
ಹೈವಾನ್ ಸಿನಿಮಾ ಸೆಟ್‌ನಲ್ಲಿ ಅಕ್ಷಯ್ ಕುಮಾರ್‌ರನ್ನು ಭೇಟಿ ಮಾಡಿದ ರಾಜ್ ಬಿ ಶೆಟ್ಟಿ
‘ಹೈವಾನ್’ ಸಿನಿಮಾದ ಚಿತ್ರೀಕರಣ ಊಟಿಯಲ್ಲಿ ನಡೆಯುದ್ದು, ಸಿನಿಮಾದ ಸೆಟ್‌ನಲ್ಲಿ ರಾಜ್ ಬಿ ಶೆಟ್ಟಿ ಅವರು ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ನಟ ರಾಜ್ ಬಿ ಶೆಟ್ಟಿ ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
ಅಕ್ಷಯ್ ಕುಮಾರ್ ಅವರು ‘ಹೈವಾನ್’ ಹೆಸರಿನ ಹಿಂದಿ ಸಿನಿಮಾ ಮಾಡುತ್ತಿದ್ದು, ಕನ್ನಡದ ಕೆವಿಎನ್ ನಿರ್ಮಾಣ ಮಾಡುತ್ತಿದೆ. ಇದರ ಚಿತ್ರೀಕರಣ ಊಟಿಯಲ್ಲಿ ನಡೆಯುದ್ದು, ಸಿನಿಮಾದ ಸೆಟ್‌ನಲ್ಲಿ ರಾಜ್ ಬಿ ಶೆಟ್ಟಿ ಅವರು ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾವನ್ನು ಅಕ್ಷಯ್ ಕೊಂಡಾಡಿದ್ದು, ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ ಎಂದು ರಾಜ್ ಬಿ. ರಾಜ್ ಬಿ ಶೆಟ್ಟಿ ಅವರನ್ನು ಅಕ್ಷಯ್ ಕುಮಾರ್ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಸ್ಟಾರ್ ಹೀರೋ. ಇತ್ತೀಚೆಗೆ 'ದಿ ಹಾಲಿವುಡ್ ರಿಪೋರ್ಟರ್- ಇಂಡಿಯಾ' ಯೂಟ್ಯೂಬ್ ಚಾನೆಲ್‌ಗೆ ರಾಜ್ ಬಿ ಶೆಟ್ಟಿ ನೀಡಿದ ಸಂದರ್ಶನದಲ್ಲಿ ನಾನು ಸ್ಟಾರ್ ನಟರಿಗೆ ಸಿನಿಮಾ ಮಾಡುವುದಿಲ್ಲ. ಅವರ ಡೇಟ್‌ಗೆ ಕಾಯುತ್ತ ಕೂರುವುದು ಕಷ್ಟದ ಕೆಲಸ. ದೊಡ್ಡ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶಿಸುವುದಕ್ಕಿಂತ ನನಗೆ ಹೊಸಬರ ಜೊತೆಗಿನ ಸಣ್ಣ ಬಜೆಟ್ ಸಿನಿಮಾ ಮಾಡುವುದೇ ಹೆಚ್ಚು ಇಷ್ಟ ಎಂದು ತಿಳಿಸಿದ್ದರು. ಜೊತೆಗೆ, ನಾನು ಒಂದು ವೇಳೆ ಸ್ಟಾರ್ ಸಿನಿಮಾ ಮಾಡುವುದಿದ್ದರೆ ಅದು ಶಿವರಾಜ್ ಕುಮಾರ್ ಅವರೊಂದಿಗೆ ಮಾತ್ರ ಎಂದೂ ಉಲ್ಲೇಖಿಸಿದ್ದರು.