
ದುಲ್ಕರ್ ಚಿತ್ರಕ್ಕೆ ತೆಲುಗು ಹುಡುಗಿ ಸಾತ್ವಿಕ ವೀರವಲ್ಲಿ
ದುಲ್ಕರ್ ಸಲ್ಮಾನ್ 'ಆಕಾಶಮ್ಲೋ ಒಕ ತಾರಾ' ಸಿನಿಮಾದಲ್ಲಿ ಸಾತ್ವಿಕ ವೀರ ಹೊಸ ನಾಯಕಿ
ತೆಲುಗು ಮೂಲದ ಪ್ರತಿಭೆ ಸಾತ್ವಿಕ ವೀರವಲ್ಲಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ವೀಡಿಯೋದಲ್ಲಿ ನಕ್ಷತ್ರಗಳನ್ನು ಮುಟ್ಟಬೇಕೆಂಬ ಹಂಬಲವುಳ್ಳ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಮಲಯಾಳಂ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ ದುಲ್ಕರ್ ಸಲ್ಮಾನ್ ಮತ್ತೊಮ್ಮೆ ತಮ್ಮ ವಿಭಿನ್ನ ಕಥೆಯ ಆಯ್ಕೆಯ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಖ್ಯಾತ ನಿರ್ದೇಶಕ ಪವನ್ ಸಾದಿನೇನಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆಕಾಶಮ್ಲೋ ಒಕ ತಾರಾ' ಚಿತ್ರದ ಕುರಿತಾದ ಹೊಸ ಅಪ್‌ಡೇಟ್ ಈಗ ಸಿನಿರಂಗದಲ್ಲಿ ಸದ್ದು ಮಾಡುತ್ತಿದೆ.
ಈ ಸಿನಿಮಾವನ್ನು ಸಂದೀಪ್ ಗುಣ್ಣಂ ಮತ್ತು ರಮ್ಯಾ ಗುಣ್ಣಂ ಅವರು 'ಲೈಟ್ ಬಾಕ್ಸ್ ಮೀಡಿಯಾ' ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ 'ಗೀತಾ ಆರ್ಟ್ಸ್' ಮತ್ತು 'ಸ್ವಪ್ನಾ ಸಿನಿಮಾಸ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಚಿತ್ರದ ಕಥೆಗೆ ಪೂರಕವಾಗಿರುವಂತೆ ತೆಲುಗು ಹುಡುಗಿ ಸಾತ್ವಿಕ ವೀರವಲ್ಲಿ ಈ ಸಿನಿಮಾದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಪರಿಚಯಾತ್ಮಕ ವೀಡಿಯೋದಲ್ಲಿ ಹಳ್ಳಿಯ ಹಿನ್ನೆಲೆಯ ಸೌಂದರ್ಯ ಮತ್ತು ನಕ್ಷತ್ರಗಳನ್ನು ಮುಟ್ಟಬೇಕೆಂಬ ಆಕೆಯ ಆಸೆಯ ತುಣುಕು ತೋರಿಸಲಾಗಿದೆ.
ಚಿತ್ರದ ಕೊನೆಯಲ್ಲಿ ಬರುವ ದುಲ್ಕರ್ ಸಲ್ಮಾನ್ ಅವರ ಸಣ್ಣ ಝಲಕ್ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುವಂತಿದೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಕ್ಕೆ ಇದೆ.
ಮೂಸೌಕರ್ಯಗಳಿಲ್ಲದ ಕುಗ್ರಾಮವೊಂದರ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದ್ದು, ಕನಸುಗಳ ಬೆನ್ನಟ್ಟುವ ಕಥಾಹಂದರವನ್ನು ಹೊಂದಿದೆ. ಈಗಾಗಲೇ ಚಿತ್ರದ ಶೇಕಡಾ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯದಲ್ಲೇ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮಮ್ಮುಟ್ಟಿ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟರೂ, ದುಲ್ಕರ್ ಸಲ್ಮಾನ್ ಇಂದು ತಮ್ಮದೇ ಆದ ಪ್ರತಿಭೆಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ಸಿಕ್ಕಿರುವ ಯಶಸ್ಸು ಮತ್ತು ಅಭಿಮಾನಿ ಬಳಗ ಯಾವ ಪರಭಾಷಾ ನಟನಿಗೂ ಸಿಕ್ಕಿಲ್ಲ. ಕೇವಲ ಡಬ್ಬಿಂಗ್ ಸಿನಿಮಾಗಳ ಮೂಲಕ ಮಾತ್ರವಲ್ಲದೆ, ನೇರ ತೆಲುಗು ಚಿತ್ರಗಳ ಮೂಲಕವೂ ಅವರು ಟಾಲಿವುಡ್‌ನಲ್ಲಿ ಗಟ್ಟಿ ಸ್ಥಾನವನ್ನು ಕಂಡುಕೊಂಡಿದ್ದಾರೆ.
ಹಿರಿಯ ನಟಿ ಸಾವಿತ್ರಿ ಅವರ ಜೀವನ ಆಧಾರಿತ ಈ ಸಿನಿಮಾದಲ್ಲಿ ದುಲ್ಕರ್ ಅವರು ಜೆಮಿನಿ ಗಣೇಶನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು.
ದುಲ್ಕರ್ ಅವರ ತೆಲುಗು ಸಿನಿಮಾದ ಪಯಣ ಆರಂಭವಾಗಿದ್ದು, 2018ರಲ್ಲಿ ತೆರೆಕಂಡ ಸಿನಿಮಾ 'ಮಹಾನಟಿ'. ಹಿರಿಯ ನಟಿ ಸಾವಿತ್ರಿ ಅವರ ಜೀವನ ಆಧಾರಿತ ಈ ಸಿನಿಮಾದಲ್ಲಿ ದುಲ್ಕರ್ ಅವರು ಜೆಮಿನಿ ಗಣೇಶನ್ ಅವರ ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇದಾದ ಬಳಿಕ 2022ರಲ್ಲಿ ಬಿಡುಗಡೆಯಾದ 'ಸೀತಾ ರಾಮಂ' ಸಿನಿಮಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಲೆಫ್ಟಿನೆಂಟ್ ರಾಮ್ ಪಾತ್ರದಲ್ಲಿ ಅವರ ನಟನೆ ಮತ್ತು ಮೃಣಾಲ್ ಠಾಕೂರ್ ಜೊತೆಗಿನ ಕೆಮಿಸ್ಟ್ರಿ ಪ್ರೇಕ್ಷಕರ ಕಣ್ಮನ ಸೆಳೆಯಿತು. ಈ ಚಿತ್ರವು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಭಾರಿ ಹಿಟ್ ಆಯಿತು.
'ಸೀತಾ ರಾಮಂ' ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಲಿಫ್ಟಿನೆಂಟ್ ರಾಮ್ ಪಾತ್ರದಲ್ಲಿ ಅವರ ನಟನೆ ಮತ್ತು ಮೃಣಾಲ್ ಠಾಕೂರ್ ಜೊತೆಗಿನ ಕೆಮಿಸ್ಟ್ರಿ ಪ್ರೇಕ್ಷಕರ ಕಣ್ಮನ ಸೆಳೆಯಿತು.
2004ರಲ್ಲಿ ತೆರೆಕಂಡ 'ಲಕ್ಕಿ ಭಾಸ್ಕರ್' ಚಿತ್ರದ ಮೂಲಕ ದುಲ್ಕರ್ ಮತ್ತೊಂದು ದೊಡ್ಡ ಯಶಸ್ಸನ್ನು ದಾಖಲಿಸಿದ್ದಾರೆ. ಬ್ಯಾಂಕ್ ಉದ್ಯೋಗಿಯೊಬ್ಬನ ಜೀವನದ ಏಳುಬೀಳುಗಳ ಕಥೆ ಹೊಂದಿದ್ದ ಈ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಯಿತು. ಕಮಲ್ ಹಾಸನ್ ಅವರ ನಂತರ ತೆಲುಗಿನಲ್ಲಿ ಸತತ ಯಶಸ್ಸು ಕಂಡ ಪರಭಾಷಾ ನಟ ಎಂಬ ಹೆಗ್ಗಳಿಕೆಗೆ ದುಲ್ಕರ್ ಪಾತ್ರರಾಗಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ 'ಆಕಾಶಮ್ಲೋ ಒಕ ತಾರಾ' ಚಿತ್ರದ ಮೂಲಕ ಅವರು ತೆಲುಗಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

