ಮೈಕೆಲ್ ಜಾಕ್ಸನ್ ಬಯೋಪಿಕ್ ಟ್ರೈಲರ್ ಬಿಡುಗಡೆ
x

ಮೈಕೆಲ್ ಜಾಕ್ಸನ್ ಅವರ ಸ್ವಂತ ಸೋದರಳಿಯ ಜಾಫರ್ ಜಾಕ್ಸನ್ ಈ ಚಿತ್ರದಲ್ಲಿ ಮೈಕೆಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ಮೈಕೆಲ್ ಜಾಕ್ಸನ್ ಬಯೋಪಿಕ್ ಟ್ರೈಲರ್ ಬಿಡುಗಡೆ

ಪಾಪ್‌ ಗಾಯಕ ಮೈಕೆಲ್ ಜಾಕ್ಸನ್ ಅವರ ಜೀವನಗಾಥೆಯನ್ನು ಆಧರಿಸಿದ ಮೈಕಲ್‌ ಸಿನಿಮಾ ಅವರ ಬಾಲ್ಯದ ದಿನಗಳಿಂದ ಹಿಡಿದು ಜಾಗತಿಕ 'ಕಿಂಗ್ ಆಫ್ ಪಾಪ್' ಆಗಿ ಬೆಳೆದ ಹಾದಿಯನ್ನು ಮತ್ತು ಅವರ ಜೀವನದ ಏಳುಬೀಳುಗಳನ್ನು ತೋರಿಸುತ್ತದೆ.


Click the Play button to hear this message in audio format

ಪಾಪ್ ಲೋಕದ ತಾರೆ ಮೈಕೆಲ್ ಜಾಕ್ಸನ್ ಅವರ ಜೀವನಾಧಾರಿತ ಬಹುನಿರೀಕ್ಷಿತ ಬಯೋಪಿಕ್ 'ಮೈಕೆಲ್' ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಅವರ ಬಾಲ್ಯದ ದಿನಗಳಿಂದ ಹಿಡಿದು ಜಾಗತಿಕ ಸೂಪರ್ ಸ್ಟಾರ್ ಆಗಿ ಬೆಳೆದ ಹಾದಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

ಈ ಸಿನಿಮಾದಲ್ಲಿ ಮೈಕೆಲ್ ಪಾತ್ರದಲ್ಲಿ ಜಾಫರ್ ಜಾಕ್ಸನ್ ನಟಿಸುತ್ತಿದ್ದಾರೆ. ವಿಶೇಷವೆಂದರೆ ಮೈಕೆಲ್ ಜಾಕ್ಸನ್ ಅವರ ಸ್ವಂತ ಸೋದರಳಿಯ ಜಾಫರ್ ಜಾಕ್ಸನ್. ಬಿಡುಗಡೆಯಾದ ಟ್ರೈಲರ್‌ನಲ್ಲಿ ಜಾಫರ್ ಅವರ ನೃತ್ಯ, ನಡಿಗೆ ಮತ್ತು ಧ್ವನಿ ಮೈಕೆಲ್ ಜಾಕ್ಸನ್ ಅವರನ್ನೇ ನೆನಪಿಸುವಂತಿದೆ. ನಿರ್ದೇಶಕ ಆಂಟೊಯಿನ್ ಫುಕ್ವಾ ಅವರು ಜಾಫರ್ ಅಭಿನಯವನ್ನು ಶ್ಲಾಘಿಸಿದ್ದು, ಇದು ಕೇವಲ ದೈಹಿಕ ಹೋಲಿಕೆಯಲ್ಲ, ಮೈಕೆಲ್ ಅವರ ಆತ್ಮವನ್ನೇ ಜಾಫರ್ ಪ್ರತಿಬಿಂಬಿಸಿದ್ದಾರೆ ಎಂದು ಹೇಳಿದ್ದಾರೆ.

ಮೈಕೆಲ್ ಜಾಕ್ಸನ್ ಸಿನಿಮಾದ ಟ್ರೇಲರ್‌ ಇಲ್ಲಿದೆ

ಟ್ರೈಲರ್‌ನಲ್ಲಿ ಮೈಕೆಲ್ ಜಾಕ್ಸನ್ ಅವರ ಜೀವನದ ಪ್ರಮುಖ ಘಟ್ಟಗಳನ್ನು ಸೆರೆಹಿಡಿಯಲಾಗಿದೆ. ದಿ ಜಾಕ್ಸನ್ 5 ತಂಡದ ಆರಂಭಿಕ ದಿನಗಳು, ವಿಶ್ವ ಪ್ರಸಿದ್ಧ 'ಥ್ರಿಲ್ಲರ್' ಮ್ಯೂಸಿಕ್ ವಿಡಿಯೋದ ಮರುಸೃಷ್ಟಿ ಹಾಗೂ ಪೆಪ್ಸಿ ಜಾಹೀರಾತು ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಂತಹ ನೋವಿನ ಕ್ಷಣಗಳನ್ನು ಟ್ರೇಲರ್‌ನಲ್ಲಿ ಕಾಣಬಹುದು. ಸುಮಾರು 1,300 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.

ಚಿತ್ರದಲ್ಲಿ ಮೈಕೆಲ್ ಅವರ ತಂದೆ ಜೋ ಜಾಕ್ಸನ್ ಪಾತ್ರದಲ್ಲಿ ಕೋಲ್ಮನ್ ಡೊಮಿಂಗೊ, ತಾಯಿ ಕ್ಯಾಥರೀನ್ ಜಾಕ್ಸನ್ ಆಗಿ ನಿಯಾ ಲಾಂಗ್ ಮತ್ತು ಮೈಕೆಲ್ ಅವರ ವಕೀಲ ಜಾನ್ ಬ್ರಾಂಕಾ ಪಾತ್ರದಲ್ಲಿ ಮೈಲ್ಸ್ ಟೆಲ್ಲರ್ ಅಭಿನಯಿಸಿದ್ದಾರೆ. ಪ್ರಸಿದ್ಧ ಗಾಯಕಿ ಡಯಾನಾ ರೋಸ್ ಪಾತ್ರವನ್ನು ಕಟ್ ಗ್ರಹಾಂ ನಿರ್ವಹಿಸಿದ್ದಾರೆ. ಆಂಟೊಯಿನ್ ಫುಕ್ವಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಾನ್ ಲೋಗನ್ ಚಿತ್ರಕಥೆ ಬರೆದಿದ್ದಾರೆ.

ಸಿನಿಮಾ ಬಗ್ಗೆ ಒಂದೆಡೆ ಸಂಭ್ರಮವಿದ್ದರೆ, ಮತ್ತೊಂದೆಡೆ ಮೈಕೆಲ್ ಜಾಕ್ಸನ್ ಅವರ ಮಗಳು ಪ್ಯಾರಿಸ್ ಜಾಕ್ಸನ್ ಈ ಚಿತ್ರದಿಂದ ದೂರ ಉಳಿದಿದ್ದಾರೆ. ಚಿತ್ರದ ಕಥೆಯಲ್ಲಿ ಹಲವು ತಪ್ಪುಗಳಿದ್ದು, ಸತ್ಯವನ್ನು ಮರೆಮಾಚಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾದ ಏಪ್ರಿಲ್ 24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ 10 ರಂದು ಬರ್ಲಿನ್‌ನಲ್ಲಿ ಚಿತ್ರದ ಅಂತರಾಷ್ಟ್ರೀಯ ಪ್ರೀಮಿಯರ್ ನಡೆಯಲಿದ್ದು, ಇದು 2026ರ ವರ್ಷದ ಅತಿದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Read More
Next Story