ಝೈದ್ ಖಾನ್‌ನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಚಿತಾ ರಾಮ್‌
x
"ಕಲ್ಟ್" ಸಿನಿಮಾ ಸೆಟ್ ನಲ್ಲಿ ರಚಿತಾರಾಮ್ ಹುಟ್ಟುಹಬ್ಬ ಆಚರಣೆ

ಝೈದ್ ಖಾನ್‌ನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಚಿತಾ ರಾಮ್‌

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಪುತ್ರ ಝೈದ್ ಖಾನ್ ಅಭಿನಯದ `ಕಲ್ಟ್' ಸಿನಿಮಾ ಸೆಟ್ ನಲ್ಲಿ ರಚಿತಾರಾಮ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.


Click the Play button to hear this message in audio format

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಪುತ್ರ ಝೈದ್ ಖಾನ್ ಅಭಿನಯದ `ಕಲ್ಟ್' ಸಿನಿಮಾ ಸೆಟ್ ನಲ್ಲಿ ರಚಿತಾರಾಮ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಅಕ್ಟೋಬರ್ 3 ನಾಯಕಿ ರಚಿತಾರಾಮ್ ಅವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, "ಕಲ್ಟ್" ಚಿತ್ರತಂಡ ಅದ್ದೂರಿಯಾಗಿ ರಚಿತಾರಾಮ್ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ.‌

ʻಉಪಾಧ್ಯಕ್ಷʼ ಸಿನಿಮಾದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ `ಕಲ್ಟ್' ಸಿನಿಮಾದ ಚಿತ್ರೀಕರಣ ಸದ್ಯ ಉಡುಪಿಯಲ್ಲಿ ನಡೆಯುತ್ತಿದೆ. ಬನಾರಸ್ ಸಿನಿಮಾದ ಬಳಿಕ ಝೈದ್ ಖಾನ್ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಇಪ್ಪತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ರಚಿತಾರಾಮ್ ಹಾಗೂ ಮಲೈಕಾ "ಕಲ್ಟ್" ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ.ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Read More
Next Story