
ಅಬ್ದಿ ಅಬ್ದಿ’ ಹಾಡಿನಲ್ಲಿ ಕಲ್ಯಾಣಿ
ಅಬ್ದಿ ಅಬ್ದಿ’ ಹಾಡಿನಲ್ಲಿ ಕಲ್ಯಾಣಿ ಪ್ರಿಯದರ್ಶನ್ ʻಬೆಲ್ಲಿ ಡಾನ್ಸ್ʼಗೆ ಅಭಿಮಾನಿಗಳು ಫಿದಾ
ಜಿನಿ ಸಿನಿಮಾದಲ್ಲಿನ ‘ಅಬ್ದಿ ಅಬ್ದಿ’ ಎಂಬ ಹಾಡು ಬಿಡುಗಡೆಯಾಗಿದ್ದು, ಅದರಲ್ಲಿ ಕಲ್ಯಾಣಿ ಅವರ ನೃತ್ಯ ಅಭಿಮಾನಿಗಳ ಮನ ಗೆದ್ದಿದೆ.
ಮಲಯಾಳಂ ಸೂಪರ್‌ಹೀರೋ ಸಿನಿಮಾ ‘ಲೋಕ’ ಯಶಸ್ಸಿನ ನಂತರ, ಕಲ್ಯಾಣಿ ಪ್ರಿಯದರ್ಶನ ಶೀಘ್ರದಲ್ಲೇ ಭುವನೇಶ್ ಅರ್ಜುನನ್ ನಿರ್ದೇಶನದ ತಮಿಳು ಚಿತ್ರ ‘ಜಿನಿ’ಯಲ್ಲಿ ರವಿಮೋಹನ್ ಮತ್ತು ಕೃತಿ ಶೆಟ್ಟಿ ಅವರ ಜೊತೆಯಲ್ಲಿ ತೆರೆಹಂಚಿಕೊಳ್ಳಲಿದ್ದಾರೆ. ಇದೀಗ ಈ ಸಿನಿಮಾದಲ್ಲಿನ ‘ಅಬ್ದಿ ಅಬ್ದಿ’ ಎಂಬ ಹಾಡು ಬಿಡುಗಡೆಯಾಗಿದ್ದು, ಅದರಲ್ಲಿ ಕಲ್ಯಾಣಿ ಅವರ ನೃತ್ಯ ಅಭಿಮಾನಿಗಳ ಮನ ಗೆದ್ದಿದೆ.
ಅಬ್ದಿ ಅಬ್ದಿ ನೃತ್ಯದಲ್ಲಿ ಕಲ್ಯಾಣಿ ಪ್ರಿಯದರ್ಶನ್
“ಒಬ್ಬ ನಟಿಯಾಗಿ, ಹಿಂದೆಂದೂ ಮಾಡದ ಕೆಲಸಗಳನ್ನು ಮಾಡಲು ನಾನು ನನ್ನನ್ನು ಸವಾಲು ಹಾಕಿಕೊಳ್ಳುತ್ತೇನೆ. ಈ ಹಾಡು ಅದರಲ್ಲಿ ಒಂದಾಗಿದೆ. ಇದು ವಾಣಿಜ್ಯ ಹಾಡಾದರೂ, ನಮ್ಮ ನಿರ್ದೇಶಕ ಭುವನೇಶ್ ಇದನ್ನು ಕಥೆಯ ಭಾಗವನ್ನಾಗಿ ಮಾಡಿರುವುದು ಆಶ್ಚರ್ಯಕರ. ಈ ಹಾಡಿನ ಹಿನ್ನೆಲೆ ಚಿತ್ರದಲ್ಲಿ ಹೇಗಿದೆ ಎಂಬುದನ್ನು ನೋಡಲು ಕಾತರರಾಗಿದ್ದೇನೆ. ತುಂಬಾ ಶ್ರಮ ಪಟ್ಟಿದ್ದೇನೆ, ಹೊಸದನ್ನು ಪ್ರಯತ್ನಿಸಿದ್ದೇನೆ. ನಿಮಗೆ ಇಷ್ಟವಾಗಲಿ ಎಂದು ಹಾರೈಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಫಿದಾ
‘ಅಬ್ದಿ ಅಬ್ದಿ’ ವಿಡಿಯೋ ಹಾಡಿನಲ್ಲಿ ಕಲ್ಯಾಣಿ ಮತ್ತು ಕೃತಿ ಕೆಂಪು ಬಣ್ಣದ ಉಡುಪಿನಲ್ಲಿ ಬೆಲ್ಲಿಡ್ಯಾನ್ಸ್ ಮಾಡುತ್ತಿರುವುದು ಕಾಣಿಸುತ್ತದೆ. ಈ ಹಾಡಿನಲ್ಲಿ ರವಿಯೂ ಕಾಣಿಸಿಕೊಂಡಿದ್ದಾರೆ. ‘ಲೋಕ’ ಚಿತ್ರದಲ್ಲಿ ಸೂಪರ್‌ಹೀರೋ ಪಾತ್ರದಲ್ಲಿ ನಟಿಸಿದ ಕಲ್ಯಾಣಿ ‘ಅಬ್ದಿ ಅಬ್ದಿ’ ಹಾಡಿನ ನೃತ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆ ಬಂದಿದೆ.
ಒಬ್ಬ ಅಭಿಮಾನಿ, “ಎರಡನ್ನೂ ಮಾಡಬಲ್ಲ ಹುಡುಗಿಯನ್ನು ಹುಡುಕಿ!” ಇನ್ನೊಬ್ಬರು ಬರೆದಿದ್ದಾರೆ — “#KalyaniPriyadarshan 2025ನೇ ವರ್ಷವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದ್ದಾರೆ!. ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು — “ಹೊಸ ಯುಗದ ಮಯ್ಯಾ ಮಯ್ಯಾ! ಕೃತಿ ಎಂದಿನಂತೆಯೇ ಅಸಾಧಾರಣ, ಆದರೆ ಕಲ್ಯಾಣಿ ಅಚ್ಚರಿ ಮೂಡಿಸಿದ್ದಾರೆ ಎಂದು ಬರೆದಿದ್ದಾರೆ.
ಬಹುತೇಕರು ಕಲ್ಯಾಣಿ ಪ್ರಿಯದರ್ಶನ ಅವರ ವೃತ್ತಿಜೀವನದ ಪರಿವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.“#Loka → #Genie. ‘ಜಿನಿ’ ಚಿತ್ರ ‘ಲೋಕ’ಗೂ ಮೊದಲು ಚಿತ್ರೀಕರಿಸಿದರೂ, ಕಲ್ಯಾಣಿ ಅವರ ಬದಲಾವಣೆ ಅಚ್ಚರಿ ಮೂಡಿಸಿದೆ. ಸೂಪರ್‌ಹೀರೋ ಮಹಿಳೆಯಿಂದ ಗ್ಲಾಮರ್ ನಾಯಕಿಯವರೆಗೆ ಎಂದು ಒಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ಕಲ್ಯಾಣಿ ಪ್ರಿಯದರ್ಶನ ಅವರು ತಮ್ಮ ವಿಶಿಷ್ಟ ನೃತ್ಯ ಶೈಲಿಯಿಂದ ಮತ್ತು ಪಾತ್ರ ವೈವಿಧ್ಯತೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ‘ಜಿನಿ’ ಚಿತ್ರದ ‘ಅಬ್ದಿ ಅಬ್ದಿ’ ಹಾಡು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚಿತ್ರ ಬಿಡುಗಡೆಯ ನಿರೀಕ್ಷೆ ಹೆಚ್ಚಿಸಿದೆ.