
ಕಾಟನ್ ಪೇಟೆ ಸಿನಿಮಾ ಫೆಬ್ರವರಿ 13ಕ್ಕೆ ಬಿಡುಗಡೆ
ಫೆಬ್ರವರಿ 13ಕ್ಕೆ 'ಕಾಟನ್ ಪೇಟೆ ಗೇಟ್' ಅದ್ಧೂರಿ ಬಿಡುಗಡೆ
ಆರ್. ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್. ಶ್ರೀನಿವಾಸ್ ಅವರ ಬಹುನಿರೀಕ್ಷಿತ ಚಿತ್ರ "ಕಾಟನ್ ಪೇಟೆ ಗೇಟ್" ಫೆಬ್ರವರಿ 13 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಆರ್. ಎಸ್. ಪ್ರೊಡಕ್ಷನ್ಸ್' ನಿರ್ಮಾಣದ ಕಾಟನ್ ಪೇಟೆ ಗೇಟ್ ಸಿನಿಮಾ ಫೆಬ್ರವರಿ 13ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಈ ಸಿನಿಮಾವನ್ನು ವೈ. ರಾಜಕುಮಾರ್ ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿದೆ. ಕಮರ್ಷಿಯಲ್ ಎಲಿಮೆಂಟ್ಸ್ ಹೊಂದಿರುವ ಈ ಸಿನಿಮಾದಲ್ಲಿ ಆಕ್ಷನ್, ಕಾಮಿಡಿ ಹಾಗೂ ಭಾವನಾತ್ಮಕ ಸನ್ನಿವೇಶಗಳ ಸಮಾಗಮವಿದ್ದು, ಸಕಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಮೂಡಿಸಿದೆ. ಚಿತ್ರದ ಮೇಕಿಂಗ್ ಗುಣಮಟ್ಟ ಹಾಗೂ ಸ್ಟಾರ್ ನಿರ್ಮಾಣ ಸಂಸ್ಥೆಯ ಹಿನ್ನೆಲೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಈ ಚಿತ್ರಕ್ಕೆ ಎನ್. ಎಸ್ ಪ್ರಸು ಅವರ ಸಂಗೀತವಿದ್ದು, ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಯೋಗಿ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ಶಿವ ಸರ್ವಣಿ ಅವರ ಸಂಕಲನ ಇದೆ.
ವೇಣುಗೋಪಾಲ್, ಯಶ್ವನ್, ಸುರಭಿ ತಿವಾರಿ, ಅನುಶಾ ಜೈನ್, ಸುಧೀಕ್ಷಾ ಹಾಗೂ ಕಿಸ್ಲೆ ಚೌಧರಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಉಳಿದಂತೆ ಪಾರ್ಥು, 8pm ಸಾಯಿಕುಮಾರ್, ರಘು ಮತ್ತು ಕಟ್ಟಪ್ಪ ಮುಂತಾದವರು ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

