ಮಂಸೋರೆ ನಿರ್ದೇಶನದ  ಆ್ಯಕ್ಟ್ 1978 ಸಿನಿಮಾ ಹಿಂದಿಯಲ್ಲಿ ರಿಮೇಕ್‌
x
ನಟಿ ಯಜ್ಞ ಶೆಟ್ಟಿ

ಮಂಸೋರೆ ನಿರ್ದೇಶನದ 'ಆ್ಯಕ್ಟ್ 1978' ಸಿನಿಮಾ ಹಿಂದಿಯಲ್ಲಿ ರಿಮೇಕ್‌

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದ ಸಿನಿಮಾ 'ಆ್ಯಕ್ಟ್ 1978' ಹಿಂದಿ ರಿಮೇಕ್‌ಗೆ ಮಾತುಕತೆ ನಡೆಯುತ್ತಿದೆ.


Click the Play button to hear this message in audio format

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದ ಸಿನಿಮಾ 'ಆ್ಯಕ್ಟ್ 1978' ಹಿಂದಿ ರಿಮೇಕ್‌ಗೆ ಮಾತುಕತೆ ನಡೆಯುತ್ತಿದೆ.

2020ರಲ್ಲಿ ಬಿಡುಗಡೆಯಾಗ ಆಕ್ಟ್ 1978 ಚಿತ್ರವು ಅಧಿಕಾರಿಶಾಹಿ ಮತ್ತು ಭ್ರಷ್ಟಾಚಾರದಿಂದ ಬೇಸತ್ತು ಅನ್ಯಾಯಗಳನ್ನು ಮೆಟ್ಟಿ ನಿಂತು ಧೈರ್ಯದಿಂದ ಹೋರಾಡುವ ಗರ್ಭಿಣಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಚಿತ್ರವು ಅದರ ನಿರೂಪಣೆ ಮತ್ತು ಉತ್ತಮ ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದೆ. ಇದೀಗ ಈ ಸಿನಿಮಾ ಹಿಂದಿ ರೂಪಾಂತರದ ವಿಚಾರದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

ಸದ್ಯ ತಮ್ಮ ಕನ್ನಡ ಚಲನಚಿತ್ರ 'ಆ್ಯಕ್ಟ್ 1978' ರ ಸಂಭಾವ್ಯ ಹಿಂದಿ ರೀಮೇಕ್ ಕುರಿತು ನಿರ್ದೇಶಕರು ಮಾತುಕತೆ ನಡೆಸುತ್ತಿದ್ದಾರೆ. ಮಂಸೋರೆ ಅವರು ಹೊಸ ನಟರ ಗುಂಪು ಮತ್ತು ಹೊಸ ನಿರ್ಮಾಣ ತಂಡದೊಂದಿಗೆ ಕೆಲಸ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದು, ಹಿಂದಿ ಮಾತನಾಡುವ ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ಹಿಂದಿ ರೀಮೇಕ್‌ನ ಹಕ್ಕುಗಳನ್ನು ನಿರ್ಮಾಪಕ ನೀರಜ್ ತಿವಾರಿ ಖರೀದಿಸಿದ್ದಾರೆ.

ಚಿತ್ರದ ಮೂಲ ಪಾತ್ರವರ್ಗದಲ್ಲಿ ಯಜ್ಞ ಶೆಟ್ಟಿ, ಸಂಚಾರಿ ವಿಜಯ್, ಶ್ರುತಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತು ದತ್ತಣ್ಣ ನಟಿಸಿದ್ದರು. ಹಿಂದಿ ಆವೃತ್ತಿಗೆ ಹೊಸ ಸೃಜನಶೀಲ ಆಯಾಮ ಒದಗಿಸುವುದರ ಜೊತೆಗೆ ಮೂಲ ನಿರೂಪಣೆಯ ಸಾರವನ್ನು ಕಾಪಾಡುವುದು ನಿರ್ದೇಶಕರ ಗುರಿಯಾಗಿದೆ.

Read More
Next Story