ಮಹಾನ್‌ ಸಿನಿಮಾದ ಮೂಲಕ ಹಿರಿತೆರೆಗೆ ಕಿರುತೆರೆ, ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ
x

ನಮ್ರತಾ ಗೌಡ

ಮಹಾನ್‌ ಸಿನಿಮಾದ ಮೂಲಕ ಹಿರಿತೆರೆಗೆ ಕಿರುತೆರೆ, ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ

ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶನದಲ್ಲಿ, ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ "ಮಹಾನ್" ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Click the Play button to hear this message in audio format

ನಾಗಿಣಿ ಧಾರಾವಾಹಿಯ ಮೂಲಕ ಜನರ ಮನ ಗೆದ್ದ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ಇದೀಗ ಬೆಳ್ಳಿಪರದೆಗೆ ಕಾಲಿಡುತ್ತಿದ್ದಾರೆ.

ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶನದಲ್ಲಿ, ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ "ಮಹಾನ್" ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಧಿಕಾ ಚೇತನ್, ಮಿತ್ರ ಸೇರಿದಂತೆ ಹಲವು ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಚಿತ್ರದ ಕುರಿತು ಮಾತನಾಡಿದ ನಮ್ರತಾ ಗೌಡ, “ಚಿತ್ರರಂಗ ಪ್ರವೇಶಿಸಲು ನನ್ನ ಸ್ನೇಹಿತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಆದರೆ ನಾನು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ‘ಮಹಾನ್’ ಚಿತ್ರದ ಕಥೆ ಮನಸ್ಸಿಗೆ ಹತ್ತಿರವಾದುದರಿಂದ ತಕ್ಷಣ ಒಪ್ಪಿಕೊಂಡೆ. ರೈತರ ಬದುಕು ಮತ್ತು ಬವಣೆಗಳ ಸುತ್ತ ಹೆಣೆದಿರುವ ಈ ಕಥೆಯಲ್ಲಿ ನಟಿಸಲು ಅವಕಾಶ ದೊರೆತಿರುವುದು ನನಗೆ ಸಂತೋಷ ತಂದಿದೆ. ಪ್ರಕಾಶ್ ಬುದ್ದೂರು ಅವರು ನಿರ್ಮಾಣದಲ್ಲಿ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಪಿ.ಸಿ. ಶೇಖರ್ ಅವರು ಸದಭಿರುಚಿಯ ಚಿತ್ರಗಳನ್ನು ನೀಡಿರುವ ನಿರ್ದೇಶಕರು. ಇಂತಹ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಬಹಳ ಖುಷಿಯಾಗಿದೆ” ಎಂದು ಹೇಳಿದರು.

Read More
Next Story