
ವಿಶ್ವದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸಿಂಗರ್ ನಿಕ್ ಜೋನಾಸ್ ದಂಪತಿ ಮೋಡಿ ಮಾಡಿದ್ದಾರೆ.
Golden Globes 2026|ಪ್ರಿಯಾಂಕಾ-ನಿಕ್ ಜೋಡಿಯ ಮೋಡಿ ನೋಡಿ....
ವಿಶ್ವದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸಿಂಗರ್ ನಿಕ್ ಜೋನಾಸ್ ದಂಪತಿ ಮಿಂಚಿದ್ದಾರೆ.
ಗೋಲ್ಡನ್ ಗ್ಲೋಬ್ಸ್ 2026ರ ರೆಡ್ ಕಾರ್ಪೆಟ್ ಮೇಲೆ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಮಿಂಚಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ನಡೆದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಪ್ರಿಯಾಂಕಾ ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಧರಿಸಿದ್ದ ಗಾಢ ನೀಲಿ ಬಣ್ಣದ 'ಡಿಯೋರ್' ಬ್ರ್ಯಾಂಡ್‌ನ ಸ್ಟ್ರಾಪ್‌ಲೆಸ್ ಗೌನ್ ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು. ಅತಿ ಆಡಂಬರವಿಲ್ಲದಿದ್ದರೂ ಅತ್ಯಂತ ಆಕರ್ಷಕವಾಗಿ ಕಾಣುತ್ತಿದ್ದ ಈ ಉಡುಪಿನಲ್ಲಿ ಪ್ರಿಯಾಂಕಾ ಅವರ ವ್ಯಕ್ತಿತ್ವ ಎದ್ದು ಕಾಣುತ್ತಿತ್ತು.
ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸಿಂಗರ್ ನಿಕ್ ಜೋನಾಸ್ ದಂಪತಿ ಕಾರ್ಯಕ್ರಮಕ್ಕೆ ಒಟ್ಟಾಗಿ ಆಗಮಿಸಿದ ಈ ಪವರ್ ಕಪಲ್, ನೆರೆದಿದ್ದವರ ಕಣ್ಮನ ಸೆಳೆದಿದ್ದಾರೆ.
ಪ್ರಿಯಾಂಕಾ ಚೋಪ್ರಾ ತಮ್ಮ ಎಂದಿನ ಶೈಲಿಯಲ್ಲಿ ಮುಗುಳ್ನಗುತ್ತಾ, ಅಭಿಮಾನಿಗಳಿಗೆ 'ನಮಸ್ತೆ' ಎನ್ನುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮೆರೆದರೆ, ನಿಕ್ ಜೋನಾಸ್ ಕಪ್ಪು ಬಣ್ಣದ ಕ್ಲಾಸಿಕ್ ಟುಕ್ಸೆಡೊದಲ್ಲಿ ಅತ್ಯಂತ ಸ್ಮಾರ್ಟ್ ಆಗಿ ಕಾಣಿಸಿಕೊಂಡರು.
ಕ್ಯಾಮೆರಾ ಕಣ್ಣುಗಳು ಈ ಜೋಡಿಯನ್ನೇ ಬೆನ್ನತ್ತಿದ್ದವು. ಕೇವಲ ಪ್ರಚಾರಕ್ಕಾಗಿ ಪೋಸ್ ನೀಡದೆ, ಅತ್ಯಂತ ಸಹಜವಾಗಿ ಮತ್ತು ಪ್ರೀತಿಯಿಂದ ಒಬ್ಬರಿಗೊಬ್ಬರು ಸ್ಪಂದಿಸುತ್ತಿದ್ದ ಈ ದಂಪತಿಯನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು.
ಈ ನಡುವೆ ಎಲ್ಲರ ಗಮನ ಸೆಳೆದದ್ದು ಪ್ರಿಯಾಂಕಾ ಅವರ ಒಂದು ಪುಟ್ಟ ನಡೆ. ಫೋಟೋಗಳಿಗೆ ಪೋಸ್ ನೀಡುವ ಸಂದರ್ಭದಲ್ಲಿ ಪ್ರಿಯಾಂಕಾ ಅವರು ಪತಿ ನಿಕ್ ಅವರ ಬೋ-ಟೈ ಅನ್ನು ಪ್ರೀತಿಯಿಂದ ಸರಿಪಡಿಸಿದರು.
ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಈ ದೇಸಿ ಗರ್ಲ್ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದು, ವಾರಣಾಸಿಯಲ್ಲಿ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಎಷ್ಟು ಮುದ್ದಾದ ಜೋಡಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

