ಪಾಕಿಸ್ತಾನದ ಕರಾಚಿಯಲ್ಲೂ ಮಹಾವತಾರ್ ನರಸಿಂಹ ಪ್ರದರ್ಶನ
x

ಪಾಕಿಸ್ತಾನದ ಕರಾಚಿಯಲ್ಲೂ 'ಮಹಾವತಾರ್ ನರಸಿಂಹ' ಪ್ರದರ್ಶನ

ಪಾಕಿಸ್ತಾನದ ಕರಾಚಿಯಲ್ಲೂ 'ಮಹಾವತಾರ್ ನರಸಿಂಹ' ಪ್ರದರ್ಶನ

ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ, ಕರಾಚಿಯ ಸ್ವಾಮಿ ನಾರಾಯಣ ಮಂದಿರದಲ್ಲಿ 'ಮಹಾವತಾರ್ ನರಸಿಂಹ' ಸಿನಿಮಾದ ಸಾರ್ವಜನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.


Click the Play button to hear this message in audio format

ಈ ವರ್ಷ ಬಿಡುಗಡೆಯಾದ ಯಶಸ್ವಿ ಅನಿಮೇಶನ್‌ ಭಕ್ತಿ ಪ್ರಧಾನ ಚಿತ್ರಗಳಲ್ಲಿ 'ಮಹಾವತಾರ್ ನರಸಿಂಹ' ಕೂಡ ಒಂದು. ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದ ಈ ಚಿತ್ರವು ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ, ನಂತರ ಇತರ ಭಾಷೆಗಳಿಗೆ ಡಬ್ ಆಗಿ ಬ್ಲಾಕ್‌ಬಸ್ಟರ್ ಆಗಿತ್ತು. ಈ ಸಿನಿಮಾದ ಯಶಸ್ಸು ಇದೀಗ ಪಾಕಿಸ್ತಾನದ ಕರಾಚಿವರೆಗೂ ತಲುಪಿದೆ.

ಇಸ್ಲಾಮಿಕ್ ಪ್ರಬಲ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಕರಾಚಿಯ ಸ್ವಾಮಿ ನಾರಾಯಣ ಮಂದಿರದಲ್ಲಿ ಈ ಚಿತ್ರದ ಸಾರ್ವಜನಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಪ್ರದರ್ಶನದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಕ್ತ ಪ್ರಹ್ಲಾದ–ಹಿರಣ್ಯಕಶಿಪು ಪೌರಾಣಿಕ ಸಂಭ್ರಮವನ್ನು ಮಿಶ್ರ ತಂತ್ರಜ್ಞಾನ (2D–3D) ಅನಿಮೇಷನ್ ಮೂಲಕ ಮರು ನಿರ್ಮಿಸಿರುವ ಮಹಾವತಾರ್ ನರಸಿಂಹ ಚಿತ್ರದಲ್ಲಿ ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ದೃಶ್ಯ ವೈಭವವೇ ಚಿತ್ರದ ಸೆಲ್ಲಿಂಗ್ ಪಾಯಿಂಟ್ ಆಗಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್, ಕಲೀಮ್ ಪ್ರೊಡಕ್ಷನ್ಸ್ ಜೊತೆಗೂಡಿ ನಿರ್ಮಿಸಿವೆ. ಪ್ರಹ್ಲಾದನ ಭಕ್ತಿ, ಹಿರಣ್ಯಕಶಿಪುವಿನ ಅಹಂಕಾರ ಮತ್ತು ನರಸಿಂಹ ಅವತಾರದ ಕ್ಲೈಮ್ಯಾಕ್ಸ್ ಅನ್ನು ಆಧುನಿಕ ಪ್ರೇಕ್ಷಕರಿಗೆ ಸೂಟಾಗುವ ರೀತಿಯಲ್ಲಿ ತೋರಿಸಿರುವುದಕ್ಕೆ ಸಿನಿಮಾ ವಲಯದಿಂದ ಭಾರಿ ಮೆಚ್ಚುಗೆ ಸಿಕ್ಕಿದೆ.

ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಮಹಾವತಾರ್ ನರಸಿಂಹ ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ವಸೂಲು ಮಾಡಿ, 2025ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಟಾಪ್ ಲಿಸ್ಟ್‌ನಲ್ಲಿ ಸೇರ್ಪಡೆಗೊಂಡಿದೆ. ಜುಲೈ 25ರಿಂದ ಭಾರತದಲ್ಲಿ ಥಿಯೇಟ್ರಿಕಲ್ ರನ್ ಆರಂಭಿಸಿದ ಈ ಚಿತ್ರ, ಜುಲೈ 31ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಶಿಯಾ ಹಾಗೂ ಯೂರೋಪಿನ ಹಲವು ದೇಶಗಳಲ್ಲಿ ಹಂತ ಹಂತವಾಗಿ ರಿಲೀಸ್ ಆಗಿ, ಅಕಾಡೆಮಿ ಈಗ ಪ್ರಕಟಿಸಿರುವ ಉದ್ದಪಟ್ಟಿಯಿಂದ ಕೇವಲ ಐದು ಚಿತ್ರಗಳು ಮಾತ್ರ ಅಂತಿಮ ನಾಮನಿರ್ದೇಶನ ಹಂತಕ್ಕೆ ಬರಲಿದ್ದು, ಆ ಫೈನಲ್ ಲಿಸ್ಟ್ ಜನವರಿ 22, 2026ರಂದು ಹೊರಬೀಳಲಿದೆ.

Read More
Next Story