ಕಂಗನಾ ಹೊಸ ಚಿತ್ರ 'ಭಾರತ ಭಾಗ್ಯ ವಿಧಾತ'
ನಟಿ, ಸಂಸದೆ ಕಂಗನಾ ರನೌತ್ ಅವರು ತಮ್ಮ ಹೊಸ ಚಿತ್ರ ʻಭಾರತ ಭಾಗ್ಯ ವಿಧಾತʼವನ್ನು ಮಂಗಳವಾರ (ಸೆಪ್ಟೆಂಬರ್ 3) ಘೋಷಿಸಿದ್ದಾರೆ.
ಚಿತ್ರವು ಕಾರ್ಮಿಕ ವರ್ಗದ ನಾಯಕರ ಅಮೂಲ್ಯ ಕೊಡುಗೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಮನೋಜ್ ತಪಾಡಿಯಾ ಚಿತ್ರಕಥೆ, ನಿರ್ದೇಶನವಿದ್ದು, ಯುನೋಯಾ ಫಿಲ್ಮ್ಸ್ ಮತ್ತು ಫ್ಲೋಟಿಂಗ್ ರಾಕ್ಸ್ ಎಂಟರ್ಟೇನ್‌ಮೆಂಟ್ ನಿರ್ಮಿಸಲಿವೆ ಎಂದು ಎಕ್ಸ್ ನಲ್ಲಿ ರನೌತ್ ಅವರು ವಿಷಯ ಹಂಚಿಕೊಂಡಿದ್ದಾರೆ.
ನಿಜಜೀವನದ ಹೀರೋಯಿಸಂ: ʻನಿಜ ಜೀವನದ ಹೀರೋಯಿಸಂನ ಮ್ಯಾಜಿಕ್ ನ್ನು ದೊಡ್ಡ ಪರದೆ ಮೇಲೆ ಅನುಭವಿಸಿ! ನಿರ್ಮಾಪಕ ಜೋಡಿ ಬಬಿತಾ ಆಶಿವಾಲ್- ಆದಿ ಶರ್ಮಾ ಮತ್ತು ನಿರ್ದೇಶಕ-ಲೇಖಕ ಮನೋಜ್ ತಪಾಡಿಯಾ, ಯುನೋಯಾ ಫಿಲ್ಮ್ಸ್ ಮತ್ತು ಫ್ಲೋಟಿಂಗ್ ರಾಕ್ಸ್ ಎಂಟರ್‌ಟೇನ್‌ಮೆಂಟ್ ಈ ಸಿನೆಮಾದೊಂದಿಗೆ ಮೊದಲ ಸಾಹಸವನ್ನು ಪ್ರಾರಂಭಿಸಿದೆ,ʼ ಎಂದು ಬರೆದಿದ್ದಾರೆ.
ಯುನೋಯಾ ಫಿಲ್ಮ್ಸ್‌ನ ಬಬಿತಾ ಆಶಿವಾಲ್ ಹಾಗೂ ಫ್ಲೋಟಿಂಗ್ ರಾಕ್ಸ್ ಎಂಟರ್‌ಟೈನ್‌ಮೆಂಟ್‌ನ ಆದಿ ಶರ್ಮಾ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಅನುಮತಿ ಸಿಕ್ಕಿಲ್ಲ: ರನೌತ್ ಅವರ ನಿರ್ದೇಶನದ ʻಎಮರ್ಜೆನ್ಸಿʼ ಸೆನ್ಸಾರ್ ಪ್ರಮಾಣೀಕರಣಕ್ಕೆ ಕಾಯುತ್ತಿದೆ. ಹಲವಾರು ವಿಳಂಬಗಳ ನಂತರ ಚಿತ್ರವನ್ನು ಸೆಪ್ಟೆಂಬರ್ 6 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರನೌತ್ ನಟಿಸಿರುವ ಚಲನಚಿತ್ರವು ಹಲವಾರು ಸಿಖ್ ಸಂಘಟನೆಗಳಿಂದ ಟೀಕೆಗೆ ಗುರಿಯಾಗಿದೆ. ʻಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆʼ ಮತ್ತು ʻತಪ್ಪು ಮಾಹಿತಿ ನೀಡುತ್ತದೆ,ʼ ಎಂದು ಅವು ದೂರಿವೆ.