ಮದುವೆ ಅಲ್ಲ.. ಜೆಸ್ಟ್ ಎಂಗೇಜ್‌ಮೆಂಟ್: ಕ್ಲಾರಿಫಿಕೇಶನ್ ಕೊಟ್ಟ ಅದಿತಿ ಹೈದರಿ
ಅದಿತಿ ರಾವ್ ಹೈದಿರಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ತಾವು ಹಾಗೂ ಸಿದ್ಧಾರ್ಥ್ ಮದುವೆಯಾಗಿಲ್ಲ; ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ತಮಿಳು ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಮಾರ್ಚ್ 27ರಂದು ದೇವಾಲಯವೊಂದರಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅದಿತಿ ರಾವ್ ಹೈದಿರಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ತಾವು ಹಾಗೂ ಸಿದ್ಧಾರ್ಥ್ ಮದುವೆಯಾಗಿಲ್ಲ; ಅಂದು ನಡೆದದ್ದು ನಿಶ್ಚಿತಾರ್ಥ ಎಂದು ಹೇಳಿದ್ದಾರೆ.
ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಅವರುಗಳು ತೆಲಂಗಾಣದ ವನಪರ್ತಿಯ ರಂಗನಾಥಸ್ವಾಮಿ ದೇವಾಲಯದಲ್ಲಿ ಗುಟ್ಟಾಗಿ ಮದುಗೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ದೇವಾಲಯದ ಸಿಬ್ಬಂದಿ ಸಹ ಆ ಇಬ್ಬರೂ ಇಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಖಾತ್ರಿಪಡಿಸಿದ್ದರು. ಅಲ್ಲದೆ, ಚಿತ್ರೀಕರಣ ಎಂದು ಹೇಳಿ ಮದುವೆ ಆಗಿದ್ದಾರೆ ಎಂಬ ಆರೋಪವನ್ನು ಸಹ ಮಾಡಿದ್ದರು.
ಇದೀಗ ಅದಿತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಗೂ ಸಿದ್ಧಾರ್ಥ್ನ ಚಿತ್ರ ಹಂಚಿಕೊಂಡು, ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅದಿತಿ ಹಂಚಿಕೊಂಡಿರುವ ಚಿತ್ರದಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರೂ ಬೆರಳಿಗೆ ಉಂಗುರ ಹಾಕಿಕೊಂಡಿದ್ದಾರೆ. 'He said yes!
E. N. G. A. G. E. D. ' ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಅದಿತಿ ಹಂಚಿಕೊಂಡಿದ್ದಾರೆ. ಅಲ್ಲಿಗೆ ತಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಖಾತ್ರಿ ಪಡಿಸಿದ್ದಾರೆ.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ 'ಮಹಾ ಸಮುದ್ರಂ' ಚಿತ್ರದ ಮೂಲಕ ಪರಿಚಯವಾದರು. ಈ ವೇಳೆ ಅವರಿಬ್ಬರ ನಡುವೆ ಸ್ನೇಹವಾಗಿತ್ತು, ಸ್ನೇಹ ಪ್ರಿತಿಯಾಗಿ ತಿರುಗಿತ್ತು. ಅಂದಿನಿಂದ ಈ ಜೋಡಿ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ತಮ್ಮ ಡೇಟಿಂಗ್ ಸಿಕ್ರೇಟ್ ರಿವೀಲ್ ಮಾಡಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.