
ಪ್ರಿಯಾಂಕಾ ಚೋಪ್ರಾ
'ಗ್ಲೋಬ್‌ಟ್ರಾಟರ್' ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಫಸ್ಟ್ ಲುಕ್ ಬಿಡುಗಡೆ
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಂಡ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಪ್ರಿಯಾಂಕಾ ಚೋಪ್ರಾ ಅವರನ್ನು ಭಾರತೀಯ ಚಿತ್ರರಂಗಕ್ಕೆ ಮರಳಿ ಸ್ವಾಗತಿಸಿದ್ದಾರೆ.
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಮುಂಬರುವ ಚಿತ್ರ 'ಗ್ಲೋಬ್‌ಟ್ರಾಟರ್' ನಲ್ಲಿ (ತಾತ್ಕಾಲಿಕ ಶೀರ್ಷಿಕೆ: ಎಸ್‌ಎಸ್‌ಎಂಬಿ 29) ನಟಿ ಪ್ರಿಯಾಂಕಾ ಚೋಪ್ರಾ ಅವರ ಮೊದಲ ಲುಕ್ ಅನಾವಣಗೊಂಡಿವೆ. ಈ ಚಿತ್ರದಲ್ಲಿ ಪ್ರಿಯಾಂಕಾ ಅವರು 'ಮಂದಾಕಿನಿ' ಪಾತ್ರ ನಿರ್ವಹಿಸುತ್ತಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿರುವ ನಿರ್ದೇಶಕ ರಾಜಮೌಳಿ ಅವರು 'ದೇಸಿ ಹುಡುಗಿ' ಪ್ರಿಯಾಂಕಾ ಅವರನ್ನು ಭಾರತೀಯ ಚಿತ್ರರಂಗಕ್ಕೆ ಮರಳಿ ಸ್ವಾಗತಿಸಿದ್ದಾರೆ. ಮಂದಾಕಿನಿ ರೂಪದಲ್ಲಿ ನಿಮ್ಮ ಅಸಂಖ್ಯಾತ ಛಾಯೆಗಳನ್ನು ವೀಕ್ಷಿಸಲು ಜಗತ್ತು ಇನ್ನಷ್ಟು ದಿನ ಕಾಯುವುದಕ್ಕೆ ಸಿದ್ಧವಿಲ್ಲ " ಎಂದು ಬರೆದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಕೂಡ ಪೋಸ್ಟರ್ ಹಂಚಿಕೊಂಡು, "ಅವಳು ಕಣ್ಣಿಗೆ ಬೀಳುವುದಕ್ಕಿಂತ ಹೆಚ್ಚಿನವಳು... ಮಂದಾಕಿನಿಗೆ ನಮಸ್ಕಾರ ಹೇಳಿ," ಎಂದು ತಮ್ಮ ಪಾತ್ರವನ್ನು ಕುತೂಹಲಕಾರಿಯಾಗಿ ವಿವರಿಸಿದ್ದಾರೆ.
ಚಿತ್ರದ ನಾಯಕ ಮಹೇಶ್ ಬಾಬು ಕೂಡ ಪ್ರಿಯಾಂಕಾ ಅವರ ಲುಕ್ ಹಂಚಿಕೊಂಡಿದ್ದು, ಈಗ ಅವಳು ಬರುತ್ತಾಳೆ... ಮಂದಾಕಿನಿ @priyankachopra ಅವರನ್ನು ಭೇಟಿ ಮಾಡಿ" ಎಂದು ಬರೆದಿದ್ದಾರೆ.
ಫಸ್ಟ್ ಲುಕ್‌ನಲ್ಲಿ ಪ್ರಿಯಾಂಕ ಚೋಪ್ರಾ
ಪೋಸ್ಟ್‌ರ್‌ನಲ್ಲಿ ಪ್ರಿಯಾಂಕ ಚೋಪ್ರಾ ಅವರು ಹಳದಿ ಸೀರೆ ಧರಿಸಿದ್ದರೂ, ಅವರು ಅಕ್ಷರಶಃ ಬಂಡೆಯ ಅಂಚಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾ, ಕೈಯಲ್ಲಿ ಬಂದೂಕು ಹಿಡಿದು ಗುಂಡು ಹಾರಿಸುತ್ತಿರುವ ಭಂಗಿ ಗಮನ ಸೆಳೆಯುತ್ತಿದೆ. ಇದು ಆಕ್ಷನ್ ಪ್ರಧಾನ ಪಾತ್ರದ ಸುಳಿವು ನೀಡಿದೆ.
ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ
ಪ್ರಿಯಾಂಕಾ ಅವರ ಈ ಹೊಸ ಮತ್ತು ರೋಮಾಂಚಕ ಫಸ್ಟ್‌ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
"ಓ ದೇವರೇ ಮಂದಾಕಿನಿಯಾಗಿ ಪ್ರಿಯಾಂಕಾ ಚೋಪ್ರಾ?, ರಾಜಮೌಳಿ ಅವರ ಲೋಕದಲ್ಲಿ ಬಂದೂಕಿನೊಂದಿಗೆ ಸೀರೆ ಆಕ್ಷನ್? ಇದು ಮತ್ತು ಮಹೇಶ್ ಬಾಬು = ಬಾಕ್ಸ್ ಆಫೀಸ್ ಸುನಾಮಿ!" ಎಂದು ಒಬ್ಬ ಅಭಿಮಾನಿ ಉತ್ಸುಕತೆ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು, "ಪ್ರಿಯಾಂಕಾ, ಆ ಮಂದಾಕಿನಿ ಪೋಸ್ಟರ್ ಶುದ್ಧ ಬೆಂಕಿ - ದೇಸಿ ಶಕ್ತಿಯ ಮಹಾಕಾವ್ಯ ಮರುವ್ಯಾಖ್ಯಾನ" ಎಂದು ಕಾಮೆಂಟ್ ಮಾಡಿದ್ದಾರೆ.
ನ.15ಕ್ಕೆ ಶೀರ್ಷಿಕೆ ಘೋಷಣೆ ನಿರೀಕ್ಷೆ
ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಗುಟ್ಟಾಗಿದ್ದರೂ, ಚಿತ್ರತಂಡವು ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಮಾರಂಭದಲ್ಲಿ ಚಿತ್ರದ ಅಧಿಕೃತ ಶೀರ್ಷಿಕೆ ಘೋಷಣೆಯಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ.

