
ಡಾ. ರಾಜ್‌ಕುಮಾರ್ ಅವರ ಸಾರ್ವಕಾಲಿಕ ಹಿಟ್ ಸಿನಿಮಾ 'ಶಂಕರ್ ಗುರು' ಮಧ್ಯಾಹ್ನ 2 ಗಂಟೆಗೆ ತೆರೆಕಾಣಲಿದೆ.
ಚಿತ್ರೋತ್ಸವಕ್ಕೆ ಇಂದು ತೆರೆ; ವರನಟನ ಈ ಹಿಟ್ ಚಿತ್ರ ಪ್ರದರ್ಶನ
ಕನ್ನಡ ಸಿನಿಮಾದ ಅಭಿಮಾನಿಗಳಿಗಾಗಿ ಡಾ. ರಾಜ್‌ಕುಮಾರ್ ಅವರ ಸಾರ್ವಕಾಲಿಕ ಹಿಟ್ 'ಶಂಕರ್ ಗುರು' ಮಧ್ಯಾಹ್ನ 2 ಗಂಟೆಗೆ ಸ್ಕ್ರೀನ್ 6ರಲ್ಲಿ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕೊನೆಯ ದಿನ ಇಂದು ಸಿನಿಪ್ರಿಯರಿಗೆ ರಸದೌತಣ ಕಾಯುತ್ತಿದೆ. ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನೆಪೊಲಿಸ್‌ನ ವಿವಿಧ ಪರದೆಗಳಲ್ಲಿ ಜಾಗತಿಕ ಮಟ್ಟದ ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಸಿನಿ ರಸಿಕರು ಮಿಸ್ ಮಾಡಬಾರದ ಪ್ರಮುಖ 10 ಚಿತ್ರಗಳ ವಿವರ ಇಲ್ಲಿದೆ.
ನೌವೆಲ್ ವಾಗ್
ನಗರದ ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ಇಂದು ತೆರೆ ಬೀಳಲಿದ್ದು, ಚಿತ್ರೋತ್ಸವದ ಕೊನೆಯ ದಿನವಾದ ಫೆಬ್ರವರಿ 6ರಂದು ವಿಶ್ವದ ನಾನಾ ಭಾಗಗಳ ಶ್ರೇಷ್ಠ ಚಿತ್ರಗಳು ತೆರೆಕಾಣುತ್ತಿವೆ. ಇಂದು ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳಲ್ಲಿ ಮೊದಲನೆಯದಾಗಿ ಗಮನ ಸೆಳೆಯುವುದು ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ 'ನೌವೆಲ್ ವಾಗ್'. ಫ್ರೆಂಚ್ ಸಿನಿಮಾದ ಸುವರ್ಣ ಯುಗವನ್ನು ನೆನಪಿಸುವ ಈ ಸಿನಿಮಾವನ್ನು ರಾತ್ರಿ 8:20 (ಸ್ಕ್ರೀನ್ 3), ರಾತ್ರಿ 7:30 (ಸ್ಕ್ರೀನ್ 6), ಅಥವಾ ಸಂಜೆ 7:20 (ಸ್ಕ್ರೀನ್ 8)ರಲ್ಲಿ ವೀಕ್ಷಿಸಬಹುದು.
ಶಂಕರ್ ಗುರು
ಕನ್ನಡ ಸಿನಿಮಾದ ಅಭಿಮಾನಿಗಳಿಗಾಗಿ ಡಾ. ರಾಜ್‌ಕುಮಾರ್ ಅವರ ಸಾರ್ವಕಾಲಿಕ ಹಿಟ್ 'ಶಂಕರ್ ಗುರು' ಮಧ್ಯಾಹ್ನ 2 ಗಂಟೆಗೆ ಸ್ಕ್ರೀನ್ 6ರಲ್ಲಿ ಪ್ರದರ್ಶನಗೊಳ್ಳಲಿದೆ.
ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್
ಆಧ್ಯಾತ್ಮಿಕ ಕಥಾಹಂದರದ ಥಾಯ್ ಚಿತ್ರ 'ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್' ಸಂಜೆ 4:10ಕ್ಕೆ ವಿಐಪಿ ಸ್ಕ್ರೀನ್‌ನಲ್ಲಿ ಪ್ರದರ್ಶನವಾಗಲಿದೆ.
ದಿ ಪ್ರೆಸಿಡೆಂಟ್ಸ್ ಕೇಕ್, ಮ್ಯಾನ್ ಆಫ್ ಮಾರ್ಬಲ್
'ದಿ ಪ್ರೆಸಿಡೆಂಟ್ಸ್ ಕೇಕ್' ಸಂಜೆ 5:40ಕ್ಕೆ ತೆರೆಕಾಣಲಿದೆ. ವಿಶ್ವ ಸಿನಿಮಾದ ಇತಿಹಾಸದಲ್ಲಿ ಮೈಲಿಗಲ್ಲಾದ ಅಂದ್ರೆಜ್ ವಾಜ್ದಾ ಅವರ 'ಮ್ಯಾನ್ ಆಫ್ ಮಾರ್ಬಲ್' ಸಂಜೆ 6:50ಕ್ಕೆ ಪ್ರದರ್ಶನಗೊಳ್ಳಲಿದ್ದು, ಪೋಲಿಷ್ ಚಿತ್ರರಂಗದ ಸೊಬಗನ್ನು ಸಾರಲಿದೆ.
ಡಿವೈನ್ ಕಾಮಿಡಿ, ದಿ ಮಾಸ್ಟರ್ ಮೈಂಡ್, ಡ್ರಾಗನ್‌ಫ್ಲೈ,ಗಣರಾಜ್
ಏಷ್ಯನ್ ಸಿನಿಮಾ ವಿಭಾಗದಲ್ಲಿ ಅಲಿ ಅಸ್ಗರಿ ಅವರ 'ಡಿವೈನ್ ಕಾಮಿಡಿ' ಮಧ್ಯಾಹ್ನ 12:30ಕ್ಕೆ ಮತ್ತು ಕೆಲ್ಲಿ ರೀಚಾರ್ಡ್ ಅವರ ಇಂಗ್ಲಿಷ್ ಸಿನಿಮಾ 'ದಿ ಮಾಸ್ಟರ್ ಮೈಂಡ್' ಮಧ್ಯಾಹ್ನ 2:30ಕ್ಕೆ ಪ್ರದರ್ಶನವಾಗಲಿವೆ. ಇನ್ನುಳಿದಂತೆ ಪಾಲ್ ಆಂಡ್ರ್ಯೂ ವಿಲಿಯಮ್ಸ್ ಅವರ 'ಡ್ರಾಗನ್‌ಫ್ಲೈ' ಬೆಳಗ್ಗೆ 11:30ಕ್ಕೆ, ಅಸ್ಸಾಮಿ ಭಾಷೆಯ 'ಗಣರಾಜ್' ಮಧ್ಯಾಹ್ನ 3:00ಕ್ಕೆ ಪ್ರದರ್ಶನಗೊಳ್ಳಲಿದೆ.
ಕ್ಯಾಟನೇ
ರೋಮೇನಿಯನ್ ಸಿನಿಮಾ 'ಕ್ಯಾಟನೇ' ಸಂಜೆ 4:50ಕ್ಕೆ ಸಿನಿಪ್ರಿಯರನ್ನು ರಂಜಿಸಲಿವೆ. ಚಿತ್ರೋತ್ಸವದ ಈ ಸಮಾರೋಪ ದಿನವು ವೈವಿಧ್ಯಮಯ ಕಥೆಗಳ ಮೂಲಕ ಪ್ರೇಕ್ಷಕರಿಗೆ ಸ್ಮರಣೀಯ ಅನುಭವ ನೀಡಲಿದೆ.

