ಮರಳಿ ಮಣ್ಣಿಗೆ ಕಥೆ ಹೇಳುವ ‘ಡಂಕಿ’ ಸಿನಿಮಾ: ಶಾರುಖ್ ಖಾನ್
ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಬಿಡುಗಡೆಯಾಗಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಮರಳಿ ಮಣ್ಣಿಗೆ ಕಥೆಯನ್ನು ಹೇಳುತ್ತದೆ.
ದುಬೈ: ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ನಟ ಶಾರುಖ್ ಖಾನ್ ಅವರ ಕಾಂಬಿನೇಷನ್‌ನ ‘ಡಂಕಿ’ ಸಿನಿಮಾ ತೆರೆಗೆ ಬಂದಿದ್ದು, ಈ ಸಿನಿಮಾ ತಾಯ್ನಾಡು ಮತ್ತು ಕುಟುಂಬವನ್ನು ಪ್ರೀತಿಸುವ ಕಥಾಹಂದರವನ್ನು ಹೊಂದಿದ್ದು,ಇದು ನನ್ನ ಜೀವನದ ಬೆಸ್ಟ್ ಸಿನಿಮಾ ಎಂದು ನಟ ಶಾರುಖ್ ಖಾನ್ ಹೇಳಿದ್ದಾರೆ.
ಸ್ನೇಹ, ಗಡಿ, ಮನೆ ಮತ್ತು ಪ್ರೀತಿಯ ಹಂಬಲದ ಬಗ್ಗೆ ತಿಳಿಸಿರುವ ಈ ಸಿನಿಮಾ ಹಾಸ್ಯ ಆಧಾರಿತವಾಗಿದೆ. ನಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಮನೆಯಿಂದ ಹೊರನಡೆಯಬೇಕಾಗುತ್ತದೆ. ಆದರೆ ಮನೆಯನ್ನು ಹೆಚ್ಚು ಪ್ರೀತಿಸತೊಡಗುತ್ತೇವೆ. ಹಾಗೆ ಮನೆಯ ಹಂಬಲದೊಂದಿಗೆ ಮತ್ತೆ ಮನೆಗೆ ಮರಳುವುದರ ಬಗ್ಗೆ ಈ ಸಿನಿಮಾ ಮೂಡಿಬಂದಿದ್ದು, ನೀವು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ವಾಸಿಸಬಹುದು, ಆದರೆ ಕೊನೆಗೆ ನಿಮ್ಮ ಮಣ್ಣಿಗೆ ನೀವು ವಾಪಾಸ್ಸಾಗಬೇಕಾಗುತ್ತದೆ ಎಂದು ದುಬೈನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಟ ಹೇಳಿದರು.
"ಪಠಾನ್" ಮತ್ತು "ಜವಾನ್" ನಲ್ಲಿ ಬ್ಯಾಕ್-ಟು-ಬ್ಯಾಕ್ ಆಕ್ಷನ್ ಬ್ಲಾಕ್‌ಬಸ್ಟರ್‌ಗಳ ಸಿನಿಮಾಗಳ ಪೈಕಿ ಈ ಸಿನಿಮಾ ಶಾರುಕ್ ಅವರ 2023ರ ಮೂರನೇ ಮತ್ತು ಕೊನೆಯ ಬಿಡುಗಡೆ ಸಿನಿಮಾವಾಗಿದೆ.
ನಾನು ಜವಾನ್ ಮತ್ತು ಪಠಾನ್ ಸಿನಿಮಾ ಮಾಡುವಾಗ ಸಿನಿಮಾ ಹುಡುಗ, ಹುಡುಗಿಯರಿಗೋಸ್ಕರ ಸಿನಿಮಾ ಮಾಡಿದ್ದೆ ಎಂದು ಅನಿಸುತ್ತಿತ್ತು. ಆದರೆ ಡಂಕಿ ಸಿನಿಮಾ ನನಗಾಗಿ ಮಾಡಿದ್ದೇನೆ. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಈ ವರ್ಷ ನೀವು ನೋಡಿದ ಎಲ್ಲಾ ಚಲನಚಿತ್ರಗಳನ್ನು ನನ್ನ ಹೃದಯದಿಂದ ಮಾಡಿದ್ದೇನೆ. ಈ ವರ್ಷವು 'ಪಠಾಣ್' ನೊಂದಿಗೆ ಪ್ರಾರಂಭವಾಯಿತು. ಈ ವರ್ಷವನ್ನು ನನಗಾಗಿ ಒಂದು ಚಲನಚಿತ್ರದೊಂದಿಗೆ ಮುಗಿಸಲು ಬಯಸುತ್ತೇನೆ. ಹಾಗಾಗಿ ಡಿಸೆಂಬರ್ 21 ರಂದು ನನಗಾಗಿ 'ಡಂಕಿ' ನೋಡಿ. ಈ ಸಿನಿಮಾ ನಿಮ್ಮ ಹೃದಯವನ್ನು ಸ್ಪರ್ಶಿಸುತ್ತದೆ ಎಂದರು.
ಇನ್ನು "ಡಂಕಿ" ಚಿತ್ರದಲ್ಲಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ಇದ್ದಾರೆ.
ತಾಪ್ಸಿ ಪನ್ನು ಅದ್ಭುತವಾದ ಆಕ್ಟರ್ ಎಂದು ಕರೆದಿರುವ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದು ಬಹಳ ಸಂತೋಷವಾಗಿದೆ. ವಿಕ್ಕಿ ಕೌಶಲ್ ನನ್ನ ಉತ್ತಮ ಗೆಳೆಯ. ಕತ್ರೀನ ಕೈಫ್ ಅವರನ್ನು ಮದುವೆ ಆಗಿದ್ದಾರೆ. ವಿಕ್ಕಿ ತಂದೆ ಶ್ಯಾಮ್ ನನಗೆ ಹಲವು ವರ್ಷಗಳಿಂದ ಪರಿಚಯ. ವಿಕ್ಕಿ ಒಬ್ಬ ಉತ್ತಮ ನಟನಾಗಿದ್ದು, ಡಂಕಿ ಸಿನಿಮಾದಲ್ಲಿ ಅವರ ನಟನೆಯನ್ನು ನೀವು ಆರಾಧಿಸುತ್ತೀರಿ. ನಾನು ಅವರಿಂದ ಬಹಳಷ್ಟು ಕಲಿತುಕೊಂಡಿದ್ದೇನೆ ಎಂದರು.
ಹಿರಾನಿ ದೇಶದ ಒಬ್ಬ ಬೆಸ್ಟ್ ಡೈರೆಕ್ಟರ್. ನಾವೆಲ್ಲ ಅವರಿಗೆ ಪ್ರೀತಿ ಮತ್ತು ಗೌರವ ನೀಡಬೇಕು. ಯಾಕೆಂದರೆ ಬಹಳಷ್ಟು ಬೆಸ್ಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ ಎಂದು ನಟ ಹೇಳಿದರು.