21 ವರ್ಷಗಳ ಹಳೆಯ ಆಕಾಶ್ ಶೂಟಿಂಗ್ ವಿಡಿಯೋ ಹಂಚಿಕೊಂಡ ರಮ್ಯಾ
x

ಸ್ಯಾಂಡಲ್‌ವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಲವ್ ಸ್ಟೋರಿ 'ಆಕಾಶ್' ತೆರೆಕಂಡು ಯಶಸ್ವಿ 21 ವರ್ಷಗಳು ಪೂರೈಸಿವೆ.

21 ವರ್ಷಗಳ ಹಳೆಯ 'ಆಕಾಶ್' ಶೂಟಿಂಗ್ ವಿಡಿಯೋ ಹಂಚಿಕೊಂಡ ರಮ್ಯಾ

ಸ್ಯಾಂಡಲ್‌ವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಲವ್ ಸ್ಟೋರಿ 'ಆಕಾಶ್' ತೆರೆಕಂಡು ಯಶಸ್ವಿ 21 ವರ್ಷಗಳು ಪೂರೈಸಿವೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ಕೆಮಿಸ್ಟ್ರಿಗೆ ಇಂದಿಗೂ ಅಭಿಮಾನಿಗಳು ಫಿದಾ.


Click the Play button to hear this message in audio format

ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಅಭಿನಯದ ಸಾರ್ವಕಾಲಿಕ ಹಿಟ್ ಚಿತ್ರ ‘ಆಕಾಶ್’ ತೆರೆಕಂಡು ಯಶಸ್ವಿ 21 ವರ್ಷಗಳು ಪೂರೈಸಿವೆ. ಇತ್ತೀಚೆಗಷ್ಟೆ ಈ ಸಿನಿಮಾ ಮರು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ವತಃ ನಟಿ ರಮ್ಯಾ ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿ ಮರು ಬಿಡುಗಡೆಯ ಸಂಭ್ರಮವನ್ನು ಸವಿದಿದ್ದರು.

ಇದೀಗ ಆಕಾಶ್ ಚಿತ್ರದ ನೆನಪುಗಳನ್ನು ಮೆಲುಕು ಹಾಕಿರುವ ರಮ್ಯಾ ಅವರು, ಈ ಸಿನಿಮಾದ ಶೂಟಿಂಗ್ ಸಮಯದ ಅಪರೂಪದ ವಿಡಿಯೋ ಒಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಹಳೆಯ ವಿಡಿಯೋದಲ್ಲಿ ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಮಹೇಶ್ ಬಾಬು ಸೇರಿದಂತೆ ಚಿತ್ರತಂಡದ ಹಲವು ಪ್ರಮುಖರು ಈ ವಿಡಿಯೋದಲ್ಲಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ.

ಆಕಾಶ್ ಸಿನಿಮಾವು 2005ರಲ್ಲಿ ಬಿಡುಗಡೆಯಾಗಿ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಂಡಿತ್ತು. ಸಿನಿಮಾವನ್ನು ಮಹೇಶ್‌ ಬಾಬು ನಿರ್ದೇಶನ ಮಾಡಿದ್ದು, ಆರ್‌.ಪಿ ಪಟ್ನಾಯಕ್ ಸಂಗೀತ, ಪುನೀತ್-ರಮ್ಯಾ ನಟನೆ ಎಲ್ಲಾ ಸೇರಿ ಸಿನಿಮಾ ಗೆದ್ದಿತ್ತು. ಶ್ರೀ ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್‌ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅಂದು ಸಿನಿಮಾ ನಿರ್ಮಾಣ ಮಾಡಿದ್ದರು. ಮೊದಲ ಬಾರಿ ತಮ್ಮ ಸಂಸ್ಥೆಯ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದರು. ಹಾಗಾಗಿ ಬಜೆಟ್ ಕೊಂಚ ಜಾಸ್ತಿ ಆಗಿತ್ತು. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ನಡೆದಿತ್ತು. 2 ಹಾಡುಗಳನ್ನು ವಿದೇಶದಲ್ಲಿ ಶೂಟಿಂಗ್‌ ಮಾಡಲಾಗಿತ್ತು. ಹೀಗಾಗಿ ಈ ಸಿನಿಮಾದ ಚಿತ್ರೀಕರಣಕ್ಕೆ 90 ಲಕ್ಷ ರೂ.ವರೆಗೆ ಖರ್ಚಾಗಿತ್ತು. ಒಟ್ಟಾರೆ 2 ಕೋಟಿ ರೂ. ವೆಚ್ಚದಲ್ಲಿ 'ಆಕಾಶ್' ಸಿನಿಮಾ ನಿರ್ಮಾಣವಾಗಿತ್ತು.

ಆದರೆ ಈ ಸಿನಿಮಾ ಮೊದಲ 3 ವಾರಕ್ಕೆ 2 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು. ಅಲ್ಲಿವರೆಗೆ ಡಾ. ರಾಜ್‌ಕುಮಾರ್ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ ಎಲ್ಲಾ ಸಿನಿಮಾಗಳ ಗಳಿಕೆಯನ್ನು 'ಆಕಾಶ್' ಮೀರಿಸಿತ್ತು. ಶತದಿನೋತ್ಸವ ಆಚರಿಸಿದ್ದ ಸಿನಿಮಾ 10 ಕೋಟಿ ರೂ.ವರೆಗೆ ಬ್ಯುಸಿನೆಸ್ ಮಾಡಿತ್ತು.ಈ ಸಿನಿಮಾ ಕೆ. ಜಿ ರಸ್ತೆಯ ಮೇನಕಾ ಚಿತ್ರಮಂದಿರದಲ್ಲಿ ತೆರೆಕಂಡು ಚಿತ್ರದ 48 ಶೋಗಳು ಹೌಸ್‌ಫುಲ್ ಆಗಿ ದಾಖಲೆ ಬರೆದಿತ್ತು.

Read More
Next Story