Kannada Cinema:  ರಿಷಿ ನಟನೆಯ  ‘ಮಂಗಳಾಪುರಂ’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ
x

ಮಂಗಳಾಪುರಂ ಸಿನಿಮಾದ ಫಸ್ಟ್‌ಲುಕ್‌ 

Kannada Cinema: ರಿಷಿ ನಟನೆಯ ‘ಮಂಗಳಾಪುರಂ’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

ಟೈಟಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ‘ಮಂಗಳಾಪುರಂ’ ಸಿನಿಮಾದ ಕುತೂಹಲ ಹೆಚ್ಚಿದ್ದು, ಈ ಸಿನಿಮಾದಲ್ಲಿ ರಿಷಿ ಜೊತೆಗೆ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಕೂಡ ನಟಿಸುತ್ತಾರೆ ಎಂಬುದು ವಿಶೇಷ.


‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಮುಂತಾದ ಸಿನಿಮಾಗಳ ಮೂಲಕ ಹೆಸರು ಮಾಡಿದ ನಟ ರಿಷಿ ಇದೀಗ ‘ಮಂಗಳಾಪುರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಸಿನಿಪ್ರಿಯರಿಗೆ ಕೂತೂಹಲ ಹೆಚ್ಚಿಸಿದೆ.

ಈ ಸಿನಿಮಾವನ್ನು ತುಳು ಭಾಷೆಯಲ್ಲಿ ‘ಉಮಿಲ್’ ಮತ್ತು ‘ದೊಂಬರಾಟ’ ಸಿನಿಮಾಗಳನ್ನು ನಿರ್ದೇಶಿಸಿರುವ ರಂಜಿತ್ ರಾವ್ ಸುವರ್ಣ ನಿರ್ದೇಶನ ಮಾಡಲಿದ್ದಾರೆ. ಟೈಟಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ‘ಮಂಗಳಾಪುರಂ’ ಸಿನಿಮಾದ ಕುತೂಹಲ ಹೆಚ್ಚಿದ್ದು, ಈ ಸಿನಿಮಾದಲ್ಲಿ ರಿಷಿ ಜೊತೆಗೆ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಕೂಡ ನಟಿಸುತ್ತಾರೆ ಎಂಬುದು ವಿಶೇಷ.

ಈ ಸಿನಿಮಾದಲ್ಲಿ ಮರ್ಡರ್ ಮಿಸ್ಟರಿ ಕತೆ ಇರಲಿದೆ. ಅಷ್ಟೇ ಅಲ್ಲದೇ ನಂಬಿಕೆ-ಮೂಢನಂಬಿಕೆ, ಕೈವಾಡ-ಪವಾಡ ಮುಂತಾದ ವಿಷಯಗಳ ಕುರಿತು ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ವಿದ್ವಾನ್ ಪ್ರಸನ್ನ ತಂತ್ರಿ ಮೂಡುಬಿದ್ರೆ ಮತ್ತು ರಾಮ್ ಪ್ರಸಾದ್ ಅವರು ‘ಮಂಗಳಾಪುರಂ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಜೂನ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದ್ದು, ತೀರ್ಥಹಳ್ಳಿ‌, ಕಾರ್ಕಳ, ಮಡಿಕೇರಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾಗೆ ಅನೂಪ್ ಸಿಳೀನ್ ಅವರು ಸಂಗೀತ ನೀಡಲಿದ್ದಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡಲಿದ್ದಾರೆ.

Read More
Next Story