ʻಗೋಚರʼ ಗಂಟುಮೂಟೆಯ ಸೀಕ್ವೆಲ್ ಅಲ್ಲ:‌ ರೂಪಾ ರಾವ್
x

ʻಗೋಚರʼ ಗಂಟುಮೂಟೆಯ ಸೀಕ್ವೆಲ್ ಅಲ್ಲ:‌ ರೂಪಾ ರಾವ್

ಗೋಚರ ಒಂದು ಪ್ರವಾಸ ಕಥನ. ನನಗೆ ಇದುವರೆಗೆ ಎದುರಾದ ಅತ್ಯಂತ ಸವಾಲಿನ ಕಥೆಗಳಲ್ಲಿ ಒಂದು ಎಂದು ರೂಪಾ ರಾವ್ ಹೇಳಿದ್ದಾರೆ.


ಚಿತ್ರ ನಿರ್ಮಾಪಕಿ ರೂಪಾ ರಾವ್ ಅವರ 2019 ರ ಸಿನೆಮಾ ʻಗಂಟುಮೂಟೆ ʼ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಅವರು ಈಗ ಹೊಸ ಚಲನಚಿತ್ರವನ್ನು ಘೋಷಿಸಿದ್ದಾರೆ. ಹೊಸ ಚಿತ್ರಕ್ಕೆ ʼಗೋಚರ ʼಎಂಬ ಕುತೂಹಲಕರ ಹೆಸರು ಇಡಲಾಗಿದೆ. ಈ ಚಿತ್ರವು ಅವರ ಮೊದಲ ಸಿನೆಮಾದ ಸೀಕ್ವೆಲ್‌ ಎಂಬ ಊಹಾಪೋಹ ಹುಟ್ಟುಹಾಕಿದೆ. ವಾಸ್ತವವಾಗಿ, ಸಾಮಾಜಿಕ ಮಾಧ್ಯಮದಲ್ಲಿ ʻಗೋಚರʼ ಸೀಕ್ವೆಲ್‌ ಆಗಿರುವ ಸಾಧ್ಯತೆಯೇ ಹೆಚ್ಚು ಎಂಬ ವ್ಯಾಪಕ ಅಭಿಪ್ರಾಯ ಇದೆ.

ಸೂಕ್ಷ್ಮ ಮತ್ತು ಶಕ್ತಿಯುತ ಕಥೆ ಹೇಳುವಿಕೆಗೆ ಹೆಸರುವಾಸಿಯಾಗಿರುವ ರೂಪಾ ಅವರ ಚೊಚ್ಚಲ ಚಿತ್ರವು ಹದಿಹರೆಯ, ಅಸ್ಮಿತೆ ಮತ್ತು ಯೌವನಾವಸ್ಥೆಯ ಕಹಿ ಸತ್ಯಗಳ ಅಧಿಕೃತ ಚಿತ್ರಣಕ್ಕಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

2019 ರಲ್ಲಿ ಬಿಡುಗಡೆಯಾದ ʻಗಂಟುಮೂಟೆʼ ಶಾಲೆ, ಪ್ರೀತಿ ಮತ್ತು ಸಾಮಾಜಿಕ ನಿರೀಕ್ಷೆಗಳ ಸವಾಲುಗಳನ್ನು ನಿರ್ವಹಿಸುವ ಪ್ರೌಢಶಾಲೆ ವಿದ್ಯಾರ್ಥಿನಿ ಮೀರಾಳ ಜೀವನವನ್ನು ಕೇಂದ್ರವಾಗಿಟ್ಟುಕೊಂಡಿದೆ. ಚಲನಚಿತ್ರವು ಸೂಕ್ಷ್ಮತೆ, ಭಾವನಾತ್ಮಕ ಆಳ ಮತ್ತು ಗಟ್ಟಿ ಅಭಿನಯಕ್ಕಾಗಿ, ವಿಶೇಷವಾಗಿ, ನಾಯಕಿ ತೇಜು ಬೆಳವಾಡಿ ಅವರ ಪಾತ್ರ ನಿರ್ವಹಣೆ, ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿತು.

ʻಗಂಟುಮೂಟೆʼಯ ಮುಂದುವರಿದ ಭಾಗವೇ?: ʻಸಿನಿಮಾದ ಬಗ್ಗೆ ಮಾತನಾಡಲು ಇನ್ನೂ ಸಮಯವಿದೆ. ಇದು ಪ್ರವಾಸದ ಚಿತ್ರ ಎಂದಷ್ಟೇ ಹೇಳಬಲ್ಲೆ. ಇದು ಸೀಕ್ವೆಲ್‌ ಅಥವಾ ಅಲ್ಲವೇ ಎಂಬ ಬಗ್ಗೆ ಅನೇಕರಿಗೆ ಕುತೂಹಲವಿದೆ. ಇದು ಸೀಕ್ವೆಲ್ ಆಗಿರಲಿ ಅಥವಾ ಸ್ವತಂತ್ರ ಸಿನೆಮಾ ಆಗಿರಲಿ; ಒಂದು ಮಾತ್ರ ಗ್ಯಾರಂಟಿ- ಇದು ಗಂಟುಮೂಟೆ ಅಲ್ಲ. ಗೋಚರದ ವಿಷಯದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಹೇಳುತ್ತೇನೆ. ಏಕೆ ಈ ಹೇಳಿಕೆ ಎನ್ನುವುದು ಚಲನಚಿತ್ರವನ್ನು ನೋಡಿದಾಗ ತಿಳಿಯುತ್ತದೆ, ʼಎಂದು ರೂಪಾ ದ ಫೆಡರಲ್‌ಗೆ ತಿಳಿಸಿದರು.



ಕುತೂಹಲಕರ ಅಂಶವೆಂದರೆ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ರೂಪಾ ಅವರು ಹೀಗೆ ಬರೆದಿದ್ದಾರೆ; ಇದು ಈವರೆಗೆ ನನಗೆ ಎದುರಾದ ಅತ್ಯಂತ ಸವಾಲಿನ ಕಥೆಗಳಲ್ಲಿ ಒಂದು. 'ನೀವು ಚಲಿಸಿದಾಗ ಮಾತ್ರ ನೀವು ನಿಮ್ಮನ್ನು ಕಂಡುಕೊಳ್ಳಬಹುದು(You can find only when you move)ʼ ಎಂಬುದು ಚಿತ್ರದ ಅಡಿಬರಹ.

ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪಾ ಮತ್ತು ಸಹದೇವ್ ಕೆಳವಾಡಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಇವರು ಗಂಟುಮೂಟೆಯನ್ನು ನಿರ್ಮಿಸಿದ್ದರು. ತೇಜು ಬೆಳವಾಡಿ ಮತ್ತು ನಿಶ್ಚಿತ್ ಕೊರೋಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಳವಾಡಿ ನಿರ್ದೇಶನದ ಕೆಂಡ ಚಲನಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read More
Next Story