ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಜಾನ್ವಿ ಕಪೂರ್‌ಗೆ ಆಸಕ್ತಿಯಂತೆ
x
ನಟಿ ಜಾನ್ವಿ ಕಪೂರ್‌

ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಜಾನ್ವಿ ಕಪೂರ್‌ಗೆ ಆಸಕ್ತಿಯಂತೆ

ನಟಿ ಶ್ರೀದೇವಿ ಮಗಳ ಸಾಮಾಜಿಕ ಆಸಕ್ತಿಯ ಬಗ್ಗೆ ಮತ್ತು ಅವರ ಪ್ರೌಢತೆಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click the Play button to hear this message in audio format

ಬಾಲಿವುಡ್‌ ನಟಿ ಜಾನ್ವಿ ಕಪೂರ್ ಸಂದರ್ಶನವೊಂದರಲ್ಲಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಜಾತಿವಾದದ ಕುರಿತ ಚರ್ಚೆಯ ಬಗ್ಗೆ ತಮಗೆ ಆಸಕ್ತಿ ಇರುವುದಾಗಿ ನಟಿ ಹೇಳಿಕೊಂಡಿದ್ದಾರೆ. ನಟಿ ಶ್ರೀದೇವಿ ಮಗಳ ಸಾಮಾಜಿಕ ಆಸಕ್ತಿಯ ಬಗ್ಗೆ ಮತ್ತು ಅವರ ಪ್ರೌಢತೆಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಾನ್ವಿ ಕಪೂರ್‌ ಅವರು ಸಂದರ್ಶನ ವೇಳೆ ತಮಗೆ ಇತಿಹಾಸದಲ್ಲಿ ತುಂಬ ಆಸಕ್ತಿ ಇದೆ ಎಂದರು. ಜತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತೀಯ ಸಂವಿಧಾನದ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರು ಜಾತಿವಾದದ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸುವುದನ್ನು ನೋಡಲು ಬಯಸುತ್ತೇನೆ ಎಂದು ಜಾನ್ವಿ ಹೇಳಿದರು.

ʻʻಅಂಬೇಡ್ಕರ್ ಅವರಿಗೆ ತಮ್ಮ ನಿಲುವು ಏನು ಎಂಬುದು ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಹಾಗೇ ನಿಷ್ಠುರರಾಗಿದ್ದರು. ಆದರೆ ಗಾಂಧಿಯವರ (ಜಾತಿಭೇದ) ದೃಷ್ಟಿಕೋನವು ಹೆಚ್ಚು ಹೆಚ್ಚು ತೆರೆದುಕೊಂಡಂತೆ ವಿಕಸನಗೊಂಡಿತು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜದಲ್ಲಿರುವ ಈ ಜಾತಿವಾದದ ಸಮಸ್ಯೆ ಬಗ್ಗೆ ಮಾತನಾಡುವುದಾದರೆ, ಮೂರನೇ ವ್ಯಕ್ತಿಯಿಂದ ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ, ಅಲ್ಲಿದ್ದು ನಿಜವಾಗಿ ಬದುಕುವುದಕ್ಕೂ ಬಹಳ ವ್ಯತ್ಯಾಸವಿದೆʼʼ ಎಂದು ಅಭಿಪ್ರಾಯಪಟ್ಟರು.

ದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಜತೆಗೆ , ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

Read More
Next Story