ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ಕರಾವಳಿ ಬೆಡಗಿ
x

ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ಕರಾವಳಿ ಬೆಡಗಿ

ದಕ್ಷಿಣ ಭಾರತದ ಖ್ಯಾತ ನಟಿ ಕೃತಿ ಶೆಟ್ಟಿ ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಗ್ಲಾಮರಸ್ ಫೋಟೋಶೂಟ್‌ಗಳ ಮೂಲಕವೇ ಸುದ್ದಿಯಲ್ಲಿದ್ದಾರೆ.


Click the Play button to hear this message in audio format

ದಕ್ಷಿಣ ಭಾರತದ ಖ್ಯಾತ ನಟಿ, 22 ವರ್ಷದ ಕರಾವಳಿ ಬೆಡಗಿ ಕೃತಿ ಶೆಟ್ಟಿ ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 1 ಕೋಟಿಗೂ ಅಧಿಕ ಫಾಲೋವರ್ಸ್‌ ಹೊಂದಿರುವ ಈ ನಟಿ, ತಮ್ಮ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಈ ಹೊಸ ಫೋಟೋಗಳಲ್ಲಿ ಕೃತಿ ಶೆಟ್ಟಿ ಅವರು ಅರ್ಥಿ ಟೋನ್ ಉಡುಪಿನಲ್ಲಿ ಅತ್ಯಂತ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಮೆಟ್ಟಿಲುಗಳ ಮೇಲೆ ಕುಳಿತು ಕ್ಯಾಶುವಲ್ ಆಗಿ ಪೋಸ್ ನೀಡಿರುವ ಅವರ ಈ ಲುಕ್ ನೋಡುಗರ ಗಮನ ಸೆಳೆಯುತ್ತಿದೆ.

ಸ್ಟ್ರ್ಯಾಪ್‌ಲೆಸ್ ಪ್ಯಾಟರ್ನ್ ಜಂಪ್‌ಸೂಟ್ ಧರಿಸಿರುವ ಅವರು, ಹೆಗಲ ಮೇಲಿಂದ ಜಾರುತ್ತಿರುವ ಶ್ರಗ್‌ನೊಂದಿಗೆ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಅಲೆಅಲೆಯಾದ ಕೂದಲು, ಮಿನಿಮಲ್ ಮೇಕಪ್ ಮತ್ತು ಬರಿಗಾಲಿನ ಪೋಸ್‌ನಲ್ಲಿ ಕೃತಿ ಅವರ ಈ ನೈಸರ್ಗಿಕ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಈ ವರ್ಷ ತೆರೆಕಂಡ ಅವರ 'ವಾ ವಾತಿಯಾರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಕೃತಿಗೆ ಸ್ವಲ್ಪ ನಿರಾಸೆ ಮೂಡಿಸಿದೆ. ಆದರೂ ಅವರು ಭರವಸೆ ಕಳೆದುಕೊಂಡಿಲ್ಲ.

ಸದ್ಯ ಅವರ ಕೈಯಲ್ಲಿ 'ಲವ್ ಇನ್ಶೂರೆನ್ಸ್ ಕಂಪನಿ' ಮತ್ತು 'ಜೀನಿ' (Genie) ಎಂಬ ಎರಡು ದೊಡ್ಡ ಪ್ರಾಜೆಕ್ಟ್‌ಗಳಿದ್ದು, ಈ ಚಿತ್ರಗಳ ಮೂಲಕ ಕೃತಿ ಶೆಟ್ಟಿ ಭರ್ಜರಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

Read More
Next Story