
'ಕಾಂತಾರ: ಅಧ್ಯಾಯ 1'
'ಕಾಂತಾರ: ಅಧ್ಯಾಯ 1'| ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ, ಜಾಗತಿಕವಾಗಿ 600 ಕೋಟಿ ದಾಟಿದ ಸಿನಿಮಾ
'ಕಾಂತಾರ: ಅಧ್ಯಾಯ 1 ಜಾಗತಿಕ ಗಳಿಕೆ 600 ಕೋಟಿ ರೂ. ದಾಟಿದ್ದು, 2025 ರಲ್ಲಿ 'ಛಾವಾ' ನಂತರ ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ 'ಕಾಂತಾರ: ಅಧ್ಯಾಯ 1' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದು, ಈ ಬ್ಲಾಕ್‌ಬಸ್ಟರ್ ಚಲನಚಿತ್ರವು ದೇಶೀಯವಾಗಿ 500 ಕೋಟಿ ರೂ.ಗಡಿಯನ್ನು ದಾಟಿದೆ ಮತ್ತು ಎರಡನೇ ವಾರಾಂತ್ಯದಲ್ಲಿ ಜಾಗತಿಕವಾಗಿ 600 ರೂ.ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ.
ಸಿನಿಮಾ ಬಿಡುಗಡೆಯಾದ ಎರಡನೇ ಭಾನುವಾರದಂದು (11 ನೇ ದಿನ) ಈ ಚಿತ್ರವು ಅಂದಾಜು 45 ಕೋಟಿ ರೂ. ಗಳಿಸಿದೆ. ಜಾಗತಿಕ ಗಳಿಕೆ 600 ಕೋಟಿ ರೂ. ದಾಟಿದ್ದು, 2025 ರಲ್ಲಿ 'ಛಾವಾ' ನಂತರ ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಾದೇಶಿಕ ಗಳಿಕೆಗಳ ವಿವರ
ಕನ್ನಡ ಆವೃತ್ತಿಯಿಂದ: 12.47 ರೂ.ಕೋಟಿ
ಹಿಂದಿ ಆವೃತ್ತಿಯಿಂದ: 13.47 ರೂ.ಕೋಟಿ
ತಮಿಳು ಆವೃತ್ತಿಯಿಂದ: 5.62 ರೂ. ಕೋಟಿ
ತೆಲುಗು ಆವೃತ್ತಿಯಿಂದ: 4.8 ರೂ.ಕೋಟಿ
ಮಲಯಾಳಂ ಮಾರುಕಟ್ಟೆಗಳಿಂದ: 3.41 ರೂ.ಕೋಟಿ ರೂ. ಗಳಿಕೆ ಮಾಡಿದೆ.
ಈ ಸಾಧನೆಯ ಮೂಲಕ 'ಕಾಂತಾರ' ದೇಶೀಯವಾಗಿ 500 ರೂ.ಕೋಟಿ ಗಳಿಸಿದ ಭಾರತದ 16 ನೇ ಮತ್ತು ದಕ್ಷಿಣ ಭಾರತದ 9 ನೇ ಚಿತ್ರವಾಗಿ ಹೊರಹೊಮ್ಮಿದೆ.
ಗಾಂಧಿ ಜಯಂತಿ ಮತ್ತು ದಸರಾ ಹಬ್ಬದ ದಿನವಾದ ಅಕ್ಟೋಬರ್ 2 ರಂದು ಬಿಡುಗಡೆಯಾದ 'ಕಾಂತಾರ', ಎಲ್ಲಾ ಭಾಷೆಗಳಲ್ಲಿ ಪ್ರಾರಂಭಿಕ ದಿನದಲ್ಲಿ 60 ರೂ.ಕೋಟಿಗೂ ಹೆಚ್ಚು ಸಂಗ್ರಹಿಸುವ ಮೂಲಕ ಭರ್ಜರಿ ಆರಂಭವನ್ನು ಪಡೆದಿತ್ತು. ಎರಡನೇ ದಿನ ಕೊಂಚ ಕುಸಿತ ಕಂಡರೂ, ಬೇಗನೆ ಚೇತರಿಸಿಕೊಂಡು ಕೇವಲ ನಾಲ್ಕು ದಿನಗಳಲ್ಲಿ 220 ರೂ.ಕೋಟಿ ಮೀರಿತ್ತು. ಎರಡನೇ ವಾರದಲ್ಲಿ ಶುಕ್ರವಾರ (9 ನೇ ದಿನ) 22.25 ರೂ.ಕೋಟಿ ಗಳಿಸಿತ್ತು. ಶನಿವಾರ ಈ ಗಳಿಕೆಯಲ್ಲಿ ಶೇ. 75 ರಷ್ಟು ಗಣನೀಯ ಏರಿಕೆ ಕಂಡು ಬಂದಿತ್ತು. ಭಾನುವಾರದಂದು ಮತ್ತೆ39 ರೂ.ಕೋಟಿ ಗಳಿಸಿದ್ದು, ಆ ವಾರದ ದೇಶೀಯ ಒಟ್ಟು ಗಳಿಕೆ ಸುಮಾರು 437.65 ರೂ.ಕೋಟಿ ತಲುಪಿದೆ. ಜಾಗತಿಕ ಗಳಿಕೆ 600 ರೂ.ಕೋಟಿ ದಾಟಿದ ಈ ಚಿತ್ರವು 2025 ರಲ್ಲಿ 'ಛಾವಾ' ನಂತರ ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾವಿರ ವರ್ಷಗಳ ಹಿಂದಿನ ಕಥೆ
'ಕಾಂತಾರ: ಚಾಪ್ಟರ್ 1' ಚಿತ್ರವು 2022ರಲ್ಲಿ ಬಿಡುಗಡೆಯಾಗಿ, ಕೇವಲ 15 ಕೋಟಿ ಬಜೆಟ್‌ನಲ್ಲಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಜಗತ್ತನ್ನೇ ಬೆರಗುಗೊಳಿಸಿದ್ದ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ. ಈ ಚಿತ್ರವು ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು, ಕರಾವಳಿ ಕರ್ನಾಟಕದ ಕಾಡಿನ ಮಧ್ಯೆ ಇರುವ 'ಈಶ್ವರನ ಹೂದೋಟ' ಎಂಬ ನಿಗೂಢ ಸ್ಥಳದ ಕಥೆಯನ್ನು ಹೇಳುತ್ತದೆ. ರಿಷಬ್ ಶೆಟ್ಟಿ ಅವರೇ ಕಥೆ ಬರೆದು, ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.