‘ಯುವ’  ಸಿನಿಮಾವನ್ನು ಹಾಡಿ ಹೊಗಳಿದ ನಾಗಾರ್ಜನ್ ಅಕ್ಕಿನೇನಿ
x
ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಯುವ’ ಸಿನಿಮಾವನ್ನು ಹಾಡಿ ಹೊಗಳಿದ ನಾಗಾರ್ಜನ್ ಅಕ್ಕಿನೇನಿ

ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ʻʻಕರ್ನಾಟಕದಲ್ಲಿರುವ ಮಿತ್ರರಿಗೆ ಎಲ್ಲರಿಗೂ ನಮಸ್ಕಾರ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಯುವ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಯುವ ಚಿತ್ರ ಹಿಟ್ ಕೂಡ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೈದರಾಬಾದ್‌ನಲ್ಲಿಯೂ ಚಿತ್ರ ಹಿಟ್ ಆಗಿದೆʼʼ ಎಂದು ನಾಗಾರ್ಜುನ್ ಮಾತನಾಡಿದ್ದಾರೆ. ವಿಡಿಯೋ ಮೂಲಕ ವಿಶ್‌ ಮಾಡಿದ್ದಾರೆ.

ಈ ವೇಳೆ, ವರನಟ ರಾಜ್‌ಕುಮಾರ್ ಅವರನ್ನು ನಾಗಾರ್ಜುನ್ ಸ್ಮರಿಸಿದ್ದಾರೆ. ʻʻತೆಲುಗು ಮಂದಿಗೂ ಅವರೆಂದರೆ ಇಷ್ಟ. ಇನ್ನೂ ನಿಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ನಿಮ್ಮ ಮುಂದಿನ ಹೆಜ್ಜೆಗೆ ಶುಭವಾಗಲಿʼʼ ಎಂದು ದೊಡ್ಮನೆ ಕುಡಿಗೆ ತೆಲುಗು ನಟ ನಾಗಾರ್ಜುನ್ ಶುಭಹಾರೈಸಿದ್ದಾರೆ.

Read More
Next Story