ನನ್ನ ರೂಪದ ಬಗ್ಗೆ ನನಗೆ ಆತ್ಮವಿಶ್ವಾಸವಿರಲಿಲ್ಲ: ಮೃಣಾಲ್ ಠಾಕೂರ್ ಹೀಗಂದಿದ್ದೇಕೆ?
x

ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಚಿತ್ರರಂಗದಲ್ಲಿ ಇರುವ ಸೌಂದರ್ಯದ ಕಟ್ಟುನಿಟ್ಟಾದ ಮಾನದಂಡಗಳ ಬಗ್ಗೆ ಮಾತನಾಡುತ್ತಾ, ತಾನು ಕೂಡ ದೀರ್ಘಕಾಲದವರೆಗೆ ಕೀಳರಿಮೆಯಿಂದ ಬಳಲಿದ್ದಾಗಿ ಹೇಳಿಕೊಂಡಿದ್ದಾರೆ.

ನನ್ನ ರೂಪದ ಬಗ್ಗೆ ನನಗೆ ಆತ್ಮವಿಶ್ವಾಸವಿರಲಿಲ್ಲ: ಮೃಣಾಲ್ ಠಾಕೂರ್ ಹೀಗಂದಿದ್ದೇಕೆ?

ಮೃಣಾಲ್ ಠಾಕೂರ್ ಇಂದಿನ ಜನರ ಪ್ರೀತಿಯ ಬಗ್ಗೆ ಮಾತನಾಡಿರುವ ಅವರು, ಈಗಿನದು 24 ಗಂಟೆಗಳ ಕಾಲ ಇರುವ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಜಗತ್ತು. ಇಲ್ಲಿ ಪ್ರೀತಿ ಕೂಡ ಅಷ್ಟೇ ವೇಗವಾಗಿ ಮಾಯವಾಗುತ್ತಿದೆ ಎಂದು ಹೇಳಿದ್ದಾರೆ.


Click the Play button to hear this message in audio format

ಖ್ಯಾತ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ತಮ್ಮ ಸೌಂದರ್ಯದ ಬಗೆಗಿನ ಕೀಳರಿಮೆ ಮತ್ತು ಚಿತ್ರರಂಗದ ಸೌಂದರ್ಯದ ಮಾನದಂಡಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮುಂಬರುವ ಸಿನಿಮಾ 'ದೋ ದೀವಾನೇ ಶೆಹರ್ ಮೇ' ಬಿಡುಗಡೆಯ ಹಿನ್ನೆಲೆಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗದಲ್ಲಿ ನಾಯಕಿಯರು ಹೀಗೆಯೇ ಕಾಣಬೇಕು ಎನ್ನುವ ಕೆಲವು ಕಟ್ಟುನಿಟ್ಟಾದ ನಿಯಮಗಳಿವೆ. ಈ ಕಾರಣದಿಂದಾಗಿ ಅನೇಕ ಪ್ರತಿಭಾವಂತ ನಟಿಯರು ತಾವು ಈ ಕ್ಷೇತ್ರಕ್ಕೆ ಅನ್‌ಫಿಟ್‌ ಎಂದು ಭಾವಿಸುವಂತಾಗಿದೆ. ತಾವೂ ಕೂಡ ದೀರ್ಘಕಾಲದವರೆಗೆ ತಮ್ಮ ಸೌಂದರ್ಯದ ಬಗ್ಗೆ ಅತೃಪ್ತಿ ಹೊಂದಿದ್ದರು ಮತ್ತು 2025ರವರೆಗೂ ಅವರಿಗೆ ತಮ್ಮ ಸೌಂದರ್ಯದ ಮೇಲೆ ಆತ್ಮವಿಶ್ವಾಸವಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಮೃಣಾಲ್ ಠಾಕೂರ್ ಅವರು ತಮ್ಮ ಮುಂದಿನ ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾ 'ದೋ ದೀವಾನೇ ಶೆಹರ್ ಮೇ' ಚಿತ್ರದಲ್ಲಿ ಅವರು ರೋಷ್ನಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪಾತ್ರವು ತನ್ನ ಸಹೋದರಿಯೊಂದಿಗೆ ಹೋಲಿಕೆಗೆ ಒಳಗಾಗಿ ತನಗಿಂತ ಬೇರೆಯವರೇ ಸುಂದರ ಎಂಬ ಕೀಳರಿಮೆಯಿಂದ ಬಳಲುವ ಹುಡುಗಿಯ ಕಥೆಯಾಗಿದೆ. ಈ ಪಾತ್ರವು ತನ್ನ ನೈಜ ಜೀವನಕ್ಕೆ ಹತ್ತಿರವಾಗಿದ್ದರಿಂದಲೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಈಗಿನ ಪೀಳಿಗೆಯ ಪ್ರೇಮದ ಬಗ್ಗೆಯೂ ಮಾತನಾಡಿರುವ ಮೃಣಾಲ್, ಸೋಶಿಯಲ್ ಮೀಡಿಯಾದಲ್ಲಿನ 24 ಗಂಟೆಗಳ ಕಾಲ ಇರುವ ಸ್ಟೋರಿಗಳಂತೆ ಪ್ರೀತಿಯೂ ಅಸ್ಥಿರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿನ ಯುವಜನತೆ ತಾಳ್ಮೆಯಿಲ್ಲದೆ ಬೇಗನೇ ಪ್ರೀತಿಯಲ್ಲಿ ಸೋಲೊಪ್ಪಿಕೊಳ್ಳುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ. ಸಿದ್ಧಾಂತ್ ಚತುರ್ವೇದಿ ನಾಯಕನಾಗಿ ನಟಿಸಿರುವ, ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಈ ಸಿನಿಮಾ ಫೆಬ್ರವರಿ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಮೃಣಾಲ್ ಠಾಕೂರ್ ಅವರು ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಅಲ್ಪ ಅವಧಿಯಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಸೀತಾ ರಾಮಂ' ಚಿತ್ರದ ಮೂಲಕ ಅವರು ಮನೆಮಾತಾದರು. ಈ ಚಿತ್ರದಲ್ಲಿ ಸೀತಾ ಮಹಾಲಕ್ಷ್ಮಿ ಎಂಬ ಪಾತ್ರದಲ್ಲಿ ಅವರ ನಟನೆ ಮತ್ತು ಸೌಂದರ್ಯಕ್ಕೆ ಪ್ರೇಕ್ಷಕರು ಮಾರಹೋಗಿದ್ದರು. ಇದಾದ ನಂತರ ನಟ ನಾನಿ ಅವರ ಜೊತೆ ನಟಿಸಿದ 'ಹಾಯ್ ನಾನಾ' ಸಿನಿಮಾ ಅವರಿಗೆ ಮತ್ತೊಂದು ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಚಿತ್ರದಲ್ಲಿ ಅವರ ಭಾವನಾತ್ಮಕ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಬಾಲಿವುಡ್‌ನಲ್ಲಿ ಅವರು ಹೃತಿಕ್ ರೋಷನ್ ಅಭಿನಯದ 'ಸೂಪರ್ 30' ಚಿತ್ರದ ಮೂಲಕ ಗಮನ ಸೆಳೆದಿದ್ದರು. ನಂತರ ಜಾನ್ ಅಬ್ರಹಾಂ ಜೊತೆ 'ಬಾಟ್ಲಾ ಹೌಸ್' , ಶಾಹಿದ್ ಕಪೂರ್ ಅವರ 'ಜೆರ್ಸಿ' ಮತ್ತು ಫರ್ಹಾನ್ ಅಖ್ತರ್ ಅವರ 'ತೂಫಾನ್' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೃಣಾಲ್ ನಟನೆಯ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ 'ದೋ ದೀವಾನೇ ಶೆಹರ್ ಮೇ' ಮಾತ್ರವಲ್ಲದೆ, ಅಡಿವಿ ಶೇಷ್ ಜೊತೆಗಿನ 'ಡಕಾಯ್ತ್' , 'ಸನ್ ಆಫ್ ಸರ್ದಾರ್ 2' ಮತ್ತು 'ಪೂಜಾ ಮೇರಿ ಜಾನ್' ಸಿನಿಮಾಗಳು 2026ರಲ್ಲಿ ತೆರೆಕಾಣಲಿವೆ.

Read More
Next Story