
ನಾಳೆ ರಾಜ್ಯದಾದ್ಯಂತ ʼಲೈನ್ ಮ್ಯಾನ್ʼ ತೆರೆಗೆ
‘ ಲೈನ್ ಮ್ಯಾನ್’ ಸಿನಿಮಾ ರಾಜ್ಯದಾದ್ಯಂತ ಶುಕ್ರವಾರ ( ಮಾ. 22) ರಂದು ತೆರೆಕಾಣಲಿದೆ.
‘ ಲೈನ್ ಮ್ಯಾನ್’ ಸಿನಿಮಾ ರಾಜ್ಯದಾದ್ಯಂತ ಶುಕ್ರವಾರ (ಮಾ. 22) ರಂದು ತೆರೆಕಾಣಲಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್, ವಾಟ್ಸಾಪ್ ಎಂದು ಅದರಲ್ಲೇ ಮುಳುಗಿರುವ ಜನ ಒಟ್ಟಾಗಿ ಕೂತು ಮಾತಾಡುವುದು, ಖುಷಿಯಾಗಿರುವುದನ್ನೇ ಮರೆತುಬಿಟ್ಟಿದ್ದಾರೆ. ಭಾವನೆಗಳಿಗೆ ಸ್ಪಂದಿಸುವುದು ಇತ್ತೀಚಿಗೆ ಬಹಳ ಕಡಿಮೆಯಾಗಿದೆ. ಇಂಥ ಸುಂದರ ಕ್ಷಣಗಳನ್ನು "ಲೈನ್ ಮ್ಯಾನ್" ಚಿತ್ರ ನೆನಪಿಸುತ್ತದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ.
ತೆಲುಗಿನ ಜನಪ್ರಿಯ ನಟ ತ್ರಿಗುಣ್ ಈ ಚಿತ್ರದ ನಾಯಕನಾಗಿದ್ದು, ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ, ಹಾಗೂ ʼತರ್ಲೆನನ್ಮಗʼ ಖ್ಯಾತಿಯ ಅಂಜಲಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.
ಶಾಂತಿ ಸಾಗರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೂರನೇ ಚಿತ್ರವಿದು. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್ ಈ ಚಿತ್ರದ ನಿರ್ಮಾಪಕರಾಗಿದ್ದು, ರಘು ಶಾಸ್ತ್ರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.