ಶಿವಣ್ಣ ಸಿನಿಮಾಕ್ಕೆ ವಿಲನ್ ಆಗುವ ಕನಸು ಬಿಚ್ಚಿಟ್ಟ ರತ್ನನ್‌ ಪ್ರಪಂಚದ ಪ್ರಮೋದ್
x

'ಹಲ್ಕಾ ಡಾನ್' ಸಿನಿಮಾ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ನಡೆಯಿತು.

ಶಿವಣ್ಣ ಸಿನಿಮಾಕ್ಕೆ ವಿಲನ್ ಆಗುವ ಕನಸು ಬಿಚ್ಚಿಟ್ಟ 'ರತ್ನನ್‌ ಪ್ರಪಂಚ'ದ ಪ್ರಮೋದ್

ನಿರ್ದೇಶಕ ಚಲ ಅವರು ಮಾತನಾಡಿ,ಮ, 'ಹಲ್ಕಾ ಡಾನ್‌' ಡಾರ್ಕ್‌ ಕಾಮಿಡಿ ಜಾನರ್‌ನ ಕಥೆ ಹೊಂದಿದ್ದು, ಇದರಲ್ಲಿ ವೈಲೆನ್ಸ್‌, ಕಾಮಿಡಿ ಇದೆ. ಹೀರೋ ಹೆಸರೇ ಇದು. ಮುಂದಿನ ತಿಂಗಳಿಂದ ಶೂಟಿಂಗ್‌ ಶುರುವಾಗುತ್ತದೆ ಎಂದರು.


Click the Play button to hear this message in audio format

ನಟ ಪ್ರಮೋದ್‌ ಅವರು ನಾಯಕನಾಗಿ ನಟಿಸಿರುವ ಕೆ ಪಿ. ಶ್ರೀಕಾಂತ್‌ ನಿರ್ಮಾಣದ 'ಹಲ್ಕಾ ಡಾನ್' ಸಿನಿಮಾ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಶಿವರಾಜ್‌ ಕುಮಾರ್, ಕಿಚ್ಚ ಸುದೀಪ್‌, ದುನಿಯಾ ವಿಜಯ್‌, ರಚಿತಾ ರಾಮ್‌ ಅವರು ಚಾಲನೆ ನೀಡಿ ಶುಭ ಕೋರಿದರು.

'ರತ್ನನ್‌ ಪ್ರಪಂಚ' ಖ್ಯಾತಿಯ ನಟ ಪ್ರಮೋದ್‌ ಅವರು ಮಾತನಾಡಿ, ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಅವರು ಶಿವಣ್ಣ ಅವರ ಸಿನಿಮಾ ಮಾಡಿದರೆ, ನಾನದರಲ್ಲಿ ವಿಲನ್‌ ಆಗಿ ನಟಿಸಿ, ಅವರ ಕೈಯಿಂದ ಜೋರ್ ಜೋರಾಗಿ ಏಟು ತಿನ್ನಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದರು. ಅಲ್ಲದೆ, ಕಾಲೇಜು ಮುಗಿಸಿ ಐಎಫ್‌ಎಸ್‌ ಆಫೀಸರ್‌ ಆಗಬೇಕು ಎಂದುಕೊಂಡಿದ್ದ ತಾನು, ಸುದೀಪ್‌ ಅವರಂಥಾ ಸ್ಟಾರ್‌ಗಳು ತಮ್ಮ ನಟನೆ ಮೆಚ್ಚಿದ್ದನ್ನು ಕಂಡ ಮೇಲೆ ಸಿನಿಮಾರಂಗಕ್ಕೆ ಬಂದಿದ್ದಕ್ಕೆ ಹೆಮ್ಮೆ ಅನಿಸುತ್ತದೆ ಎಂದರು. 'ಹಲ್ಕಾ ಡಾನ್‌' ಸಿಕ್ಕಾಪಟ್ಟೆ ಬೇರೆ ಥರದ ಕತೆ ಹೊಂದಿದ್ದು, ಇಂತಹ ಸಿನಿಮಾ ತಾನು ಮಾಡಲೇ ಬೇಕಿದೆ ಎಂದು ಹೇಳಿದರು.

ನಿರ್ದೇಶಕ ಚಲ ಅವರು ಮಾತನಾಡಿ,ಮ, 'ಹಲ್ಕಾ ಡಾನ್‌' ಡಾರ್ಕ್‌ ಕಾಮಿಡಿ ಜಾನರ್‌ನ ಕಥೆ ಹೊಂದಿದ್ದು, ಇದರಲ್ಲಿ ವೈಲೆನ್ಸ್‌, ಕಾಮಿಡಿ ಇದೆ. ಹೀರೋ ಹೆಸರೇ ಇದು. ಮುಂದಿನ ತಿಂಗಳಿಂದ ಶೂಟಿಂಗ್‌ ಶುರುವಾಗುತ್ತದೆ ಎಂದರು. ನಿರ್ಮಾಪಕ ಕೆ ಪಿ ಶ್ರೀಕಾಂತ್‌, ಕಾಲರ್‌ ಎತ್ಕೊಂಡು ಕನ್ನಡ ಪ್ರೇಕ್ಷಕರು ಈ ಸಿನಿಮಾ ನೋಡಬಹುದು" ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಹಲ್ಕಾ ಡಾನ್‌' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಜ್ಯೋತಿ ಪೂರ್ವಜ್‌ ಅವರು, ಹಿಂದೆ ಅಶ್ಲೀಲ ವೀಡಿಯೋವೊಂದಕ್ಕೆ ತಮ್ಮ ಹೆಸರು ಟ್ಯಾಗ್‌ ಆಗಿದ್ದ ಘಟನೆಯ ಕುರಿತು ಪ್ರತಿಕ್ರಿಯಿಸಿ, ನಮ್ಮ ಪ್ರತೀ ಕೆಲಸವನ್ನೂ ದೇವರು ಹಾಗೂ ಮನೆಯವರು ಗಮನಿಸಿರುತ್ತಾರೆ. ನಾನು ಮಾನಸಿಕವಾಗಿ ಸಂಪ್ರದಾಯಸ್ಥೆ ಆಗಿದ್ದರೂ ಆನ್‌ಸ್ಕ್ರೀನ್‌ನಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಕಾಣಬೇಕು. ಹಾಗಾಗಿ ಬಾಡಿ ಟ್ರಾನ್ಸ್‌ಫರ್ಮೇಶನ್‌ ಮಾಡಿಕೊಂಡೆ. ನಾನು ಕೆಟ್ಟ ಕೆಲಸ ಮಾಡಿಲ್ಲ. ತಪ್ಪು ಮಾಡಿಲ್ಲ. ಹೀಗಾಗಿ ಈ ಹಿಂದೆ ನಡೆದ ಘಟನೆ ಬಗ್ಗೆ ಬೇಜಾರಿಲ್ಲ ಎಂದರು.

Read More
Next Story