
ದೃಶ್ಯಂ
Drishyam -3| ಮತ್ತೆ ಬಂದ ಜಾರ್ಜ್‌ಕುಟ್ಟಿ; ʻದೃಶ್ಯಂ-3ʼ ಚಿತ್ರೀಕರಣ ಆರಂಭ, ಈ ವರ್ಷವೇ ರಿಲೀಸ್
ಮೋಹನ್ ಲಾಲ್ ನಟನೆಯ ದೃಶ್ಯಂ-3 ಸಿನಿಮಾಗೆ ಸೋಮವಾರ ಮುಹೂರ್ತ ನೆರವೇರಿದ್ದು, ಇಂದಿನಿಂದಲೇ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ 'ದೃಶ್ಯಂ -3' ಚಿತ್ರದಲ್ಲಿ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ಜೀತು ಜೋಸೆಫ್ ನಿರ್ದೇಶನದ ಮತ್ತು ಮೋಹನ್ ಲಾಲ್ ನಟಿಸಿದ್ದ ʻದೃಶ್ಯಂ' ಸಿನಿಮಾ ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಚಿತ್ರ. ಅತ್ಯುತ್ತಮ ಚಿತ್ರಕಥೆ ಮತ್ತು ನಟನೆಯಿಂದ ಈ ಚಿತ್ರದ ಎರಡನೇ ಭಾಗವೂ ಪ್ರೇಕ್ಷಕರ ಹೃದಯ ಗೆದ್ದಿತ್ತು. ಈಗ ಚಿತ್ರದ ಮೂರನೇ ಭಾಗದ ಚಿತ್ರೀಕರಣ ಆರಂಭವಾಗಿದೆ.
ಮೋಹನ್ ಲಾಲ್ ನಟನೆಯ ದೃಶ್ಯಂ-3 ಸಿನಿಮಾಗೆ ಸೋಮವಾರ ಮುಹೂರ್ತ ನೆರವೇರಿತು. ಇಂದಿನಿಂದಲೇ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ 'ದೃಶ್ಯಂ-3' ಚಿತ್ರದಲ್ಲಿ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಚಿತ್ರೀಕರಣ ಪೂತೊಟ್ಟ ಕಾನೂನು ಕಾಲೇಜಿನಲ್ಲಿ ಆರಂಭವಾಗುತ್ತಿದೆ. ಚಿತ್ರದ ಪೂಜೆಯೂ ಅಲ್ಲಿಯೇ ನಡೆಯುತ್ತಿದೆ. ಮೋಹನ್ ಲಾಲ್ ಮತ್ತು ಇತರರು ಪೂಜೆಗೆ ಆಗಮಿಸಿದ್ದಾರೆ. ಮೂರನೇ ಭಾಗದ ಚಿತ್ರೀಕರಣವನ್ನು 55 ದಿನಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ನಾಲ್ಕು ವರ್ಷಗಳ ನಂತರ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಆಗುವ ಬದಲಾವಣೆಗಳನ್ನು ಮೂರನೇ ಭಾಗವು ತರುತ್ತದೆ ಎಂದು ಜೀತು ಜೋಸೆಫ್ ಈ ಹಿಂದೆ ಹೇಳಿದ್ದರು.
ಮೊದಲ ಎರಡು ಭಾಗಗಳಂತೆ ಮೂರನೇ ಭಾಗವು ಭಾರೀ ಬುದ್ಧಿವಂತ ಚಿತ್ರವಲ್ಲ ಎಂದು ಜೀತು ಜೋಸೆಫ್ ಸ್ಪಷ್ಟಪಡಿಸಿದ್ದರು. ಮೋಹನ್ ಲಾಲ್ ತಮ್ಮ 'ಆಶೀರ್ವಾದ್ ಸಿನಿಮಾಸ್' ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ದಿನಾಂಕ ಘೋಷಿಸುವ ಟೀಸರ್ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ದೃಶ್ಯಂ- 3 ಈ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಟೀಸರ್‌ನಲ್ಲಿ ತೋರಿಸಲಾಗಿದೆ.
ಮೊದಲ ಭಾಗ ದೃಶ್ಯಂ 2013 ರಲ್ಲಿ ಬಿಡುಗಡೆಯಾಗಿತ್ತು.ಇದು ವಿಶ್ವಾದ್ಯಂತ 62 ಕೋಟಿ ರೂ.ಗಳನ್ನು ಗಳಿಸಿತ್ತು. ನಾಲ್ಕು ಪ್ರಾದೇಶಿಕ ಭಾಷೆಗಳಲ್ಲಿ ದೃಶ್ಯಂ ರೀಮೇಕ್ ಆಗಿತ್ತು. ಕನ್ನಡದಲ್ಲಿ ದೃಶ್ಯ (2014), ತೆಲುಗಿನಲ್ಲಿ ದೃಶ್ಯಂ (2014), ತಮಿಳಿನಲ್ಲಿ ಪಾಪನಾಸಂ (2015) ಮತ್ತು ಹಿಂದಿಯಲ್ಲಿ ದೃಶ್ಯಂ (2015) ಆಗಿ ರಿಲೀಸ್ ಆಗಿತ್ತು. ಸಿಂಹಳ ಭಾಷೆಯಲ್ಲಿ ಧರ್ಮಯುದ್ಧಯ (2017) ಮತ್ತು ಚೈನೀಸ್ ಭಾಷೆಯಲ್ಲಿ ಶೀಪ್ ವಿಥೌಟ್ ಎ ಶೆಫರ್ಡ್ (2019) ಎಂದು ರೀಮೇಕ್ ಮಾಡಲಾಗಿತ್ತು.