ಕಣ್ಣಪ್ಪ: ವಿಷ್ಣು ಮಂಚು ಪೋಸ್ಟರ್‌ ವೈರಲ್‌
x

ಕಣ್ಣಪ್ಪ: ವಿಷ್ಣು ಮಂಚು ಪೋಸ್ಟರ್‌ ವೈರಲ್‌


ವಿಷ್ಣು ಮಂಚು ಅಭಿನಯದ ಕಣ್ಣಪ್ಪ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಮಹಾಶಿವರಾತ್ರಿಯಂದು ಬಿಡುಗಡೆಯಾಗಿರುವ ಪೋಸ್ಟರ್ ವೈರಲ್ ಆಗಿದೆ.

ವಿಷ್ಣು ಮಂಚು ಹೊರತುಪಡಿಸಿ, ಈ ಬಹುಭಾಷಾ ಚಿತ್ರ ದಲ್ಲಿ ಮೋಹನ್ ಲಾಲ್, ಶಿವ ರಾಜಕುಮಾರ್, ಪ್ರಭಾಸ್, ಮೋಹನ್ ಬಾಬು, ಶರತ್ ಕುಮಾರ್ ಮತ್ತು ಬ್ರಹ್ಮಾನಂದಂ ಇದ್ದಾರೆ.

ವಿಷ್ಣು ಮಂಚು ಪೋಸ್ಟರ್‌ ನಲ್ಲಿ ಬಿಲ್ಲು ಮತ್ತು ಬಾಣ ಹಿಡಿದ ಭಕ್ತ ಕಣ್ಣಪ್ಪನ ಪಾತ್ರದಲ್ಲಿ ದ್ದು, ಜಲಪಾತದಿಂದ ಹೊರಬಂದು ಗುರಿಯತ್ತ ಬಾಣ ಹೊಡೆಯುತ್ತಿರುವ ದೃಶ್ಯವಿದೆ. ಭಗವಾನ್ ಶಿವನ ಮೇಲಿನ ಭಕ್ತಿಯನ್ನು ಆಧಾರವಾವಾಗುಳ್ಳ ಚಿತ್ರ ಇದು.

ಈ ದೊಡ್ಡ ಬಜೆಟ್ಟಿನ ಚಲನಚಿತ್ರವನ್ನು 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್ಟೇನ್ಮೆಂಟ್‌ ಜಂಟಿಯಾಗಿ ನಿರ್ಮಿಸುತ್ತಿದ್ದು, ಬಹುತೇಕ ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, 600 ಕ್ಕೂ ಹೆಚ್ಚು ಕಲಾವಿದರು ಮತ್ತು ನಟರು ಇದ್ದಾರೆ.

ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ವಿಷ್ಣು ಮಂಚು ಥ್ರಿಲ್,ʻ ಚಿತ್ರ ನಿರೀಕ್ಷೆಗೂ ಮೀರಿ ಮೂಡಿಬರುತ್ತಿರುವುದು ಸಂತಸ ತಂದಿದೆ.ಕಣ್ಣಪ್ಪ ಇಲ್ಲಿ ಶಿವಭಕ್ತನಾಗಿ ಮಾತ್ರವಲ್ಲದೆ ಯೋಧನಾಗಿಯೂ ಕಾಣಿಸಿಕೊಳ್ಳಲಿದ್ದಾರೆʼ ಎಂದು ಹೇಳಿದ್ದಾರೆ. ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ.

Read More
Next Story