
‘ರಾನಿ’ ಈಗ ಒಟಿಟಿ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.
ಒಟಿಟಿಯಲ್ಲಿ ಕಿರಣ್ ರಾಜ್ ‘ರಾನಿ’ ಸಿನಿಮಾ ಅಬ್ಬರ
ಸ್ಟಾರ್ ಕ್ರಿಯೇಷನ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ಬಂಡವಾಳ ಹೂಡಿದ್ದಾರೆ.
ಕಿರುತೆರೆಯ ಮೂಲಕ ಮನೆಮಾತಾಗಿದ್ದ ನಟ ಕಿರಣ್ ರಾಜ್ ಅಭಿನಯದ ಹೈ-ವೋಲ್ಟೇಜ್ ಆ್ಯಕ್ಷನ್ ಸಿನಿಮಾ ‘ರಾನಿ’ ಈಗ ಒಟಿಟಿ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮತ್ತು ವಿಮರ್ಶಕರ ಮನಗೆದ್ದಿದ್ದ ಈ ಚಿತ್ರವು ಜನವರಿ 9 ZEE5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದು, ಡಿಜಿಟಲ್ ವೇದಿಕೆಯಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ವಿಶೇಷವೆಂದರೆ, ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕಿರಣ್ ರಾಜ್ ಅವರ ಮಾಸ್ ಅವತಾರಕ್ಕೆ ರಾಧ್ಯ, ಸಮೀಕ್ಷಾ ಮತ್ತು ಅಪೂರ್ವ ಎಂಬ ಮೂವರು ಸುಂದರ ನಾಯಕಿಯರು ಸಾಥ್ ನೀಡಿದ್ದಾರೆ. ಸ್ಯಾಂಡಲ್‌ವುಡ್‌ನ ದಿಗ್ಗಜ ನಟರಾದ ರವಿಶಂಕರ್, ಬಿ. ಸುರೇಶ್, ಯಶ್ ಶೆಟ್ಟಿ, ಉಗ್ರಂ ಮಂಜು, ಉಗ್ರಂ ರವಿ ಹಾಗೂ ಧರ್ಮಣ್ಣ ಕಡೂರ್ ಅವರಂತಹ ಪ್ರಬಲ ತಾರಾಗಣ ಈ ಚಿತ್ರದ ತೂಕವನ್ನು ಹೆಚ್ಚಿಸಿದೆ.
ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಮತ್ತು ರಾಘವೇಂದ್ರ ಕೋಲರ್ ಅವರ ಆಕರ್ಷಕ ಛಾಯಾಗ್ರಹಣ ‘ರಾನಿ’ ಚಿತ್ರಕ್ಕೆ ತಾಂತ್ರಿಕ ಮೆರುಗು ನೀಡಿದೆ. ಗ್ಯಾಂಗ್‌ಸ್ಟರ್ ಹಿನ್ನೆಲೆಯ ಕಥೆಯ ಜೊತೆಗೆ ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಒಟಿಟಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಬೆಳ್ಳಿಪರದೆಯ ಮೇಲೆ ಸದ್ದು ಮಾಡಿದ್ದ ರಾನಿ, ಈಗ ನಿಮ್ಮ ಮನೆಯ ಸ್ಕ್ರೀನ್ ಮೇಲೂ ‘ರೂಲರ್’ ಆಗಿ ಮಿಂಚುತ್ತಿದ್ದಾನೆ.

