದಿ ಗರ್ಲ್​ಫ್ರೆಂಡ್​​​, ಛಾವಾ, ರೈನ್​ಬೋ ಪ್ರಾಜೆಕ್ಟ್​ಗಳು ನಟಿ ಬಳಿ ಇದ್ದು, ಕೆಲ ದಿನಗಳ ಹಿಂದಷ್ಟೇ ಸಲ್ಮಾನ್​ ಖಾನ್​ ಜೊತೆಗೆ ಸಿಖಂದರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

Read More
Next Story