
'ಖಲನಾಯಕ್' ಚಿತ್ರದ ಅಧಿಕೃತ ಸೀಕ್ವೆಲ್ 'ಖಲನಾಯಕ್ ರಿಟರ್ನ್ಸ್' ಅನ್ನು ಆಸ್ಪೆಕ್ಟ್ ಪ್ರೊಡಕ್ಷನ್ ಘೋಷಿಸಿದೆ.
"ನಾಯಕ್ ನಹೀ.. ಖಲ್‌ನಾಯಕ್ ಹೂ ಮೈ": ಮೂರು ದಶಕಗಳ ಬಳಿಕ ಮತ್ತೆ ತೆರೆಗೆ ಬರಲಿದ್ದಾನೆ 'ಬಲ್ಲುʼ
ಬಳ್ಳು ಈಸ್ ಬ್ಯಾಕ್. 1993ರ ಕಲ್ಟ್ ಕ್ಲಾಸಿಕ್ 'ಖಲನಾಯಕ್' ಚಿತ್ರದ ಅಧಿಕೃತ ಸೀಕ್ವೆಲ್ 'ಖಲನಾಯಕ್ ರಿಟರ್ನ್ಸ್' ಅನ್ನು ಆಸ್ಪೆಕ್ಟ್ ಪ್ರೊಡಕ್ಷನ್ ಘೋಷಿಸಿದೆ.
ಬಾಲಿವುಡ್‌ನ ಐಕಾನಿಕ್ ವಿಲನ್ 'ಬಳ್ಳು ಬಲರಾಮ್' ಬರೋಬ್ಬರಿ 32 ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ಬೆಳ್ಳಿಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. 1993ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬ್ಲಾಕ್‌ಬಸ್ಟರ್ 'ಖಳ್ನಾಯಕ್' ಚಿತ್ರದ ಮುಂದುವರಿದ ಭಾಗ 'ಖಳ್ನಾಯಕ್ ರಿಟರ್ನ್ಸ್' ನಿರ್ಮಾಣಕ್ಕೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಆಸ್ಪೆಕ್ಟ್ ಗ್ಲೋಬಲ್ ವೆಂಚರ್ಸ್‌ನ ಮನರಂಜನಾ ವಿಭಾಗವಾದ 'ಆಸ್ಪೆಕ್ಟ್ ಪ್ರೊಡಕ್ಷನ್' ಈ ಬಹುನಿರೀಕ್ಷಿತ ಚಿತ್ರದ ನಿರ್ಮಾಣ ಹಕ್ಕುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾಲಿವುಡ್ ಅಂಗಳದಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ.
ಮತ್ತೆ 'ಬಳ್ಳು' ಅವತಾರದಲ್ಲಿ ಸಂಜಯ್ ದತ್
ಅಂದು ಸುಭಾಷ್ ಘಾಯ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮೂಲ 'ಖಳ್ನಾಯಕ್' ಸಿನಿಮಾ ಬಾಲಿವುಡ್ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ದಾಖಲಾಗಿದೆ. ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಾಧುರಿ ದೀಕ್ಷಿತ್ ಅವರ ಅಮೋಘ ನಟನೆ ಹಾಗೂ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳಿಂದಾಗಿ ಈ ಸಿನಿಮಾ ದಶಕಗಳ ಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ವಿಶೇಷವೆಂದರೆ, ಸಂಜಯ್ ದತ್ ಅವರ ಸಿನಿಪಯಣಕ್ಕೆ ಬಹುದೊಡ್ಡ ತಿರುವು ನೀಡಿದ್ದ ಕಲ್ಟ್ ಕ್ಲಾಸಿಕ್ 'ಬಳ್ಳು ಬಲರಾಮ್' ಪಾತ್ರಕ್ಕೆ ದಶಕಗಳ ಬಳಿಕ ಅವರೇ ಮತ್ತೆ ಜೀವ ತುಂಬುತ್ತಿದ್ದಾರೆ. ಅಂದು ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದ್ದ ಅದೇ ಹಳೆಯ ಖದರ್ ಅನ್ನು, ಆಧುನಿಕ ಶೈಲಿಯೊಂದಿಗೆ ಮರಳಿ ತೆರೆಗೆ ತರಲು ಭರದ ಸಿದ್ಧತೆಗಳು ನಡೆಯುತ್ತಿವೆ.
ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಾಧುರಿ ದೀಕ್ಷಿತ್ ಅವರ ಅದ್ಭುತ ನಟನೆ ಹಾಗೂ ಸೂಪರ್ ಹಿಟ್ ಹಾಡುಗಳಿಂದಾಗಿ ಈ ಸಿನಿಮಾ ದಶಕಗಳ ಕಾಲ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಹಳೆಯ ನೆನಪು
ಆಸ್ಪೆಕ್ಟ್ ಗ್ಲೋಬಲ್ ವೆಂಚರ್ಸ್‌ನ ಅಧ್ಯಕ್ಷರಾದ ಅಕ್ಷಾ ಕಾಂಬೋಜ್ ಮಾತನಾಡಿ, "ಖಲನಾಯಕ್ ಚಿತ್ರಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆಯಿದೆ. ಆ ಪರಂಪರೆಯನ್ನು ಗೌರವಿಸುತ್ತಲೇ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಕಥೆಯನ್ನು ರೂಪಿಸುವುದು ನಮ್ಮ ಉದ್ದೇಶ," ಎಂದಿದ್ದಾರೆ. ಕಂಪನಿಯ ಸಿಇಒ ಅಭಿಷೇಕ್ ಶರ್ಮಾ ಕೂಡ ಈ ಪ್ರಾಜೆಕ್ಟ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಇದು ನಾಸ್ಟಾಲ್ಜಿಯಾ ಮತ್ತು ಆಧುನಿಕ ಚಿತ್ರಕಥೆಯ ಅದ್ಭುತ ಸಮ್ಮಿಶ್ರಣವಾಗಲಿದೆ ಎಂದು ತಿಳಿಸಿದ್ದಾರೆ.
ನಾಸ್ಟಾಲ್ಜಿಯಾ ಮತ್ತು ಆಧುನಿಕತೆಯ ಅದ್ಭುತ ಸಮ್ಮಿಲನ
ಈ ಐತಿಹಾಸಿಕ ಪ್ರಾಜೆಕ್ಟ್ ಕುರಿತು ಮಾತನಾಡಿರುವ ಆಸ್ಪೆಕ್ಟ್ ಗ್ಲೋಬಲ್ ವೆಂಚರ್ಸ್‌ನ ಅಧ್ಯಕ್ಷರಾದ ಅಕ್ಷಾ ಕಾಂಬೋಜ್, "ಖಳ್ನಾಯಕ್ ಚಿತ್ರಕ್ಕೆ ತನ್ನದೇ ಆದ ಭವ್ಯವಾದ ಸಾಂಸ್ಕೃತಿಕ ಪರಂಪರೆಯಿದೆ. ಆ ಪರಂಪರೆಯನ್ನು ಗೌರವಿಸುತ್ತಲೇ, ಇಂದಿನ ಕಾಲಘಟ್ಟದ ಪ್ರೇಕ್ಷಕರಿಗೆ ತಕ್ಕಂತೆ ಕಥೆಯನ್ನು ಹೊಸರೂಪದಲ್ಲಿ ಕಟ್ಟಿಕೊಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ," ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಂಪನಿಯ ಸಿಇಒ ಅಭಿಷೇಕ್ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದು, ಈ ಚಿತ್ರವು ಹಳೆಯ ನೆನಪುಗಳ ನಾಸ್ಟಾಲ್ಜಿಯಾ ಹಾಗೂ ಆಧುನಿಕ ಚಿತ್ರಕಥೆಯ ಅತ್ಯುತ್ತಮ ಸಮ್ಮಿಶ್ರಣವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬರೋಬ್ಬರಿ 32 ವರ್ಷಗಳ ನಂತರ ಬರುತ್ತಿರುವ ಈ ಸೀಕ್ವೆಲ್ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಶೀಘ್ರದಲ್ಲೇ ತಾರಾಗಣದ ಅಧಿಕೃತ ಘೋಷಣೆ
ಮೂರು ದಶಕಗಳ ಬಳಿಕ ಸಿದ್ಧವಾಗುತ್ತಿರುವ ಈ ಸೀಕ್ವೆಲ್ ಬಾಲಿವುಡ್ ಚಿತ್ರರಂಗದಲ್ಲಿ ಸಹಜವಾಗಿಯೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಈಗಾಗಲೇ ಚಿತ್ರದ ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡಿರುವ ನಿರ್ಮಾಣ ಸಂಸ್ಥೆಯು, ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ನಿರ್ದೇಶಕರು ಯಾರು ಹಾಗೂ ಬಳ್ಳು ಬಲರಾಮ್ ಎದುರು ಅಬ್ಬರಿಸುವ ಇತರ ಪ್ರಮುಖ ತಾರಾಗಣದಲ್ಲಿ ಯಾರಿರಲಿದ್ದಾರೆ ಎಂಬ ರೋಚಕ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಹಂಚಿಕೊಳ್ಳುವ ನಿರೀಕ್ಷೆಯಿದೆ.

