ಮತ್ತೆ ಅಖಾಡಕ್ಕೆ ಸೂರಿ; ದುನಿಯಾ ವಿಜಯ್‌ ಪುತ್ರಿ ರಿತನ್ಯಾ-ಯುವ ರಾಜ್‌ಕುಮಾರ್‌ಗೆ ನಿರ್ದೇಶನ
x

ಮತ್ತೆ ಅಖಾಡಕ್ಕೆ ಸೂರಿ; ದುನಿಯಾ ವಿಜಯ್‌ ಪುತ್ರಿ ರಿತನ್ಯಾ-ಯುವ ರಾಜ್‌ಕುಮಾರ್‌ಗೆ ನಿರ್ದೇಶನ

ಈ ಚಿತ್ರದಲ್ಲಿ ಯುವ ರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ‘ದುನಿಯಾ’ ವಿಜಯ್‍ ಮಗಳು ರಿತನ್ಯಾ ನಟಿಸುತ್ತಿದ್ದಾರೆ. ವಿಶೇಷವೆಂದರೆ, ‘ದುನಿಯಾ’ ಚಿತ್ರದ ಮೂಲಕ ವಿಜಯ್‍ ಅವರನ್ನು ಹೀರೋ ಮಾಡಿದ್ದ ಸೂರಿ, ಈ ಚಿತ್ರದಲ್ಲಿ ವಿಜಯ್‍ ಅವರ ಮಗಳು ರಿತನ್ಯಾಳನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಅಭಿಷೇಕ್‍ ಅಂಬರೀಶ್‍ ಅಭಿನಯದ ‘ಬ್ಯಾಡ್‍ ಮ್ಯಾನರ್ಸ್’ ಬಿಡುಗಡೆಯಾದ ನಂತರ ನಿರ್ದೇಶಕ ಸೂರಿ ಸುದ್ದಿಯೇ ಇರಲಿಲ್ಲ. ಯುವ ರಾಜಕುಮಾರ್ ಮತ್ತು ವಿರಾಟ್‍ ಅಭಿನಯದಲ್ಲಿ ಅವರೊಂದು ಚಿತ್ರ ನಿರ್ದೇಶಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿತ್ತಾದರೂ, ಚಿತ್ರ ಶುರುವಾಗಿರಲಿಲ್ಲ. ಈಗ ಚಿತ್ರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.

ಈ ಚಿತ್ರದಲ್ಲಿ ಯುವ ರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ‘ದುನಿಯಾ’ ವಿಜಯ್‍ ಮಗಳು ರಿತನ್ಯಾ ನಟಿಸುತ್ತಿದ್ದಾರೆ. ವಿಶೇಷವೆಂದರೆ, ‘ದುನಿಯಾ’ ಚಿತ್ರದ ಮೂಲಕ ವಿಜಯ್‍ ಅವರನ್ನು ಹೀರೋ ಮಾಡಿದ್ದ ಸೂರಿ, ಈ ಚಿತ್ರದಲ್ಲಿ ವಿಜಯ್‍ ಅವರ ಮಗಳು ರಿತನ್ಯಾಳನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಬುಧವಾರ, ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ‘ದುನಿಯಾ’ ವಿಜಯ್‍ ಕ್ಲ್ಯಾಪ್‌ ಮಾಡಿದ್ದು, ಪುನೀತ್ ರಾಜಕುಮಾರ್‍ ಅವರ ಮಗಳು ಧೃತಿ ಪುನೀತ್ ರಾಜಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಸದ್ಯ ಚಿತ್ರದ ಮುಹೂರ್ತವಾಗಿದ್ದು, ಮೇ ತಿಂಗಳ ಕೊನೆಯಲ್ಲಿ ಈ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಸೂರಿ ಚಿತ್ರಗಳಿಗೆ ಕೆಲಸ ಮಾಡುವ ಖಾಯಂ ತಂತ್ರಜ್ಞರ ತಂಡವೇ ಇಲ್ಲೂ ಕೆಲಸ ಮಾಡುತ್ತಿದ್ದು, ಈ ಚಿತ್ರಕ್ಕೂ ದೀಪು ಎಸ್‌. ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಶೇಖರ್‌ ಛಾಯಾಗ್ರಹಣವಿರಲಿದೆ.

ಯುವ ಅಭಿನಯದ ‘ಎಕ್ಕ’ ಚಿತ್ರವು ಜೂನ್‍ 06ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ PRK ಪ್ರೊಡಕ್ಷನ್ಸ್, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ KRG ಸ್ಟುಡಿಯೋಸ್‍ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಸಂಸ್ಥೆಗಳು ಜೊತೆಯಾಗಿ ನಿರ್ಮಿಸುತ್ತಿವೆ. ಈಗ ಈ ಮೂರು ಸಂಸ್ಥೆಗಳು ಈ ಹೊಸ ಚಿತ್ರಕ್ಕೂ ಹಣ ಹೂಡುತ್ತಿವೆ.

ಯುವ ಅಭಿನಯದ ಮೂರನೆಯ ಚಿತ್ರ ಇದು. ಕಳೆದ ವರ್ಷ ಬಿಡುಗಡೆಯಾದ ‘ಯುವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ, ಇದೀಗ ರೋಹಿತ್‍ ಪದಕಿ ನಿರ್ದೇಶನದ ‘ಎಕ್ಕ’ ಮುಗಿಸಿ, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇನ್ನು, ರಿತನ್ಯಾಗೆ ಇದು ಎರಡನೇ ಚಿತ್ರ. ಕಳೆದ ವರ್ಷ ಸೆಟ್ಟೇರಿದ ‘ಲ್ಯಾಂಡ್‍ ಲಾರ್ಡ್’ ಚಿತ್ರದ ಮೂಲಕ ರಿತನ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Read More
Next Story