ʼಬ್ಯಾಕ್ ಬೆಂಚರ್ಸ್ʼ ಚಿತ್ರತಂಡದಿಂದ ಹೋಳಿ ಹಾಡು ಬಿಡುಗಡೆ
x
ʼಬ್ಯಾಕ್ ಬೆಂಚರ್ಸ್ʼ ಚಿತ್ರತಂಡದಿಂದ ಹೋಳಿ ಹಾಡು ಬಿಡುಗಡೆಗೊಂಡಿದೆ.

ʼಬ್ಯಾಕ್ ಬೆಂಚರ್ಸ್ʼ ಚಿತ್ರತಂಡದಿಂದ ಹೋಳಿ ಹಾಡು ಬಿಡುಗಡೆ

‘ಬ್ಯಾಕ್ ಬೆಂಚರ್ಸ್’ ಚಿತ್ರದಿಂದ ಹೋಳಿ ಹಬ್ಬಕ್ಕಾಗಿ ಸುಮಧುರ ಹಾಡೊಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.


Click the Play button to hear this message in audio format

‘ಬ್ಯಾಕ್ ಬೆಂಚರ್ಸ್’ ಚಿತ್ರದಿಂದ ಹೋಳಿ ಹಬ್ಬಕ್ಕಾಗಿ ಸುಮಧುರ ಹಾಡೊಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಹೃದಯಶಿವ ಅವರು ಬರೆದಿರುವ ಈ ಹಾಡನ್ನು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಹೋಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

‘ಬ್ಯಾಕ್ ಬೆಂಚರ್ಸ್’ ಚಿತ್ರ ನಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ.‌ ಆಡಿಷನ್ ಮೂಲಕ ಆಯ್ಕೆಯಾದ ಈ ಕಲಾವಿದರಿಗೆ ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಆನಂತರ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಬಿ.ಆರ್ ರಾಜಶೇಖರ್ ತಿಳಿಸಿದ್ದಾರೆ.

ಮನೊಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್, ಮಾನ್ಯ ಗೌಡ, ಕುಂಕುಮ್, ಅನುಷ ಸುರೇಶ್ ಮುಂತಾದವರಿದ್ದಾರೆ. ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

Read More
Next Story