ಮತ್ತೆ ಕಿರುತೆರೆಗೆ ಮರಳಿದ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ
x
ನಟಿ ಮಯೂರಿ

ಮತ್ತೆ ಕಿರುತೆರೆಗೆ ಮರಳಿದ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಇಡೀ ರಾಜ್ಯದ ಜನತೆಯ ಮನೆಗೆದ್ದು, ಬಳಿಕ ನಟಿಯಾಗಿ ಸ್ಯಾಂಡಲ್ ವುಡ್‌ಗೂ ಪಾದಾರ್ಪಣೆ ಮಾಡಿದ್ದ ನಟಿ ಮಯೂರಿ, ಇದೀಗ ಮತ್ತೆ ಕಿರುತೆರೆಗೆ ಮರಳು ಸಜ್ಜಾಗಿದ್ದಾರೆ.


Click the Play button to hear this message in audio format

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಇಡೀ ರಾಜ್ಯದ ಜನತೆಯ ಮನೆಗೆದ್ದು, ಸ್ಯಾಂಡಲ್ ವುಡ್‌ಗೂ ಪಾದಾರ್ಪಣೆ ಮಾಡಿದ್ದ ನಟಿ ಮಯೂರಿ, ಇದೀಗ ಮತ್ತೆ ಕಿರುತೆರೆಗೆ ಮರಳು ಸಜ್ಜಾಗಿದ್ದಾರೆ.

ಒಂಬತ್ತು ವರ್ಷಗಳ ಅಂತರದ ನಂತರ ಮಯೂರಿ ʼನನ್ನ ದೇವ್ರುʼ ಎಂಬ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮಯೂರಿ ಅವರು ಸಣ್ಣ ಊರಿನ ಬಡ ನರ್ಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಇವರೊಟ್ಟಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ.ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಹೀಗೆ 'ನನ್ನ ದೇವ್ರು' ತಾರಾಗಣದಲ್ಲಿ ಜನಪ್ರಿಯ ನಟ- ನಟಿಯರಿದ್ದಾರೆ.

ಈ ಮೊದಲು 'ಒಲವಿನ ನಿಲ್ದಾಣ' ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು, ʼನನ್ನ ದೇವ್ರುʼ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಬೆಳ್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆದಿರುವ ರಮೇಶ್ ಇಂದಿರಾ ʼನನ್ನ ದೇವ್ರುʼ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ನಟಿ ಮಯೂರಿಯವರು ಕೃಷ್ಣ ಲೀಲಾ, ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2, ರುಸ್ತುಂ, ಮತ್ತು ಪೊಗರು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು, ವಿವಾಹ, ತಾಯ್ತನದ ಬಳಿಕ ಬ್ರೇಕ್ ತೆಗೆದುಕೊಂಡು, ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.

Read More
Next Story