ಕನ್ನಡ ಸಿನಿರಂಗದಲ್ಲೂ ಮಿಂಚಿದ್ದ ನಾನಾ ಪಾಟೇಕರ್
ಹಿರಿಯ ನಟ ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ‘ಯಕ್ಷ’ ಸಿನಿಮಾದಲ್ಲಿ ಯೋಗರಾಜ್ ಪುಲಕೇಶಿ ಪಾತ್ರದಲ್ಲಿ ನಟಿಸಿ ಕನ್ನಡದಲ್ಲೂ ಗಮನ ಸೆಳೆದಿದ್ದರು.
ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗೋವಾದ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಹೃದಯಾಘಾತದ ಶಂಕೆ ವ್ಯಕ್ತವಾಗಿದ್ದು, ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿದರೂ ಚಿಕಿತ್ಸೆ ಫಲಿಸಲಿಲ್ಲ. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಾನಾ ಪಾಟೇಕರ್ ಕನ್ನಡದಲ್ಲೂ ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದರು. ಯೋಗೇಶ್ ಅವರ ತಂದೆ ಹಾಗೂ ಖಡಕ್ ಪೊಲೀಸ್ ಅಧಿಕಾರಿ ‘ಯೋಗರಾಜ್ ಪುಲಕೇಶಿ’ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದರು. ವಿಶೇಷವೆಂದರೆ, ತಮ್ಮ ಪಾತ್ರಕ್ಕೆ ಸ್ವತಃ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ದರು.
Next Story
