ಬಾಕ್ಸಾಫೀಸ್‌ನಲ್ಲಿ 'ಕಲ್ಕಿ' ಗಳಿಸಿದ್ದೆಷ್ಟು?
ಭಾರತದಲ್ಲಿ 'ಕಲ್ಕಿ 2898 AD' ಹಿಂದಿ ವರ್ಷನ್ ಮೊದಲ ಎರಡು ದಿನಗಳಲ್ಲಿ 45. 75 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು.
ಪ್ರಭಾಸ್ - ದೀಪಿಕಾ ಪಡುಕೋಣೆ ನಟನೆಯ 'ಕಲ್ಕಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮುಂದುವರೆದಿದೆ. ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ.
ಭಾರತದಲ್ಲಿ 'ಕಲ್ಕಿ 2898 AD' ಹಿಂದಿ ವರ್ಷನ್ ಮೊದಲ ಎರಡು ದಿನಗಳಲ್ಲಿ 45. 75 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. 3ನೇ ದಿನ 15 ಕೋಟಿ ದಾಟಿದೆ ಎನ್ನಲಾಗ್ತಿದೆ. ಆಂಧ್ರ, ತೆಲಂಗಾಣದಲ್ಲಿ 20 ಕೋಟಿ ರೂ. ಸೇರಿ ವಿಶ್ವದಾದ್ಯಂತ 3ನೇ ದಿನ ಸಿನಿಮಾ 55 ಕೋಟಿ ರೂ. ಗಳಿಕೆ ಕಂಡಿರುವ ಅಂದಾಜಿದೆ. 2 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 298 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು.
3ನೇ ದಿನಕ್ಕೆ 300 ಕೋಟಿ ರೂ. ದಾಟಿ ವಿಶ್ವದಾದ್ಯಂತ 'ಕಲ್ಕಿ' ದರ್ಬಾರ್ ಮುಂದುವರೆದಿದೆ. ಭಾನುವಾರ(ಜೂನ್ 30) ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿದೆ ಕೆಲಸ ಮಾಡಿದ್ದಾರೆ. ಕಮಲ್ ಹಾಸನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಅಮಿತಾಬ್ ಪಾತ್ರಕ್ಕೆ ಹೆಚ್ಚಿನ ತೂಕವಿದೆ. ಈಗಾಗಲೇ ಸೀಕ್ವೆಲ್‌ನ 60ರಷ್ಟು ಚಿತ್ರೀಕರಣ ನಡೆದಿದ್ದು ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.