ರಮೇಶ್ ಅರವಿಂದ್ ನಟನೆಯ ದೈಜಿ ಚಿತ್ರದಲ್ಲಿ ದಿಯಾ ಖ್ಯಾತಿಯ ಖುಷಿ ರವಿ
x

'ದಿಯಾ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಖುಷಿ ರವಿ ದೈಜಿ ಚಿತ್ರತಂಡಗೆ ಸೇರ್ಪಡೆಯಾಗಿದ್ದಾರೆ.

ರಮೇಶ್ ಅರವಿಂದ್ ನಟನೆಯ 'ದೈಜಿ' ಚಿತ್ರದಲ್ಲಿ 'ದಿಯಾ' ಖ್ಯಾತಿಯ ಖುಷಿ ರವಿ

ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ, ನಕುಲ್ ಅಭಯಂಕರ್ ಮತ್ತು ಸಚಿನ್ ಬಸ್ರೂರ್ ಅವರ ಸಂಗೀತವಿದ್ದು, ದಿಗಂತ್, ರಾಧಿಕಾ ನಾರಾಯಣ್ ಹಾಗೂ ಅವಿನಾಶ್ ಅವರಂತಹ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ನಟ ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರ 'ದೈಜಿ' ಚಿತ್ರತಂಡಕ್ಕೆ 'ದಿಯಾ' ಚಿತ್ರದ ನಟಿ ಖುಷಿ ರವಿ ಸೇರ್ಪಡೆಯಾಗಿದ್ದಾರೆ. ಈ ಸಿನಿಮಾದಲ್ಲಿ ಖುಷಿ ಅವರು ಬಹಳ ವಿಶಿಷ್ಟವಾದ ಹಾಗೂ 'ಆಧ್ಯಾತ್ಮಿಕ ಹಿನ್ನೆಲೆ' ಹೊಂದಿರುವ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಶಿವಾಜಿ ಸುರತ್ಕಲ್' ಅಂತಹ ಹಿಟ್ ಚಿತ್ರಗಳನ್ನು ನೀಡಿದ ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ವಿಬಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಕೇವಲ ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿಯಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್ ಹಾಗೂ ಗುರು ದೇಶಪಾಂಡೆ ಮುಂತಾದ ತಾರಾಬಳಗವಿದೆ.

ಸದ್ಯ ಚಿತ್ರತಂಡವು ವಿ.ಎಫ್.ಎಕ್ಸ್ (VFX) ಕೆಲಸಗಳಲ್ಲಿ ಕಾರ್ಯನಿರತವಾಗಿದ್ದು, ಈ ತಾಂತ್ರಿಕ ಕೆಲಸಗಳು ಮುಗಿದ ತಕ್ಷಣವೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು ನಿರ್ಧರಿಸಿದೆ. ಚಿತ್ರಕ್ಕೆ ಮೂವರು ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಜ್ಯೂಡಾ ಸ್ಯಾಂಡಿ, ನಕುಲ್ ಅಭಯಂಕರ್ ಮತ್ತು ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯಿದ್ದು, ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಶ್ರೀಶ ಕುದುವಳ್ಳಿ ಅವರ ಅದ್ಭುತ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.

Read More
Next Story