‘ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕʼ ಆಗಿ ಹರ್ಷಿತಾ ಆಯ್ಕೆ
x
‘ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕʼ ಆಗಿ ಹರ್ಷಿತಾ ಆಯ್ಕೆಯಾಗಿದ್ದಾರೆ.

‘ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕʼ ಆಗಿ ಹರ್ಷಿತಾ ಆಯ್ಕೆ

‘ಗೋಲ್ಡನ್ ಫೇಸ್ ಆಫ್ ಸೌಥ್ ಇಂಡಿಯಾ’ ಸ್ಪರ್ಧೆಯಲ್ಲಿ ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕ ಆಗಿ ಹರ್ಷಿತಾ ವಿಜೇತರಾಗಿದ್ದಾರೆ.


Click the Play button to hear this message in audio format

ಚೆನ್ನೈನಲ್ಲಿ ಇತ್ತೀಚೆಗೆ ನಡೆದ ‘ಗೋಲ್ಡನ್ ಫೇಸ್ ಆಫ್ ಸೌಥ್ ಇಂಡಿಯಾ’ ಸ್ಪರ್ಧೆಯಲ್ಲಿ ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕ ಆಗಿ ಹರ್ಷಿತಾ ವಿಜೇತರಾಗಿದ್ದಾರೆ.

ಆ್ಯಸಿಡ್ ದಾಳಿಗೆ ತುತ್ತಾದವರಿಗೆ ಚರ್ಮ ದಾನ ಮಾಡುವಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಂಡೋ ಎಂಟರ್ಟೈನ್ಮೆಂಟ್ಸ್, ಗೋಪಿನಾಥ್ ರವಿ ಮತ್ತು ಶರವಣನ್ ಹಾಗೂ ಎಸಿಟಿಸಿ ಸ್ಟುಡಿಯೋದ ಹೇಮಂತ್ ಜಂಟಿಯಾಗಿ ಚೆನ್ನೈನ ಹಿಲ್ಟನ್ ಹೋಟೇಲ್‌ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದ್ದರು.

ಈ ಸ್ಪರ್ಧೆಯಲ್ಲಿ ನಟಿಯರಾದ ಆ್ಯಮಿ ಜಾಕ್ಸನ್ ಮತ್ತು ಶ್ರೇಯಾ ಶರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರ ಜೊತೆಗೆ ವಿಂಡೋ ಎಂಟರ್ಟೈನ್ಮೆಂಟ್ನ ಮುಖ್ಯಸ್ಥ ಹಾಗೂ ಜನಪ್ರಿಯ ನಿರ್ದೇಶಕ ಎ.ಎಲ್. ವಿಜಯ್, ಸ್ಪರ್ಧೆಯ ರಾಯಭಾರಿ ಪಾರ್ವತಿ ನಾಯರ್ ಹಾಜರಿದ್ದರು.

ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಕೇರಳದಿಂದ 1000ಕ್ಕೂ ಹೆಚ್ಚು ಸ್ಪರ್ಧಿಗಳು ಈ ಭಾಗವಹಿಸಿದ್ದರು. ಹಲವು ಸುತ್ತುಗಳ ಬಳಿಕ ಫೈನಲ್ಸ್ ಸುತ್ತಿಗೆ 51 ಸ್ಪರ್ಧಿಗಳು ಅಂತಿಮವಾಗಿದ್ದು, ಅದರಲ್ಲಿ ಹಲವು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಪೈಕಿ, ಕರ್ನಾಟಕದ ಹರ್ಷಿತಾ ಎ, ‘ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕʼ ಆಗಿ ಆಯ್ಕೆಯಾಗಿದ್ದಾರೆ.

Read More
Next Story