ಪ್ರಭಾಸ್‌ಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ; ವೈರಲ್ ಸುದ್ದಿಯ ಅಸಲಿಯತ್ತೇನು?
x

ಪೂಜಾ ಹೆಗ್ಡೆ

ಪ್ರಭಾಸ್‌ಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ; ವೈರಲ್ ಸುದ್ದಿಯ ಅಸಲಿಯತ್ತೇನು?

ನನ್ನ ಕೆರಿಯರ್ ಆರಂಭದ ಪ್ಯಾನ್ ಇಂಡಿಯಾ ಸಿನಿಮಾವೊಂದರ ಚಿತ್ರೀಕರಣದ ವೇಳೆ, ಒಬ್ಬ ಸ್ಟಾರ್ ಹೀರೋ ನನ್ನ ಅನುಮತಿ ಇಲ್ಲದೆ ಕ್ಯಾರವಾನ್ ಒಳಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.


Click the Play button to hear this message in audio format

ಸದಾ ಒಂದಲ್ಲ ಒಂದು ಗಾಸಿಪ್‌ಗಳಿಂದ ಸುದ್ದಿಯಲ್ಲಿರುವ ಟಾಲಿವುಡ್‌ನಲ್ಲಿ ಇದೀಗ ನಟಿ ಪೂಜಾ ಹೆಗ್ಡೆ ತಮ್ಮ ಸಹ-ನಟನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. 2021ರ 'ರಾಧೆ ಶ್ಯಾಮ್' ಚಿತ್ರದ ಚಿತ್ರೀಕರಣದ ವೇಳೆ ಪ್ರಭಾಸ್ ಅವರು ಅನುಮತಿಯಿಲ್ಲದೆ ಪೂಜಾ ಅವರ ಕ್ಯಾರವಾನ್ ಪ್ರವೇಶಿಸಿದ್ದಕ್ಕೆ ಪೂಜಾ ಸಂಘರ್ಷಕ್ಕಿಳಿದಿದ್ದರು ಎಂಬ ಆಧಾರರಹಿತ ವರದಿಗಳು ಈಗ ಮತ್ತೆ ವೈರಲ್ ಆಗುತ್ತಿವೆ.

ವೈರಲ್ ಆಗಲು ಕಾರಣವೇನು?

"ನನ್ನ ಕೆರಿಯರ್ ಆರಂಭದಲ್ಲಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಶೂಟಿಂಗ್ ಸಮಯದಲ್ಲಿ ಒಂದು ದಿನ ಆ ಚಿತ್ರದ ಸ್ಟಾರ್ ನಟ ನನ್ನ ಅನುಮತಿ ಇಲ್ಲದೆ ಕ್ಯಾರವಾನ್ ಒಳಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ. ಆ ಕ್ಷಣದಲ್ಲಿ ಭಯವಾದರೂ, ಧೈರ್ಯ ಮಾಡಿ ಅವನಿಗೆ ಕಪಾಳಮೋಕ್ಷ ಮಾಡಿದೆ. ಆ ಘಟನೆಯ ನಂತರ ಆ ನಟನ ಜೊತೆ ನಟಿಸಲು ನಾನು ನಿರಾಕರಿಸಿದೆ, ಇದರಿಂದಾಗಿ ಉಳಿದ ದೃಶ್ಯಗಳನ್ನು ನನ್ನ 'ಡೂಪ್' ಬಳಸಿ ಚಿತ್ರೀಕರಿಸಲಾಯಿತು" ಎಂದು ಪೂಜಾ ಹೇಳಿದ್ದಾರೆಂಬ ವರದಿಗಳು ಹರಿದಾಡುತ್ತಿವೆ.

ಪ್ರಭಾಸ್ ಅವರು ಅನುಮತಿಯಿಲ್ಲದೆ ಪೂಜಾ ಅವರ ಕ್ಯಾರವಾನ್ ಪ್ರವೇಶಿಸಿದ್ದಕ್ಕೆ ಪೂಜಾ ಸಂಘರ್ಷಕ್ಕಿಳಿದಿದ್ದರು ಎಂಬ ಆಧಾರರಹಿತ ವರದಿಗಳು ಈಗ ಮತ್ತೆ ವೈರಲ್ ಆಗುತ್ತಿವೆ.

ಆದರೆ, ಸಿನಿ ರಂಗದ ವಿಶ್ಲೇಷಕರು ಮತ್ತು ಕೆಲವು ಪ್ರಮುಖ ಸುದ್ದಿ ಸಂಸ್ಥೆಗಳ ಪ್ರಕಾರ, ಈ ಸುದ್ದಿಯು ಕೇವಲ ಒಂದು ವದಂತಿ ಎನ್ನಲಾಗುತ್ತಿದೆ. ಪೂಜಾ ಹೆಗ್ಡೆ ಇಂತಹ ಯಾವುದೇ ಅಧಿಕೃತ ಸಂದರ್ಶನ ನೀಡಿಲ್ಲ ಮತ್ತು ಇದು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸಂಕಷ್ಟದಲ್ಲಿ 'ಜನ ನಾಯಗನ್' ಸಿನಿಮಾ

ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ 'ಜನ ನಾಯಗನ್' ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯೊಂದಿಗೆ ಕಾನೂನು ಹೋರಾಟ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಈ ಚಿತ್ರದ ಬಿಡುಗಡೆ ತಡವಾಗಿದೆ. ಸದ್ಯಕ್ಕೆ ಈ ಸಿನಿಮಾ ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

ಟಾಲಿವುಡ್‌ನಲ್ಲಿ ಈ ಹಿಂದೆ ಸತತ ಸೋಲುಗಳನ್ನು ಕಂಡಿದ್ದ ಪೂಜಾ ಹೆಗ್ಡೆ, ಈಗ ಮತ್ತೆ ಫಾರ್ಮ್‌ಗೆ ಮರಳಲು ಸಜ್ಜಾಗಿದ್ದಾರೆ.

ಟಾಲಿವುಡ್‌ನಲ್ಲಿ ಈ ಹಿಂದೆ ಸತತ ಸೋಲುಗಳನ್ನು ಕಂಡಿದ್ದ ಪೂಜಾ ಹೆಗ್ಡೆ, ಈಗ ಮತ್ತೆ ಫಾರ್ಮ್‌ಗೆ ಮರಳಲು ಸಜ್ಜಾಗಿದ್ದಾರೆ. ರಾಘವ ಲಾರೆನ್ಸ್ ಅವರ 'ಕಾಂಚನಾ 4' ಮತ್ತು ವರುಣ್ ಧವನ್ ಜೊತೆಗಿನ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ. ಇತ್ತ ಪ್ರಭಾಸ್ ಅವರು ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Read More
Next Story