ರಂಜಾನ್ ಆಚರಣೆ | ʼಅಪ್ಪುʼವನ್ನು ಸ್ಮರಿಸಿದ ಅಭಿಮಾನಿಗಳು
ಅಪ್ಪುಗೆ ಜಾತಿ, ಧರ್ಮ ಮೀರಿ ಅಭಿಮಾನಿಗಳು, ಸ್ನೇಹಿತರು ಇದ್ದರು. ಎಲ್ಲರನ್ನು ಪುನೀತ್ ಒಂದೇ ರೀತಿ ಕಾಣುತ್ತಿದ್ದರು.
ಇಂದು ರಂಜಾನ್ ಹಬ್ಬ. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ತಿಂಗಳಿಂದ ಉಪವಾಸ ವ್ರತ ಆಚರಿಸಿದವರು ಇಂದು ಉಪವಾಸ ತ್ಯಜಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆ ಅಭಿಮಾನಿಗಳು ನಟ ಪುನಿತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಅಪ್ಪುಗೆ ಜಾತಿ, ಧರ್ಮ ಮೀರಿ ಅಭಿಮಾನಿಗಳು, ಸ್ನೇಹಿತರು ಇದ್ದರು. ಎಲ್ಲರನ್ನು ಪುನೀತ್ ಒಂದೇ ರೀತಿ ಕಾಣುತ್ತಿದ್ದರು. ಚಿಕ್ಕಂದಿನಿಂದಲೂ ಅಪ್ಪುಗೆ ಮುಸ್ಲಿಂ ಶೈಲಿಯ ಬಿರಿಯಾನಿ ಅಂದರೆ ಅಚ್ಚು ಮೆಚ್ಚು.
ಈದ್-ಉಲ್-ಫಿತರ್ ಸಂಭ್ರಮದಲ್ಲಿ ಅಪ್ಪು ಬಡ ಮುಸ್ಲಿಮರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಈ ಬಗ್ಗೆ ಮುಸ್ಲಿಂ ಬಾಂಧವರೊಬ್ಬರ ಜೊತೆ ಪುನೀತ್ ರಾಜ್‌ಕುಮಾರ್ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಬ್ಬದ ಸಂಭ್ರಮದಲ್ಲಿ ಈ ಆಡಿಯೋ ಹಂಚಿಕೊಂಡು ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಪ್ಪು ಸಹಾಯಗುಣದ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ಪ್ರತಿವರ್ಷ ರಂಜಾನ್ ಹಬ್ಬಕ್ಕೆ ಅಪ್ಪು ಶುಭಾಶಯ ಕೋರುತ್ತಾ ಬರುತ್ತಿದ್ದರು.
ಭೋಜನಪ್ರಿಯರಾಗಿದ್ದ ಅಪ್ಪುಗೆ ನಾನ್ ವೆಜ್ ಅಂದರೆ ಪಂಚಪ್ರಾಣ. ಇನ್ನು ಅಪ್ಪುಗೆ ಮುಸ್ಲಿಂ ಬಿರಿಯಾನಿ ಇಷ್ಟ ಆಗುತ್ತಿತ್ತು ಎಂದು ಶಿವಣ್ಣ ಸಂದರ್ಶನವೊಂದರಲ್ಲಿ ಹೇಳಿದ್ದರು.