ಕಾಂತಾರ–1 ಚಿತ್ರಕ್ಕೆ ಚಲನಚಿತ್ರ ಕ್ಷೇತ್ರದ ದಿಗ್ಗಜರಿಂದ ಮೆಚ್ಚುಗೆಯ ಮಹಾಪೂರ
x

'ಕಾಂತಾರ–1' ಚಿತ್ರಕ್ಕೆ ಚಲನಚಿತ್ರ ಕ್ಷೇತ್ರದ ದಿಗ್ಗಜರಿಂದ ಮೆಚ್ಚುಗೆಯ ಮಹಾಪೂರ

ತೆಲುಗಿನ ಸ್ಟಾರ್ ನಟ ಜ್ಯೂ. ಎನ್‌ಟಿಆರ್, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಿಷಬ್ ಶೆಟ್ಟಿ ಸರ್, ಒಬ್ಬ ಅದ್ಭುತ ನಟನಾಗಿ ಮಾತ್ರವಲ್ಲದೆ, ಅದ್ಭುತ ನಿರ್ದೇಶಕನಾಗಿಯೂ ಊಹಿಸಲಾಗದ್ದನ್ನು ಸಾಧಿಸಿದ್ದಾರೆ," ಎಂದು ಹೊಗಳಿದ್ದಾರೆ.


ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ 'ಕಾಂತಾರ: ಅಧ್ಯಾಯ–1' ಸಿನಿಮಾವು ಇಂದು (ಗುರುವಾರ) ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಚಿತ್ರದ ಬಿಡುಗಡೆಯ ಬೆನ್ನಲ್ಲೇ, ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತೆಲುಗು ಚಿತ್ರರಂಗದ ಗಣ್ಯರು ಕೂಡ ಚಿತ್ರತಂಡದ ಪ್ರಯತ್ನವನ್ನು ಕೊಂಡಾಡಿದ್ದಾರೆ. ನಟ ಶಿವರಾಜ್ ಕುಮಾರ್, ಜ್ಯೂ. ಎನ್‌ಟಿಆರ್, ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ತೆಲುಗಿನ ಸ್ಟಾರ್ ನಟ ಜ್ಯೂ. ಎನ್‌ಟಿಆರ್, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, "ಅದ್ಭುತ ಯಶಸ್ಸು ಗಳಿಸಿದ 'ಕಾಂತಾರ–1' ಚಿತ್ರತಂಡಕ್ಕೆ ಅಭಿನಂದನೆಗಳು. ರಿಷಬ್ ಶೆಟ್ಟಿ ಸರ್, ಒಬ್ಬ ಅದ್ಭುತ ನಟನಾಗಿ ಮಾತ್ರವಲ್ಲದೆ, ಅದ್ಭುತ ನಿರ್ದೇಶಕನಾಗಿಯೂ ಊಹಿಸಲಾಗದ್ದನ್ನು ಸಾಧಿಸಿದ್ದಾರೆ," ಎಂದು ಹೊಗಳಿದ್ದಾರೆ. ಜೊತೆಗೆ, ರಿಷಬ್ ಅವರ ಯೋಚನೆಗಳನ್ನು ಬೆಂಬಲಿಸಿದ ಹೊಂಬಾಳೆ ಫಿಲ್ಮ್ಸ್‌ಗೂ ಅವರು ಧನ್ಯವಾದ ತಿಳಿಸಿದ್ದಾರೆ.

ನಮ್ಮ ನೆಲದ ಕಥೆಗೆ ದೇಶವೇ ಮೆಚ್ಚಿದೆ

ನಟ ಶಿವರಾಜ್ ಕುಮಾರ್ ಅವರು, "'ಕಾಂತಾರ' ನಮ್ಮ ನೆಲದ ಕಥೆ, ನಮ್ಮ ನಾಡಿನ ಕಥೆ. ಇಂದು 'ಕಾಂತಾರ'ವನ್ನು ಇಡೀ ದೇಶವೇ ಮೆಚ್ಚುತ್ತಿರುವುದು ಹೆಮ್ಮೆಯ ವಿಷಯ," ಎಂದು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, "'ಕಾಂತಾರ ಅಧ್ಯಾಯ–1' ಜಾನಪದ, ನಂಬಿಕೆ ಮತ್ತು ಮಾನವ ಭಾವನೆಗಳ ಆಕರ್ಷಕ ನಿರೂಪಣೆಯಾಗಿದೆ. ಇದು ಒಂದು ಅದ್ಭುತ ಸಿನಿಮೀಯ ಅನುಭವ. ರಿಷಬ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ," ಎಂದು ಶ್ಲಾಘಿಸಿದ್ದಾರೆ. "ಬೆರಗುಗೊಳಿಸುವ ಛಾಯಾಗ್ರಹಣ ಮತ್ತು ಮನಮುಟ್ಟುವ ಸಂಗೀತವು ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ," ಎಂದು ಹೇಳುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Read More
Next Story